ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಅಭಿಮಾನಿಗಳು ಮೆಚ್ಚಿದ ಬೆಳಗಾವಿಯ ರೈತ

|
Google Oneindia Kannada News

ಬೆಳಗಾವಿ, ಡಿಸೆಂಬರ್ 21 : 'ಪರೋಪಕಾರಂ ಇದಂ ಶರೀರಂ' ಎಂಬ ಮಾತಿನಂತೆ ಬದುಕುತ್ತಿದ್ದಾರೆ ಬೆಳಗಾವಿ ರೈತ ಲಕ್ಷ್ಮಣ ರುಕ್ಮಾನೆ ಕಟಂಬೆಲೆ ಅವರು. ಸಮಾಜ ಸೇವೆ, ಪರೋಪಕಾರ ಇವರು ಉಸಿರು. ಕೆಲವು ದಿನಗಳ ಹಿಂದೆ ಚೆನ್ನೈ ಪ್ರವಾಹದ ಸಂತ್ತಸ್ತರಿಗಾಗಿ 500 ರೂ. ದಾನ ಮಾಡಿದ್ದಾರೆ ಲಕ್ಷ್ಮಣ.

ಬೆಳಗಾವಿಯ ಕಡೋಳಿ ನಿವಾಸಿ ರೈತ ಲಕ್ಷ್ಮಣ ರುಕ್ಮಾನೆ ಕಟಂಬೆಲೆ ಅವರಿಗೆ 73ರ ಹರೆಯ. ಆದರೆ, ಸಮಾಜ ಸೇವೆ ಮಾಡುವ ಉತ್ಸಾಹ ಮಾತ್ರ ಬತ್ತಿಲ್ಲ. ಸುಮಾರು 3 ಎಕರೆ ಭೂಮಿಯಲ್ಲಿ ಕೃಷಿ ಮಾಡುವ ಲಕ್ಷ್ಮಣ ಅವರು, ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. [ಮೃತ ಪ್ರಾಣಿಗಳ ಆತ್ಮಕ್ಕೆ ಮುಕ್ತಿ ಕಾಣಿಸುವ ಬಂಧುವೇ ಉದಯಗಟ್ಟಿ]

belagavi

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಲಕ್ಷ್ಮಣ ಅವರ ಬೆಳೆ ನಾಶವಾಗಿದೆ. ಸುಮಾರು 25,000 ರೂ.ಸಾಲವನ್ನು ಅವರು ಪಾವತಿ ಮಾಡಬೇಕಾಗಿದೆ. ಆದರೆ, ತಾನು ಸಾಲದಲ್ಲಿದ್ದರೂ ಪರರಿಗೆ ಉಪಕಾರ ಮಾಡಬೇಕು ಎಂದು ಬದುಕು ಸಾಗಿಸುತ್ತಿದ್ದಾರೆ ರೈತ ಲಕ್ಷ್ಮಣ. [ಭರ್ತಿ ಮಳೆಯಲ್ಲೂ ಹಾಲು ಹಾಕಲು ಬಂದ ಮಹಿಳೆಗೆ ಸಲಾಂ!]

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ : ಲಕ್ಷ್ಮಣ ಅವರು ಪ್ರತಿ ವರ್ಷ ಕಡೋಳಿ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 1,500 ರೂ. ಬಹುಮಾನ ನೀಡುತ್ತಾರೆ. ಗ್ರಾಮದ ಕಮಲೇಶ್ವರ ದೇವಾಲಯಕ್ಕೆ 1.22 ಲಕ್ಷ ಬೆಲೆ ಬಾಳುವ ಬೆಳ್ಳಿ ವಿಗ್ರಹವನ್ನೂ ನೀಡಿದ್ದಾರೆ. [ಕಾಡಿನಲ್ಲಿನ ಲಟಾರಿ ಕಾರೇ ಸುಳ್ಯದ ಸಾಹುಕಾರನ 'ಅರಮನೆ']

ಕೆಲವು ದಿನಗಳ ಹಿಂದೆ ಚೆನ್ನೈ ಪ್ರವಾಸಹ ಸಂತ್ರಸ್ತರಿಗೆ 5000 ರೂ. ದೇಣಿಯನ್ನು ನೀಡಿದ್ದಾರೆ. ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗ ಲಕ್ಷ್ಮಣ ಅವರು 5000 ರೂ. ಸಹಾಯ ಮಾಡಿದ್ದರು. ಸರ್ಕಾರಿ ಶಾಲೆಯ ಕಾಪೌಂಡ್ ನಿರ್ಮಾಣಕ್ಕಾಗಿ 78,000 ರೂ.ದೇಣಿಗೆ ನೀಡಿದ್ದಾರೆ.

ಲಕ್ಷ್ಮಣ ಅವರಿಗೆ ಮಕ್ಕಳಿಲ್ಲ, ಐದು ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಜೀವನ ಸಾಗಿಸುವ ಅವರು, ಹೆಚ್ಚು ಹಣಕ್ಕಾಗಿ ಆಸೆ ಪಟ್ಟವರಲ್ಲ. ಇನ್ನೊಬ್ಬರಿಗೆ ಸಹಾಯ ಮಾಡುವುದರಲ್ಲೇ ನೆಮ್ಮದಿ ಕಂಡುಕೊಂಡಿದ್ದಾರೆ.

ಮೋದಿ ಅಭಿಮಾನಿಗಳಿಂದ ಮೆಚ್ಚುಗೆ : ಲಕ್ಷ್ಮಣ ರುಕ್ಮಾನೆ ಕಟಂಬೆಲೆ ಅವರ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳು ಮೆಚ್ಚಿದ್ದಾರೆ. PM Narendra Modi ಫೇಸ್‌ಬುಕ್ ಪುಟದಲ್ಲಿ ಲಕ್ಷ್ಮಣ ಅವರ ಸಮಾಜ ಸೇವೆಯ ಕುರಿತು ಬರೆದಿದ್ದಾರೆ.

English summary
Laxman Rukmanne Katambale (73) farmer from Kadoli village of Belagavi, Karnataka has always helped the poor and needy with his hard earned money from cultivating his three acres. Laxman donated Rs 5000 for the victims of Chennai floods.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X