ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಳಸಾ ಗೋಡೆ ಧ್ವಂಸ ಗುಲ್ಲು, ಗಿರೀಶ್ ವಿರುದ್ಧ ಕೇಸ್

By Mahesh
|
Google Oneindia Kannada News

ಬೆಳಗಾವಿ, ಮೇ 15: ಕಳಸಾ ಬಂಡೂರಿ ನಾಲಾ ಯೋಜನೆಯ ತಡೆಗೋಡೆಯನ್ನು ಒಡೆದು ಹಾಕಿರುವುದಾಗಿ ವಿಡಿಯೋ ಕ್ಲಿಪ್ಪಿಂಗ್ ಮೂಲಕ ಬಿಜೆಪಿ ಮುಖಂಡ ಗಿರೀಶ್ ಮಟ್ಟೆಣ್ಣವರ್ ಹಾಗೂ ಅವರ ಸಂಗಡಿಗರು ಹೊಸ 'ಬಾಂಬ್' ಹಾಕಿದ್ದು, ಟುಸ್ ಆಗಿದ್ದು ತಿಳಿದಿರಬಹುದು. ಈಗ ಆತಂಕ, ಗೊಂದಲ ಸೃಷ್ಟಿ ಮಾಡಿದ ಕಾರಣಕ್ಕೆ ಗಿರೀಶ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳ ನಡುವಿನ ವಿವಾದದ ಕೇಂದ್ರಬಿಂದುವಾಗಿರುವ ಹಲವಾರು ಜನರ ಕುಡಿಯುವ ನೀರಿನ ಆಸರೆಯಾಗಿರುವ ನಾಲೆಯನ್ನು ಒಡೆಯುವುದು ಐದಾರು ಜನರ ತಂಡ ಕೈಯಲ್ಲಿ ಅಸಾಧ್ಯದ ಮಾತು. ಆದರೆ, ಬಾಂಬ್ ಹಾಕುವುದರಲ್ಲಿ ಎತ್ತಿದ ಕೈ ಎನಿಸಿಕೊಂಡು ಒಂದು ಕಾಲದಲ್ಲಿ ಜನಪ್ರಿಯತೆ ಗಳಿಸಿದ್ದ ಗಿರೀಶ್ ಅವರು ಈ ದುಸ್ಸಾಹಸದಲ್ಲಿ ಯಶ ಗಳಿಸಿದ್ದರೂ ಗಳಿಸಿರಬಹುದು ಎಂಬ ಸಣ್ಣ ಅನುಮಾನ ಸಾರ್ವಜನಿಕರಲ್ಲಿ ಮೂಡಿತ್ತು. ['ರಾಜ್ಯದ ನೀರಿನ ಸಮಸ್ಯೆಗೆ ರಾಜಕಾರಣಿಗಳೇ ಕಾರಣ']

'ಹರ ಹರ ಮಹದಾಯಿ ಮಿಷನ್' ಅಡಿಯಲ್ಲಿ ನಾಲ್ವರೊಂದಿಗೆ ಕಣಕುಂಬಿ ಬಳಿ ಇರುವ ಕಳಸಾ ನಾಲ ತಡೆಗೋಡೆಯನ್ನು ಒಡೆದು ಹಾಕುವ ಯೋಜನೆ ಯಶಸ್ವಿಯಾಗಿದೆ ಎಂದು ವಿಡಿಯೋ ಕ್ಲಿಪ್ಪಿಂಗ್ ಮೂಲಕ ಗಿರೀಶ್ ಘೋಷಿಸಿದ್ದರು.

BJP leader Girish Mattannavar booked for damaging Kalasa wall claims

ಆದರೆ, ತಕ್ಷಣವೇ ಪ್ರತಿಕ್ರಿಯಿಸಿದ್ದ ಮಲಪ್ರಭಾ ಯೋಜನೆ ಸಿಇ ಎಸ್.ಎಫ್. ಪಾಟೀಲ, ತಡೆಗೋಡೆ ತಲುಪುವುದೇ ಅಸಾಧ್ಯದ ಮಾತು. ಟನೆಲ್ ಒಳಗೆ ಹೋಗುವುದು ಕೂಡ ಸಾಧ್ಯವಿಲ್ಲ ಎಂದಿದ್ದರು. ಘಟನಾ ಸ್ಥಳಕ್ಕೆ ಎಸ್ ಪಿ ರವಿಕಾಂತೆಗೌಡ ಕೂಡಾ ತೆರಳಿ, ನಾಲೆಗೆ ಯಾವುದೇ ರೀತಿ ಹಾನಿಯಾಗಿಲ್ಲ ಎಂದು ಖಚಿತಪಡಿಸಿದ್ದರು.

ನಂತರ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಡಿ ಬಿಜೆಪಿ ಮುಖಂಡ ಗಿರೀಶ ಮಟ್ಟೆಣ್ಣವರ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 143, 147, 153, 188, 505 ಅಡಿಯಲ್ಲಿ ಖಾನಾಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಮಹದಾಯಿ ಯೋಜನೆಗೆ ಗೋವಾ ಸರ್ಕಾರದ ಆಕ್ಷೇಪದ ಹಿನ್ನೆಲೆಯಲ್ಲಿ 2014ರ ಏಪ್ರಿಲ್ 14ರಂದು ಮಹದಾಯಿ ನ್ಯಾಯಮಂಡಳಿ ನೀಡಿದ ಆದೇಶದ ಮೇರೆಗೆ ಕಳಸಾ ನಾಲೆಗೆ ತಡೆಗೋಡೆ ನಿರ್ವಿುಸಲಾಗಿದೆ. ಒಂದೇ ತಿಂಗಳಿನಲ್ಲಿ ತಡೆಗೋಡೆ ನಿರ್ವಿುಸುವಂತೆ ನ್ಯಾಯಮಂಡಳಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಮೇ ಅಂತ್ಯಕ್ಕೆ ಖಾನಾಪುರ ತಾಲೂಕಿನ ಕಣಕಂಬಿಯ ಬಳಿ ತಡೆಗೋಡೆ ನಿರ್ವಿುಸಲಾಗಿತ್ತು.

ತಡೆಗೋಡೆ ಒಡೆಯಲು ಯತ್ನಿಸುವ ಮೂಲಕ ಗಿರೀಶ್ ಹಾಗೂ ಸಂಗಡಿಗರು ಯಾವುದೇ ಅಪರಾಧ ಎಸಗಿಲ್ಲ ಎಂದು ಕಳಸಾ-ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ್ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.

English summary
BJP leader Girish Mattannavar booked for damaging Kalasa wall claims. He claimed about demolishing a wall of Kalasa Nala near Kanakumbi in Khanapur taluk made by BJP leader Girish Mattannavar through some news channels. Police denied the news and booked a case against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X