ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುಬಾರಿ ಮದುವೆಗಳಲ್ಲಿ ಭಾಗವಹಿಸದಿರಲು ಸಿದ್ದು ನಿರ್ಧಾರ

ಶ್ರೀಮಂತಿಕೆಯನ್ನು ಪ್ರದರ್ಶಿಸಲು ನಡೆಸುವ ಅದ್ದೂರಿ ಮದುವೆ ಸಮಾರಂಭಗಳಲ್ಲಿ ಭಾಗವಹಿಸದಿರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದಾರೆ.

By Prithviraj
|
Google Oneindia Kannada News

ಬೆಳಗಾವಿ, ನವೆಂಬರ್, 21: ದುಬಾರಿ ಮದುವೆಗಳಲ್ಲಿ ಭಾಗವಹಿಸದಿರುಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದು, ಇತರರಿಗೂ ಮಾದರಿಯಾಗಿದ್ದಾರೆ. ತಮ್ಮ ಸಂಪುಟ ಸಹೋದ್ಯೋಗಿ ಗೋಕಾಕ್ ಶಾಸಕ ರಮೇಶ್ ಜಾರಕಿ ಹೊಳಿ ಅವರ ಪುತ್ರನ ಮದುವೆ ಸಮಾರಂಭದಲ್ಲೂ ಸಹ ಭಾಗವಹಿಸದಿರಲು ಅವರು ನಿರ್ಧರಿಸಿದ್ದಾರೆ.

ಬೆಳಗಾವಿಯಲ್ಲಿ ನಡೆದ ಸಂಪುಟ ಸಭೆ ಬಳಿಕ ಈ ವಿಷಯವನ್ನು ತಿಳಿಸಿದ ಸಿಎಂ "ಇತ್ತೀಚೆಗಷ್ಟೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಜಿ ಸಚಿವರೊಬ್ಬರ ಪುತ್ರಿಯ ಅದ್ದೂರಿ ವಿವಾಹದ ಕುರಿತು ಟೀಕಿಸಿದ್ದೇವೆ."[ಟ್ರೋಲ್ ಹೈಕ್ಳಿಗೆ ಆಹಾರವಾದ ಜನಾರ್ದನ ರೆಡ್ಡಿ ಪುತ್ರಿಯ ಮದುವೆ!]

CM Siddaramaiah decided to skip grand wedding ceremonies

ಈಗ ನಾವೇ ಮತ್ತೊಂದು ದುಬಾರಿ ಮದುವೆಯಲ್ಲಿ ಪಾಲ್ಗೊಳ್ಳುವುದು ಸರಿ ಅಲ್ಲ ಎಂದು ಅವರು ತಮ್ಮ ಸಂಪುಟ ಸದಸ್ಯರ ಬಳಿ ಹೇಳಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಗೋಕಾಕ್ ನಲ್ಲಿ ನಡೆಸುತ್ತಿರುವ ತಮ್ಮ ಪುತ್ರನ ಮದುವೆಗೆ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದರು.[ಗಾಲಿ ರೆಡ್ಡಿ ಮಗಳ ಮದುವೆಯಲ್ಲಿ ಕಂಡ ಮುಖಗಳು]

ಪಕ್ಷದ ತತ್ವ, ಸಿದ್ದಾಂತಗಳನ್ನು ಗಮದಲ್ಲಿಟ್ಟುಕೊಂಡು ದುಬಾರಿ ವಿವಾಹ ಮಹೋತ್ಸವಗಳಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಹೇಳಿದ್ದರು. [ಹೊಗಳಿಕೆ ಟೀಕೆ ಅಪಹಾಸ್ಯಕ್ಕೀಡಾದ ರೆಡ್ಡಿ ಮಗಳ ಮದುವೆ!]

ಭಾನುವಾರ ಹೊಳಲ್ಕೆರೆಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿಯೂ ಸಹ ಈ ಕುರಿತು ಮಾತನಾಡಿದ್ದ ಸಿದ್ದರಾಮಯಯ್ಯ "ಇತ್ತೀಚೆಗಷ್ಟೆ ಮಾಜಿ ಸಚಿವರೊಬ್ಬರು ತಮ್ಮ ಪುತ್ರಿಯ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು, ಆ ಮದುವೆ ತೀರಾ ಅಸಹ್ಯಕರವಾಗಿತ್ತು" ಎಂದು ಪರೋಕ್ಷವಾಗಿ ಟೀಕಿಸಿದ್ದರು.

"ಶ್ರೀಮಂತರು ತಮ್ಮ ಹಣ ಶ್ರೀಮಂತಿಕೆ ಪ್ರದರ್ಶನಕ್ಕಾಗಿ ಈ ರೀತಿಯ ಸಮಾರಂಭಗಳನ್ನು ಏರ್ಪಡಿಸುತ್ತಾರೆ. ಬಡವರು ಇದರಿಂದ ಪ್ರೇರಣೆಗೊಂಡು ಸಾಲಗಾರರಾಗುತ್ತಾರೆ" ಎಂದು ಸಮಾರಂಭದಲ್ಲಿ ಅದ್ದೂರಿಗಳ ಮದುವೆಗಳ ಕುರಿತು ಟೀಕಿಸಿದ್ದರು.

English summary
Chief minister Siddaramaiah decided to skip grand wedding ceremonies. he also oppose grand ceremonies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X