ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ರಾಹುಲ್, ಸೂಟು ಬೂಟಿನ ಸರಕಾರ ಕಿತ್ತೊಗೆಯುತ್ತೇವೆ

ಬೆಳಗಾವಿಯಲ್ಲಿ ರಾಹುಲ್ ಗಾಂಧಿಯವರು ಕಾಂಗ್ರೆಸ್ ಸಮಾವೇಶದಲ್ಲಿ ಮಾತಮಾತಿಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ, ಅಪನಗದೀಕರಣದ ವಿರುದ್ಧ ಕಟು ಟೀಕಾ ಪ್ರಹಾರ ಮಾಡಿದರು. ಸೂಟುಬೂಟಿನ ಸರಕಾರವನ್ನು ಕಿತ್ತೊಗೆಯುತ್ತೇವೆ ಎಂದರು.

By Ananthanag
|
Google Oneindia Kannada News

ಚೆನ್ನೈ, ಡಿಸೆಂಬರ್ 17: ಬೆಳಗಾವಿಯಲ್ಲಿ ಕರ್ನಾಟಕ ಕಾಂಗ್ರೆಸ್ಸಿನಿಂದ ಇಂದಿರಾ ಗಾಂಧಿಯವರ ಜನ್ಮಶತಮಾನೋತ್ಸವ ವರ್ಷದ ಆಚರಣೆ ನಿಮಿತ್ತ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯವರ ಆಡಳಿತ ಮತ್ತು ಅಪನಗದೀಕರಣದ ವಿರುದ್ಧ ಕಟು ವಾಗ್ದಾಳಿ ನಡೆಸಿ ಸೂಟು ಬೂಟಿನ ಸರಕಾರವನ್ನು ಕಿತ್ತೋಗೆಯುತ್ತೇವೆ ಎಂದರು.

ಮೊದಲಿಗೆ ವೇದಿಕೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಮೋದಿಯವರ ಅಲೆಯಿಂದ ದೇಶದಲ್ಲಿ ಜಿಜೆಪಿ ಅಧಿಕಾರಕ್ಕೆ ಬಂದಿತು. ಆದರೆ ಅವರ ಎರಡೂವರೆ ವರ್ಷದ ಆಡಳಿತದಲ್ಲಿ ಜನರು ಭ್ರಮಿಯಲ್ಲಿದ್ದರು. ಆದರೆ ಈಗ ಜನರಿಗೆ ಭ್ರಮನಿರಸನವಾಗಿದೆ. ಜನರು ಕೇಂದ್ರದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ ಎಂದು ತಿಳಿಸಿದರು.

ನಂತರ ವೇದಿಕೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ತಮ್ಮ ಭಾಷಣವನ್ನು ಪ್ರಾರಂಭಿಸಿ ರಾಜ್ಯ, ಕೇಂದ್ರ ಮುಖಂಡರು ಮತ್ತು ಜನತೆಯನ್ನು ಉದ್ದೇಶಿಸಿ ಮಾತನಾಡಿ ಪ್ರತಿಮಾತಿಗೂ ಮೋದಿ, ಕೇಂದ್ರ ಸರಕಾರದಿಂದ ಜನತೆ ಆಗಿರುವ ಅನ್ಯಾಯ ಯಾವ ರೀತಿಯದ್ದು ಎಂದು ಮೋದಿಯವರಿಗೆ ಅನೇಕ ಪ್ರಶ್ನೆಗಳನ್ನು ಹಾಕಿದರು. ಹಾಗೆಯೇ ಮೋದಿಯವರಿಂದ ದೇಶದಲ್ಲಿ ಜನರಿಗೆ ದುರಂತ ಎದುರಾಗಿದೆ ಎಂದು ತಿಳಿಸಿದರು.

Congress Convention in belagavi rahul speech

ನರೇಂದ್ರ ಮೋದಿ ತಮ್ಮ ಪರ್ಲ್ ಹೌಸಿನಲ್ಲಿ ದೇಶದ ರೈತರನ್ನು ದಿವಾಳಿ ಮಾಡುತ್ತಿದ್ದಾರೆ. ಬಡವರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದಾರೆ. ನರೇಗಾ ಕಾರ್ಯಕ್ರಮವನ್ನು ಲೇವಡಿ ಮಾಡಿದರು. ರೈತರ ಮಾತನ್ನು ಕೇಳುತ್ತಾರೆಯೇ ಎಂದು ತಿಳಿಸಿದರು.

ಮಾನವ ದುರಂತವನ್ನು ಹುಟ್ಟು ಹಾಕುತ್ತಾನೆ ಎಂದು ಹೇಳುತ್ತಾರೆ ಅದರೆ ಮೋದಿಯವರು ದೇಶದಲ್ಲಿ ದುರಂತವನ್ನು ಸೃಷ್ಟಿಸಿದ್ದಾರೆ. ನ್ಯಾಯ ಕೇಳುವವರ ವಿರುದ್ಧ ಗುಂಡು ಹಾರಿಸಲಾಗುತ್ತಿದೆ. ದೇಶದಲ್ಲಿ ಮೋದಿಯವರಿಂದ ಬಡವರಿಗೆ, ರೈತರಿಗೆ ನ್ಯಾಯ ದೊರೆದಂತೆ ಮಾಡಿದ್ದಾರೆ ಎಂದು ತಿಳಿಸಿದರು.

