ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೋರ್ಡ್ ಗಳಿಗೆ ಮಸಿ ಬಳಿದ ಕರವೇ ಕಾರ್ಯಕರ್ತರು

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಕೂಗು ಪ್ರತಿ ಕನ್ನಡ ರಾಜ್ಯೋತ್ಸವದಲ್ಲೂ ಏಳುತ್ತಿದ್ದು, ಎಂಇಎಸ್‌ನ ಮೇಯರ್ ಶಾಂತಾ ಪಾಟೀಲ್ ಮತ್ತು ಉಪಮೇಯರ್ ಶಿಂಧೆ ಕರಾಳದಿನ ಆಚರಿಸಿ ಕನ್ನಡ ವಿರೋಧಿ ಧೋರಣೆ ಪ್ರದರ್ಶಿಸಿದ್ದರು.

By Ananthanag
|
Google Oneindia Kannada News

ಬೆಳಗಾವಿ, ನವೆಂಬರ್ 5 : ಕನ್ನಡ ರಾಜ್ಯೋತ್ಸವದ ದಿನ ಕನ್ನಡ ವಿರೋಧಿ ಹೇಳಿಕೆ ನೀಡಿ ನಾಪತ್ತೆಯಾಗಿರುವ ಬೆಳಗಾವಿಯಲ್ಲಿ ಮೇಯರ್ ಉಪಮೇಯರ್ ಕಚೇರಿಯ ಬೋರ್ಡ್‌ಗಳಿಗೆ ಕರವೇ ಕಾರ್ಯಕರ್ತರು ಮಸಿ ಬಳಿದು ಶನಿವಾರ ಪ್ರತಿಭಟಿಸಿದ್ದಾರೆ.

ಮಹಾನಗರ ಪಾಲಿಕೆಯಲ್ಲಿರುವ ಒಟ್ಟು ನಾಲ್ಕು ಬೋರ್ಡ್ ಮತ್ತು ಕಚೇರಿ ಬಾಗಿಲಿಗೆ ಮಸಿ ಬಳಿದಿರುವುದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣ ಗೌಡ ಬಣ ಎಂದು ತಿಳಿದುಬಂದಿದೆ.[ಬೆಳಗಾವಿ ಮೇಯರ್, ಉಪಮೇಯರ್ ನಾಪತ್ತೆ]

belagavi

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಕೂಗು ಪ್ರತಿ ಕನ್ನಡ ರಾಜ್ಯೋತ್ಸವದಲ್ಲೂ ಏಳುತ್ತಿದ್ದು, ಈ ಬಾರಿ ಕೂಡ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಸೇರಿದ ಮೇಯರ್ ಶಾಂತಾ ಪಾಟೀಲ್ ಮತ್ತು ಉಪಮೇಯರ್ ಶಿಂಧೆ ಕರಾಳದಿನ ಆಚರಿಸಿ ಕನ್ನಡ ವಿರೋಧಿ ಧೋರಣೆಯನ್ನು ಪ್ರದರ್ಶಿಸಿದ್ದರು.

ಕರಾಳದಿನದಲ್ಲಿ ಬಂದೂಕನ್ನು ತೋರಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಕರಾಳದಿನ ವಿರೋಧಿಸಿ ಮೇಯರ್ ಶಾಂತಾ ಪಾಟೀಲ್‌ ಮತ್ತು ಉಪಮೇಯರ್ ಶಿಂಧೆ ಅವರ ಬೋರ್ಡ್ಗಳಿಗೆ ಕಪ್ಪು ಮಸಿ ಬಳಿದಿದ್ದಾರೆ.[ಬೆಳಗಾವಿಯಲ್ಲಿ ಬಂದೂಕು ಪ್ರದರ್ಶನ: ಕರವೇ ಆಕ್ರೋಶ]

ಒಟ್ಟು ನಾಲ್ಕು ಬೋರ್ಡ್ಗಳಿಗೆ ಕಪ್ಪು ಮಸಿ ಬಳಿದಿರುವ ಕಾರ್ಯಕರ್ತರು ಕಚೇರಿ ಬಾಗಿಲಿಗೂ ಮಸಿ ಬಳಿದು ಎಂಇಎಸ್ ಪುಂಡಾಟಕ್ಕೆ ತಿರುಗೇಟು ನೀಡಿದ್ದಾರೆ. ಜೊತೆಗೆ ಪ್ರತಿಭಟನೆ ನಡೆಸಿದ್ದಾರೆ.

English summary
Karave members paint the ink on meyar board in belagavi, and members expose to Anguish
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X