ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ: ಸಂಭಾಜಿ ಪಾಟೀಲ್ ಫ್ಯಾಮಿಲಿ ವಿರುದ್ಧ ಸಿಡಿದೆದ್ದ ಸೊಸೆ

By Mahesh
|
Google Oneindia Kannada News

ಬೆಳಗಾವಿ, ಜೂನ್ 06: ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ, ಮಹಾರಾಷ್ಟ್ರ ಏಕೀಕರಣ ಸಮಿತಿ ಹಿರಿಯ ನಾಯಕ ಸಂಭಾಜಿ ಎಲ್ ಪಾಟೀಲ್ ಅವರ ಕುಟುಂಬದ ವಿರುದ್ಧ ಅವರ ಸೊಸೆ ತಿರುಗಿಬಿದ್ದಿದ್ದಾರೆ. ಪತಿ ಸಾಗರ್ ಸೇರಿದಂತೆ ಪಾಟೀಲ್ ಕುಟುಂಬದ ಹತ್ತಾರು ಮಂದಿ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಲಾಗಿದೆ.

34 ವರ್ಷ ವಯಸ್ಸಿನ ಶೀತಲ್ ಅವರು ಬೆಳಗಾವಿ ಮಹಿಳಾ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಮಾವ ಸಂಭಾಜಿ ಪಾಟೀಲ್, ಅತ್ತೆ ಉಜ್ವಲ ಎಸ್ ಪಾಟೀಲ್, ಪತಿ ಸಾಗತ್ ಪಾಟೀಲ್ ಸೇರಿದಂತೆ 10 ಮಂದಿ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Belagavi : Dowry Harassment Case against MLA Sambhaji Patil and his Son Sagar

ಮಗು ಆಗಲಿಲ್ಲ ಎಂದು ಕಿರುಕುಳ: ಮೇ 30, 2011ರಲ್ಲಿ ಪಂಡರಾಪುರ ಮೂಲದ ಶೀತಲ್ ಅವರನ್ನು ಸಂಭಾಜಿ ಅವರ ಮಗ ಸಾಗರ್ ಮದುವೆಯಾಗಿದ್ದರು. ವರ್ಷಗಳು ಕಳೆದರೂ ಇಬ್ಬರಿಗೂ ಮಕ್ಕಳಾಗಿರಲಿಲ್ಲ. ಈ ಬಗ್ಗೆ ವೈದ್ಯರ ಸಲಹೆ ಪಡೆಯಲು ಸೋಲಾಪುರಕ್ಕೆ ದಂಪತಿ ಹೋಗಿ ಬಂದಿದ್ದಾರೆ. ಆದರೆ, ಎರಡು ಬಾರಿ ಜೊತೆಯಲ್ಲಿ ಬಂದಿದ್ದ ಸಾಗರ್ ನಂತರ ಪತ್ನಿಯ ಜೊತೆಗೂಡಿಲ್ಲ.

ಮನೆಯಲ್ಲಿ ದೈಹಿಕ, ಮಾನಸಿಕ ಹಿಂಸೆ ನೀಡಿದ್ದಾರೆ. ಇಷ್ಟೇ ಅಲ್ಲದೆ, ಇತ್ತೀಚೆಗೆ ಎರಡನೇ ಮದುವೆ ಕೂಡಾ ಆಗಿದ್ದಾರೆ, ಇದು ಕಾನೂನಿನ ಪ್ರಕಾರ ಅಪರಾಧ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಶೀತಲ್ ಕೋರಿದ್ದಾರೆ.

English summary
Belagavi : Dowry Harrassment Case against MLA Sambhaji Patil and his Son Sagar registered by Sheetal. Women Police Station officials said that cases have been registered under Sections 498, 504, 494/149 of the Indian Penal Code and Sections 3 and 4 of the Dowry Prohibition Act, based on the complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X