ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಡಿಗೆ ಪ್ರತಿಭಟನಾಕಾರರು : ಕಾಂಗ್ರೆಸ್ ಬಣ್ಣ ಬಯಲು?

By ಅನುಷಾ ರವಿ
|
Google Oneindia Kannada News

ಬೆಳಗಾವಿ, ನವೆಂಬರ್ 24: ಸುವರ್ಣ ವಿಧಾನ ಸೌಧದ ಎದರು ಮಹಿಳೆಯರು ಬುಧವಾರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಪ್ರತಿಭಟನೆ ವೇಳೆ ಒಬ್ಬ ಮಹಿಳೆ ನೀಡಿದ ಹೇಳಿಕೆ ಕಾಂಗ್ರೆಸ್ ಗೆ ತೀವ್ರ ಮುಜುಗರವನ್ನುಂಟುಮಾಡಿದೆ.

ಅಪನಗದೀಕರಣ ಮಾಡಿದ ಮೋದಿ ಸರ್ಕಾರದ ವಿರುದ್ಧ ಪ್ರತಿಭಟಿಸಲು ಮಹಿಳೆಗೆ ಹಣ ನೀಡಿ ಕರೆಸಲಾಗಿತ್ತು ಎಂಬುದು ಕಾಂಗ್ರೆಸ್ ಗೆ ತಲೆ ನೋವಾಗಿ ಪರಿಣಮಿಸಿದೆ.[ನರೇಂದ್ರ ಮೋದಿ ಸಮೀಕ್ಷೆ: ನೋಟು ರದ್ದು ಬೆಂಬಲಿಸಿದ ಶೇ 93ರಷ್ಟು ಜನ!]

Hired protestors rat congress out, refuse to shout Anti-Modi slogans

ದೇಶದಲ್ಲಿ ನೋಟು ನಿಷೇಧವಾಗಿರುವುದಕ್ಕೆ ರಾಜ್ಯದಲ್ಲಿ ಆಗಿರುವ ತೊಂದರೆ, ರೈತರಿಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ ಎಂಬ ಬಗ್ಗೆ ಸದನದಲ್ಲಿ ಚರ್ಚೆಯಾಗಿದ್ದು, ಕೇಂದ್ರದ ಬಿಜೆಪಿ ನಡೆಯುನ್ನು ಖಂಡಿಸಿ ರಾಜ್ಯದಕಾಂಗ್ರೆಸ್ ನ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನೂರಾರು ಕಾಂಗ್ರೆಸ್ ಸದಸ್ಯರು ಈ ಪ್ರತಿಭಟನೆಯಲ್ಲಿಭಾಗವಹಿಸಿದ್ದರು. ಆದರೆ ಸ್ಥಳೀಯ ಮಹಿಳೆಯರನ್ನು ಹಣ ನೀಡಿ ಕರೆಸಿದ್ದರು ಹಾಗು ಮಹಿಳೆಯೊಬ್ಬರು ಕಪ್ಪುಹಣದ ವಿರುದ್ಧ ಏಕೆ ಪ್ರತಿಭಟಿಸಬೇಕು ಎಂದು ಹೇಳಿದ್ದು ಚರ್ಚೆಗೆ ಕಾರಣವಾಗಿದೆ.

ಆ ಮಹಿಳೆ ಹೇಳುವಂತೆ ಪ್ರತಿ ಮಹಿಳೆಗೆ 100 ರು ನೀಡಿ ಪಡಿತರ ಚೀಟಿಗಾಗಿ ಮೋದಿ ಸರ್ಕಾರದ ವಿರುದ್ಧ ಪ್ರತಿಭಟಿಸಬೇಕಂದು ಹೇಳಿದ್ದರು. ಆದರೆ ನಾವೇಕೆ ಪ್ರತಿಭಟಿಸಬೇಕು ಅಪನಗದೀಕರಣವಾಗಿರುವುದು ಕಪ್ಪುಹಣನಿರ್ಮೂಲನಕ್ಕೆ ಎಂದು ಸುದ್ದಿವಾಹಿನಿಗೆ ಮಹಿಳೆ ತಿಳಿಸಿದ್ದಾರೆ.

ಆದರೆ ಕಾಂಗ್ರೆಸ್ ಈ ವಿಷಯವನ್ನು ತಳ್ಳಿ ಹಾಕಿದ್ದು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಆ ಮಹಿಳೆ ಹೇಳುತ್ತಿರುವುದೇನೆಂದು ನನಗೆ ಸರಿಯಾಗಿ ತಿಳಿದು ಬಂದಿಲ್ಲ. ನೀವು ಸ್ಥಳೀಯ ಎಂಎಲ್ ಎ ಗಳಿಂದಮಾಹಿತಿ ಪಡೆಯಬಹುದೆಂದು ವರದಿಗಾರರು ಕೇಳುತ್ತಿದ್ದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದೇ ಕಾರಿನಲ್ಲಿ ಹೊರಟು ಹೋಗಿದ್ದಾರೆ.

English summary
Women in Belagavi put Congress to utter embarrassment after declaring to media persons that they were hired to be part of a protest on Wednesday. The women created a ruckus at the protest venue as soon as they realised that it was a protest against demonetisation move and Modi government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X