ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಗ್ರರ ಕರಿನೆರಳು ಬೆಳಗಾವಿಯ ಮೇಲೂ ಬಿತ್ತೇ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಳಗಾವಿ, ಡಿಸೆಂಬರ್, 07: ಉತ್ತರ ಕರ್ನಾಟಕದ ಮೇಲೆ ಅದರಲ್ಲೂ ಬೆಳಗಾವಿ ಮೇಲೆ ಉಗ್ರರು ಕಣ್ಣಿಟ್ಟಿದ್ದಾರೆ ಎಂಬ ಆತಂಕದ ಸಂಗತಿ ಬಯಲಾಗಿದೆ. ಬೆಳಗಾವಿಯ ಸೂಕ್ಷ್ಮ ಪ್ರದೇಶಗಳ ಫೋಟೋ ತೆಗೆಯುತ್ತಿದ್ದ ಪತ್ರಕರ್ತ ಎಂದು ಕರೆದುಕೊಳ್ಳುತ್ತಿದ್ದ ಹುಡುಗನನ್ನು ವಿಚಾರಣೆಗೆ ಒಳಪಡಿಸಿದಾಗ ಅನೇಕ ಸಂಗತಿಗಳು ಗೊತ್ತಾಗಿದೆ.

ಹುಡುಗನನ್ನು ವಿಚಾರಣೆಗೆ ಒಳಪಡಿಸಿದಾಗ, ನಾನು ಸಲಾಮತಿ ಇಝ್ ಬಿಹಾರಿ ಎಂಬುವರ ನಿರ್ದೇಶನದಂತೆ ತೆಗೆಯುತ್ತಿದ್ದೆ. ಅವರು ಉರ್ದು ಪತ್ರಿಕೆಯೊಂದನ್ನು ನಡೆಸುತ್ತಿದ್ದಾರೆ. ಅವರಿಗೆ ಡಾಟಾ ಬೇಸ್ ಮಾಡಲು ಬೇಕೆಂದು ಕೇಳಿದ್ದರು ಎಂದು ತಲೆಬುಡ ಇಲ್ಲದ ಹೇಳಿಕೆ ನೀಡಿದ್ದಾನೆ. ಆದರೆ ಇದನ್ನು ಬಿಹಾರಿ ತಿರಸ್ಕರಿಸಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.[ಉಗ್ರಗಾಮಿ ಸಂಘಟನೆ ಸೇರೋದ್ರಲ್ಲಿ ಕರ್ನಾಟಕವೇ ಫಸ್ಟ್!]

belagavi

ಬಿಹಾರಿ ಯಾರು?
ಸಲಾಮತಿ ಇಝ್ ಬಿಹಾರಿ ಮುಲತಃ ಬಿಹಾರದವನು. ಕಲಬುರ್ಗಿಯಲ್ಲಿ ಕಳೆದ ಕೆಲ ವರ್ಷಗಳಿಂದ ವಾಸ ಮಾಡುತ್ತಿದ್ದಾನೆ. ಬೆಳಗಾವಿ ಮತ್ತು ಕಲಬುರ್ಗಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಗೊಂದಲಗಳು ಬಗೆ ಹರಿದಿಲ್ಲ

ಕಾರಣವಿಲ್ಲದೇ ಸೂಕ್ಷ್ಮ ಪ್ರದೇಶಗಳ ಚಿತ್ರ ತೆಗೆಯುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಚಿತ್ರ ತೆಗೆಯುತಿದ್ದವನ ಜತೆಗೆ ಮತ್ತೆ ಇಬ್ಬರು ಪತ್ರಕರ್ತರನ್ನು ಬಂಧಿಸಿದ್ದ ಪೊಲೀಸರು ಸಾಕ್ಷಾಧಾರ ಕೊರತೆ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಿದ್ದಾರೆ.ಆದರೆ ಬಿಹಾರಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.[ಐಎಸ್ ಐಎಸ್ ಸೇರುವ ಯುವಕರಿಗೆ ಹಣ, ಕೆಲಸದ ಆಮಿಷ]

ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯಂತೆ ಉಗ್ರರು ಇದೀಗ ಉತ್ತರ ಕರ್ನಾಟಕದ ನಗರಗಳನ್ನು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದಾರೆ. ಸಿಮಿ ಸಂಘಟನೆ ಭಾಗದಲ್ಲಿ ತನ್ನ ಕಾರ್ಯ ವಿಸ್ತಾರಕ್ಕೆ ಯೋಜನೆ ಹಾಕಿಕೊಳ್ಳುತ್ತಿದೆ. ಸ್ಥಳೀಯ ಪೊಲೀಸರ ಕಣ್ಣು ತಪ್ಪಿಸಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಿದೆ. ವಿಮಾನ ನಿಲ್ದಾಣ ಸೇರಿದಂತೆ ವಿವಿಧೆಡೆ ಭದ್ರತಾ ಶಕ್ತಿಯನ್ನು ಹೆಚ್ಚು ಮಾಡಲು ಸೂಚಿಸಲಾಗಿದೆ.

English summary
The Karnataka police are conducting an important investigation in which they are trying to ascertain whether cities in Northern Karnataka especially Belagavi was under the threat of a terrorist attack. The police investigation has show far shown that a newspaper boy was clicking pictures of sensitive locations around Belagavi and on being questioned, he said that he was doing so at the behest of one Salamati Ejaz Bihari an editor of an Urdu newspaper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X