ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗದಲ್ಲಿನ ಕಪ್ಪತ್ತಗುಡ್ಡ ವನ್ಯಧಾಮವೆಂದು ಘೋಷಣೆ

|
Google Oneindia Kannada News

sr patil
ಬೆಳಗಾವಿ, ನ. 26 : ಗದಗ ಜಿಲ್ಲೆಯ ಕಪ್ಪತ ಗುಡ್ಡ ಅರಣ್ಯ ಪ್ರದೇಶ ಸಂರಕ್ಷಣೆಯ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ನೀಡಿದ್ದ ಗುತ್ತಿಗೆ ಅವಧಿ ಮುಗಿದಿದೆ, ಅದನ್ನು ನವೀಕರಣ ಮಾಡುವುದಿಲ್ಲ ಮತ್ತು ಗುಡ್ಡದ ವ್ಯಾಪ್ತಿಯಲ್ಲಿ ಹೊಸದಾಗಿ ಯಾವುದೇ ಗಣಿಗಾರಿಕೆ ನಡೆಸಲು ಅವಕಾಶ ನಿಡುವುದಿಲ್ಲ ಎಂದು ವಿಧಾನಪರಿಷತ್ ಸಭಾನಾಯಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ.

ಸೋಮವಾರ ವಿಧಾನಪರಿಷತ್ ನಲ್ಲಿ ನಿಯಮ 72ರ ಅಡಿ ಬಿಜೆಪಿಯ ತಾರಾ ಅನುರಾಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್.ಆರ್.ಪಾಟೀಲ್, ಕಪ್ಪತಗುಡ್ಡ ಅರಣ್ಯ ಪ್ರದೇಶ ಸಂರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಎಚ್.ಆರ್.ದೊಡ್ಡಣ್ಣನವರ ಮತ್ತು ಆಶಾ ಟ್ರಾನ್ಸ್ ಪೋರ್ಟ್ ಕಂಪನಿಗಳಿಗೆ ಗುಡ್ಡದಲ್ಲಿ ಗಣಿಗಾರಿಕೆ ನಡೆಸಲಿ ನೀಡಿದ್ದ ಗುತ್ತಿಗೆ ಅವಧಿ ಮುಕ್ತಾಯಗೊಂಡಿದೆ.

30 ವರ್ಷಗಳಿಗೆ ನೀಡಿದ ಗುತ್ತಿಗೆ ಮುಕ್ತಾಯಗೊಂಡಿದ್ದು, ಗುತ್ತಿಗೆಯನ್ನು ನವೀಕರಣ ಮಾಡುವುದಿಲ್ಲ ಮತ್ತು ಗುಡ್ಡವ ವ್ಯಾಪ್ತಿಯಲ್ಲಿ ನೂತನವಾಗಿ ಗಣಿಗಾರಿಕೆ ನಡೆಸಲು ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಎಸ್.ಆರ್.ಪಾಟೀಲ್ ಉತ್ತರ ನೀಡಿದರು. ಗುಡ್ಡದಲ್ಲಿ ಅಮೂಲ್ಯ ಔಷದೀಯ ಸಸ್ಯ ಗಳಿವೆ ಮತ್ತು ವನ್ಯ ಜೀವಿಗಳಿವೆ ಇದು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತಿದ್ದು, ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. (ಸದನ ಸ್ವಾರಸ್ಯ : ಯಡಿಯೂರಪ್ಪ ರೌದ್ರಾವತಾರ)

ಗುಡ್ಡದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಸುತ್ತಿದ್ದ ವಿರುಪಾಪುರ, ಕಲಕೇರಿ, ಹಾಗೂ ಹಿರೇವಡ್ಡಳ್ಳಿ ಗ್ರಾಮಗಳ ವ್ಯಾಪ್ತಿಯ 14 ಜನರ ಮೇಲೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಗುಡ್ಡದ 244.1 ಚ.ಕಿ.ಮೀ. ಪ್ರದೇಶವನ್ನು 'ಕಪ್ಪತ್ತಗುಡ್ಡ ವನ್ಯಧಾಮ'ವೆಂದು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಘೋಷಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಪಾಟೀಲ್ ತಿಳಿಸಿದರು.

ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಪಶ್ಚಿಮ ಘಟ್ಟಗಳ ಬಗ್ಗೆ ಜನರಿಗೆ ಭಾವನಾತ್ಮಕ ಸಂಬಂಧವಿದೆ. ಕಪ್ಪತ್ತಗುಡ್ಡ ವ್ಯಾಪ್ತಿಯಲ್ಲಿರುವ ಮಠಗಳು, ವಿಧ್ಯಾರ್ಥಿ ಸಂಘಟನೆಗಳು, ಜನರು ಇಲ್ಲಿ ಅಕ್ರಮ ಗಣಿಗಾರಿಕೆ ನಡೆಯಲು ಅವಕಾಶ ನೀಡುವುದಿಲ್ಲ ಎಂದರು.

English summary
Kappatagudda in Gadag district will be protected as a medicinal and aromatic plants hub, said Legislative Assembly leader S.R.Patil. On Monday, he answering for BJP questing in winter winter session and said, The State Forest Department has decided to declare Kappatagudda a protected zone for conservation of medicinal and aromatic plants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X