ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ 334 ಕೋಟಿ ಹೂಡಿಕೆ ಮಾಡಲಿದೆ ಏಕಸ್ ಏರೋಸ್ಪೇಸ್

|
Google Oneindia Kannada News

ಬೆಳಗಾವಿ, ಸೆಪ್ಟೆಂಬರ್, 09 : ಏಕಸ್ ಏರೋಸ್ಪೇಸ್ ಕಂಪೆನಿ ಬೆಳಗಾವಿಯಲ್ಲಿ 334 ಕೋಟಿ ರೂ.ಗಳ ಹೂಡಿಕೆ ಮಾಡಲು ನಿರ್ಧರಿಸಿದೆ. ವಿಶೇಷ ಆರ್ಥಿಕ ವಲಯ ಸ್ಥಾಪನೆಯಾಗಲಿದ್ದು, ಸುಮಾರು 1000 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಏರ್ ಬಸ್‌ಗಳಿಗೆ ಬೇಕಾದ ಬಿಡಿಭಾಗಗಳನ್ನು ಏಕಸ್ ಏರೋಸ್ಪೇಸ್ ಉತ್ಪಾದನೆ ಮಾಡಲಿದೆ. ಸುಮಾರು 250 ಎಕರೆ ಪ್ರದೇಶದಲ್ಲಿ ಬೆಳಗಾವಿಯಲ್ಲಿ ಕಂಪನಿ ವಿಶೇಷ ಆರ್ಥಿಕ ವಲಯವನ್ನು ಸ್ಥಾಪನೆ ಮಾಡಲಿದ್ದು, ಮುಂದಿನ ಐದು ವರ್ಷಗಳಲ್ಲಿ 334 ಕೋಟಿ ಹೂಡಿಕೆ ಮಾಡಲಿದೆ. [ಬಿಡದಿಯಲ್ಲಿ ಬಾಷ್ ಅತ್ಯಾಧುನಿಕ ಉತ್ಪಾದನಾ ಘಟಕ]

belagavi

2006ರಿಂದ ಏಕಸ್ ಏರೋಸ್ಪೇಸ್ ಏರ್ ಬಸ್‌ಗಳಿಗೆ ಬೇಕಾದ ಬಿಡಿಭಾಗಗಳನ್ನು ಉತ್ಪಾದನೆ ಮಾಡುತ್ತಿದೆ. 250 ಎಕರೆ ಪ್ರದೇಶದಲ್ಲಿ 10 ಘಟಕಗಳು ನಿರ್ಮಾಣವಾಗಲಿವೆ. ಈ ಘಟಕಗಳಲ್ಲಿ ಸುಮಾರು 1000 ಉದ್ಯೋಗಳು ಸೃಷ್ಟಿಯಾಗಲಿವೆ. [ನಂಜನಗೂಡಲ್ಲಿ ಸ್ಥಾಪನೆಯಾಗಲಿದೆ ಏಷಿಯನ್ ಪೇಯಿಂಟ್ಸ್ ಘಟಕ]

ಏಷ್ಯನ್ ಪೇಯಿಂಟ್ಸ್ ಹೂಡಿಕೆ : ಮೈಸೂರು ಜಿಲ್ಲೆಯ ನಂಜನಗೂಡು ಸಮೀಪ 2,300 ಕೋಟಿ ರೂ. ವೆಚ್ಚದಲ್ಲಿ ಘಟಕ ಸ್ಥಾಪನೆ ಮಾಡಲು ಏಷ್ಯನ್ ಪೇಯಿಂಟ್ಸ್ ಲಿಮಿಟೆಡ್ ಒಪ್ಪಿಗೆ ನೀಡಿದೆ. ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಘಟಕ ಸ್ಥಾಪನೆಯಾಗಲಿದೆ.

ವೊಲ್ವೋ ಘಟಕ ವಿಸ್ತರಣೆ : ಕೆಲವು ದಿನಗಳ ಹಿಂದೆ ವೊಲ್ವೋ ಕಾರ್ಪೊರೇಷನ್ ಅಧ್ಯಕ್ಷ ಕಾಕನ್ ಅಗ್ನೇವಾಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹೊಸಕೋಟೆಯ ವೊಲ್ವೋ ಘಟಕ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಿದ್ದರು. ವೊಲ್ವೋ ಘಟಕವನ್ನು ವಿಸ್ತರಣೆ ಮಾಡಲಿದ್ದು, ಇದರಿಂದ ಸುಮಾರು 2000 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದ್ದರು.

English summary
Aequs Aerospace, a components maker for aircraft to invest Rs 334 core for a aerospace component manufacturing facility in Belagavi, North Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X