ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾರಕಕ್ಕೇರಿದ ಸಚಿವ ರೋಷನ್ ಬೇಗ್ v/s ಶಿವಸೇನೆ ಜಟಾಪಟಿ

|
Google Oneindia Kannada News

ಬೆಳಗಾವಿ, ಮೇ 25 : ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಮತ್ತು ಶಿವಸೇನೆ ನಡುವಿನ ಜಟಾಪಟಿ ತಾರಕಕ್ಕೇರಿದೆ.

'ಜೈ ಮಹಾರಾಷ್ಟ್ರ' ಎಂಬ ಘೋಷಣೆ ಕೂಗಿದ ಜನಪ್ರತಿನಿಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ರೋಷನ್ ಬೇಗ್ ಅವರು ನೀಡಿದ್ದ ಹೇಳಿಕೆಯ ವಿರುದ್ಧ ಶಿವಸೇನೆ ತಿರುಗಿ ಬಿದ್ದಿದೆ

ಸಚಿವ ರೋಷನ್ ಬೇಗ್ ಎದೆ ಮೇಲೆ ಕುಳಿತು ಜೈ ಮಹಾರಾಷ್ಟ್ರ' ಎಂದು ಬರೆಯುತ್ತೇವೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಬರೆದು ಮತ್ತೆ ತಮ್ಮ ಪುಂಡಾಟಿಕೆಯನ್ನು ಮೆರೆದಿದೆ.[ಕೊಲ್ಹಾಪುರದಲ್ಲಿ KSRTC ಬಸ್ ಗಳ ಮೇಲೆ ಶಿವಸೇನೆ ಪುಂಡಾಟಿಕೆ]

Jai Maharashtra write on Roshan Baig’s chest says Shiv Sena

ರೋಷನ್ ಬೇಗ್ ಡಿಎನ್‍ಎ ಪರೀಕ್ಷೆ ಅವಶ್ಯಕತೆ ಇದೆ. ಬೇಗ್ ಮೈಯಲ್ಲಿ ದೇಶಿಯ ರಕ್ತ ಹರಿಯುತ್ತಿಲ್ಲ ಇದು ದೇಶಕ್ಕೆ ಅಪಾಯಕಾರಿಯಾಗಿದೆ.

ತಕ್ಷಣ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಬೆಳಗಾವಿಗೆ ತೆರಳಿ ಅಲ್ಲಿನ ಜನರ ಸಮಸ್ಯೆ ಆಲಿಸಬೇಕು. ಗಡಿ ಭಾಗದ ಮರಾಠಿಗರ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.

ಬೇಗ್ ಹೇಳಿದ್ದೇನು? ಕೆಲವು ದಿನಗಳ ಹಿಂದೆ ಸಚಿವ ರೋಷನ್ ಬೇಗ್, ಎಂಇಎಸ್ ಸಂಘಟನೆಯ ಜಿಲ್ಲಾಪಂಚಾಯತ್ ಸದಸ್ಯರು ನಾಡವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದರೇ ಅವರ ಸದಸ್ಯತ್ವವನ್ನು ರದ್ದು ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಗೆ ಶಿವಸೇನೆ ಮತ್ತು ಎಂಇಎಸ್, ರೋಷನ್ ಬೇಗ್ ವಿರುದ್ಧ ತಿರುಗಿ ಬಿದ್ದಿವೆ.

English summary
Shiv Sena has taken an aggressive stand on karnataka Urban Development Department (UDD) minister Roshan Baig’s decision with its activists resorting to protests in bordering areas on Maharashtra-Karnataka border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X