ಕಪ್ಪುಹಣ ಎಲ್ಲಿದೆ ಪರಿವಾರದವರ ಹತ್ತಿರ ಇದೆ, ಬಡಜನರ ಹತ್ತಿರ ಎಲ್ಲಿದೆ ಎಂದು ಪ್ರಶ್ನೆ ಕೇಳಿದ ರಾಹುಲ್ ಕಪ್ಪುಹಣ ದೇಶದ ಶೇಕಡಾ ಒಂದರಷ್ಟು ಇರುವ ಶ್ರೀಮಂತರ ಬಳಿಯಿದೆ. ಕಪ್ಪುಹಣ ರಿಯಲ್ ಎಸ್ಟೇಟ್, ವಿದೇಶಿ ಬಂಡವಾಳ, ವಿದೇಶಿ ಬ್ಯಾಂಕ್ ಅಕೌಂಟ್ ಬಳಿಯಿದೆ ಎಂಬ ಮಾತನ್ನು ನಾನು ಹೇಳುತ್ತಿಲ್ಲ. ಪ್ರಧಾನಿ ಹೇಳುತ್ತಿದ್ದಾರೆ ಹೀಗಾಗಿ ಪ್ರಧಾನಿಯವರು ಕಪ್ಪುಹಣದ ಹಿಂದೆ ಒಡುತ್ತಿದ್ದಾರೆ ಹೊರತು ಜನರ ಸಂಕಷ್ಟ ನೊಡುತ್ತಿಲ್ಲ ಎಂದು ತಿಳಿಸಿದರು.

* ಸ್ವಿಡ್ಜರ್ ಲ್ಯಾಂಡಿನ ಭ್ರಷ್ಟರ ಅಕೌಂಟಿನಲ್ಲಿರುವ ಕೋಟಿ ಕೋಟಿ ಕಪ್ಪುಹಣವನ್ನು ಹೊರತರುತ್ತೇನೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದರು. ಆ ಹಣವನ್ನು ತಂದು ಬಡವರ ಅಕೌಂಟಿಗೆ ಹಾಕುತ್ತೇನೆ ಎಂದು ಹೇಳಿದರು ಎಲ್ಲಿ ಹಾಕಿದರು ಎಂದು ಪ್ರಶ್ನೆ ಮಾಡಿದರು.

* ಲಲಿತ್ ಮೋದಿ ಏಕೆ ವಿದೇಶದಲ್ಲಿದ್ದಾರೆ. ಮೋದಿಯವರು ಶ್ರೀಮಂತರ ಕೋಟಿ ಹಣವನ್ನು ಮನ್ನಾ ಮಾಡುತ್ತಿದ್ದಾರೆ. ಆದರೂ ಏಕೆ ಲಲಿತ್ ಮೋದಿ ಭಾರತಕ್ಕೆ ಏಕೆ ಬರುತ್ತಿಲ್ಲ ಎಂದು ಕುಟುಕಿದರು.

samavesha

* ಅಪನಗದೀಕರಣದಿಂದ ಭಾರತದಲ್ಲಿ ಬಡವರನ್ನು ಇನ್ನಷ್ಟು ಬಡವರಾಗುತ್ತಿದ್ದಾರೆ, ಶ್ರೀಮಂತರನ್ನು ಬಿಟ್ಟು ಬಡವರ ಹಿಂದೆ ಮೋದಿ ಓಡುತ್ತಿದ್ದಾರೆ. ಲೈನಿನಲ್ಲಿ ಭ್ರಷ್ಟರು ನಿಂತಿದ್ದಾರೆ ಎಂದು ಮೋದಿ ಹೇಳುತ್ತಾರೆ ಆದರೆ ಲೈನಿನಲ್ಲಿನಿಂತಿರುವುದು ಭ್ರಷ್ಟರಲ್ಲ ಬಡವರು ನೀವು ಎಲ್ಲರಿಗೂ ಸುಳ್ಳನ್ನು ಹೇಳುತ್ತಿದ್ದೀರಾ ಎಂದು ಮೋದಿಯವರನ್ನು ಮೂದಲಿಸಿದರು.

* ಬಡವರು ಕ್ರೆಡಿಟ್ ಕಾರ್ಡನ್ನು ಬಳಸಿ ಜೀವನ ಮಾಡುತ್ತಿಲ್ಲ. ಅವರ ಹತ್ತಿರ ಹಣವಿಲ್ಲ ಮಹಿಳೆಯರ ತಮಗಾಗಿ ಇಟ್ಟಿದ್ದ ಹಣವನ್ನು ಈಚೆತಂದು ಅವರಿಗೇ ಇಲ್ಲದಂತೆ ಮಾಡಿಬಿಟ್ಟಿದ್ದೀರಾ ಎಲ್ಲರು ಅಳುತ್ತೀರುವಾಗ ನೀರು ನಗುತ್ತಿದ್ದೀರಾ ಎಂದರು.

