ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಸ್ ಪೆಕ್ಟರ್ ಗೆ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಅವಾಜ್ ಹಾಕಿದ್ದೇಕೆ?

By Mahesh
|
Google Oneindia Kannada News

ಬೆಳಗಾವಿ, ಜುಲೈ 17: ಡಿವೈಎಸ್ಪಿಗಳ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷಗಳು ಕಿಡಿಕಾರುತ್ತಿರುವ ಸಂದರ್ಭದಲ್ಲೇ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಸಿಬಿ ಪಿಎಸ್‍ಐಯೊಬ್ಬರಿಗೆ ಅವಾಜ್ ಹಾಕಿರುವ ಘಟನೆ ದಾಖಲಾಗಿದೆ. ಫೋನ್ ಕರೆ ಮಾಡಿ ಜಪ್ತಿ ಮಾಡಿರುವ ಟ್ರಕ್ ಗಳನ್ನು ಬೀಡುವಂತೆ ಪಿಎಸ್‍ಐ ಉದಪ್ಪ ಕಟ್ಟಿಕಾರಗೆ ಅವಾಜ್ ಹಾಕಿದ್ದಾರೆ.

ಮರಳು ಲಾರಿ ಬಿಡುವ ವಿಚಾರದಲ್ಲಿ ಪಿಎಸ್‍ಐ ಉದಪ್ಪ ಕಟ್ಟಿಕಾರ ಅವರಿಗೆ ಕರೆ ಮಾಡಿದ ಲಕ್ಷ್ಮಿ ಅವರು ಅವಾಜ್ ಹಾಕಿದ್ದಾರೆ. ಆದರೆ, ಜಿಲ್ಲಾಧಿಕಾರಿ ಎನ್. ಜಯರಾಂ ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕಲು ನೀಡಿರುವ ಮಾರ್ಗದರ್ಶನದಂತೆ ನಾನು ನಡೆದುಕೊಂಡಿದ್ದೇನೆ ಎಂದು ಪಿಎಸ್ ಐ ಉದ್ದಪ್ಪ ಅವರು ಹೇಳಿದ್ದಾರೆ. [ಮಹಿಳಾ ಕಾಂಗ್ರೆಸ್ ಗೆ ಹೆಬ್ಬಾಳ್ಕರ್ ನೂತನ ಅಧ್ಯಕ್ಷೆ]

Laxmi Hebbalkar’s call to PSI lands her in a controversy

ಸಂಜೆ 6 ಗಂಟೆಯ ನಂತರ ಯಾವುದೇ ಮರಳು ಲಾರಿ ಸಾಗಿಸಬಾರದು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಈ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ 22 ಅಕ್ರಮ ಮರಳು ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದರು.[ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಪರಿಚಯ]

ಈ ಸಂಬಂಧ ಕರೆ ಮಾಡಿದ ಲಕ್ಷ್ಮಿ ಅವರು ಮರಳು ಲಾರಿ ತಡೆದಿದ್ದು ಯಾಕೆ? ನೀವ್ಯಾರು? ನೀವು ಎಲ್ಲಿದ್ದೀರಾ? ಈಗಲೇ ಬಂದು ನನ್ನನ್ನ ಭೇಟಿಯಾಗಿ ಎಂದು ಧಮಕಿ ಹಾಕಿದ್ದಾರೆ. ಇದಕ್ಕೆ ಪಿಎಸ್‍ಐ ನಾನು ನಿಮ್ಮನ್ನು ಯಾಕೆ ಭೇಟಿಯಾಗಬೇಕು ಎಂದು ಪ್ರಶ್ನಿಸಿದ್ದಕ್ಕೆ ಹೆಬ್ಬಾಳ್ಕರ್, ಯಾರ ಕಡೆಯಿಂದ ನಿಮಗೆ ಹೇಳಿಸಬೇಕು? ನಿಮಗೆ ಏನು ಮಾಡಬೇಕು? ಎಂದಿದ್ದಾರೆ.

'ಕ್ಷೇತ್ರದ ಜನರ ಹಿತದೃಷ್ಟಿಯಿಂದ ಪಿಎಸ್‍ಐ ಜತೆಗೆ ಮಾತನಾಡಿದ್ದೇನೆ. ಇದರಿಂದ ಸರ್ಕಾರಕ್ಕೆ ಯಾವುದೇ ಮುಜುಗರವಾಗಿಲ್ಲ. ಪಾಸ್ ಪಡೆದ ಲಾರಿಯನ್ನು ಜಪ್ತಿ ಮಾಡಿರುವುದು ಸರಿಯಲ್ಲ, ಉದ್ವೇಗದಲ್ಲಿ ನಮಗೆ ಬಂದು ಕಾಣುವಂತೆ ಹೇಳಿದ್ದು ನಿಜ. ಆದರೆ, ನನ್ನ ಕ್ಷೇತ್ರದ ಜನದ ಹಿತ ಕಾಯುವುದು ನನ್ನ ಕರ್ತವ್ಯ 'ಎಂದು ಲಕ್ಷ್ಮಿ ಹೆಬ್ಬಾಳಕಾರ್ ಅವರು ಖಾಸಗಿ ವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ.

English summary
Karnataka Pradesh Mahila Congress president Laxmi R. Hebbalkar has landed in another controversy by allegedly trying to use her position to pressure a police officer Siddappa to release trucks seized for transporting sand during banned hours in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X