* ಕರ್ನಾಟಕ ಮುಖ್ಯಮಂತ್ರಿಗಳು ಪತ್ರದ ಮೇಲೆ ಪತ್ರ ಬರೆದಿದ್ದಾರೆ, ಕರ್ನಾಟಕದ ರೈತರು ಅಳುತ್ತಿದ್ದಾರೆ. ಅವರಿಗೆ ಅನ್ನವಿಲ್ಲ. ಬೆಳೆಯಿಲ್ಲ, ನೀರಿಲ್ಲ.ಬರ ಆವರಿಸಿದೆ ಅವರ ಮಾತನ್ನು ನೀವು ಕೇಳಿಸಿಕೊಳ್ಳುತ್ತಿಲ್ಲ. ಅವರ ಮಾತನ್ನು ಕೇಳಲು ನಿಮ ಬಳಿ ನಿಮಗೆ ಸಮಯವೇ ಇಲ್ಲ ಎಂದು ಕರ್ನಾಟಕದ ಪರ ಕೇಂದ್ರದ ವಿರುದ್ಧ ವಾಗ್ದಾಳಿ ಮಾಡಿದರು.

* ಮೋದಿಯವರು ಬಡವರಿಂದ ಹಣವನ್ನು ದೋಚಿ ಶ್ರೀಮಂತರಿಗೆ ನೀಡುತ್ತಿದ್ದಾರೆ. ಬಡವರ ಬಳಿ ಇರುವ ಹಣವನ್ನು ದೋಚಿ ಶ್ರೀಮಂತರ ಖಜಾನೆಯನ್ನು ತುಂಬಿಸುತ್ತಿದ್ದಾರೆ. ಬಡವರ ಹಣವನ್ನು ಬ್ಯಾಂಕಿನ ಖಜಾನೆಯನ್ನು ತುಂಬಿಸುತ್ತಿದ್ದಾರೆ.

*ಕ್ಯಾಶ್ ಲೆಸ್ ದಂಧೆಯಲ್ಲಿ ಎಲ್ಲ ಮಿಷನ್ ಗಳನ್ನು ಪರಿವಾರದವರಿಗೆ ಹಂಚಿದ್ದಾರೆ. ನೋಟುಗಳಲ್ಲಿ ತಮ್ಮ ಯೋಜನೆಗಳ ಹೆಸರನ್ನು ಹಾಕಿ ಪಕ್ಷವನ್ನು ಬಿಂಬಿಸುತ್ತಿದ್ದಾರೆ.

* ಈಗಾಗಲೇ ಬಿಜೆಪಿ ಅವರ ಅಕೌಂಟಿಗೆ ಆರು ಲಕ್ಷ ಕೋಟಿ ಹಣ ಹೇಗೆ ಬಂತು ಅವರ ಅಕೌಂಟುಗಳಿಗೆ ಹಣ ಜಮೆ ಹೇಗಾಯಿತು ಪ್ರಧಾನಿ ಮೋದಿಯವರು ಎಲ್ಲರಿಗೂ ಮೋಸ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದರು.

* ಮೋದಿಯವರದು ಸೂಟು ಬೂಟಿನ ಸರಕಾರ ಅವರ ಸರಕಾರದಲ್ಲಿ ಬಡವರಿಗೆ ಜಾಗಯಿಲ್ಲ. ನಮ್ಮದು ಬಡವರ ಸರ್ಕಾರ ನಾವು ಬಡವರಿಗಾಗಿಯೇ ನಮ್ಮಲ್ಲಿ ಶ್ರೀಮಂತರಿಗಾಗಿ ಯಾವುದೇ ಕಾನೂನು ಮಾಡುವುದಿಲ್ಲ ಬಡವರ ವಿರೋಧವಾದ ಸರಕಾರವನ್ನು ಕಿತ್ತೊಗೆಯುತ್ತೇವೆ ಎಂದು ರಾಹುಲ್ ಗಾಂಧಿ ಭಾಷಣವನ್ನು ಮುಗಿಸಿದರು.

ವೇದಿಕೆಯಲ್ಲಿ ಉಸ್ತುವಾರಿ ದಿಗ್ವಿಜಯ ಸಿಂಗ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್‌, ಆಸ್ಕರ್‌ ಫರ್ನಾಂಡಿಸ್, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಮುಖಂಡರಾದ ವೀರಪ್ಪ ಮೊಯ್ಲಿ ಸೇರಿದಂತೆ ಪಕ್ಷದ ಮುಖಂಡರು ಹಾಜರಿದ್ದರು.

English summary
Today (Dec 17) Rahul Gandhi's Congress Convention in belagavi. karnataka congress party all member are there. rahul gandhi speech
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X