ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದನದಲ್ಲಿ ಇಂದು: ಪಿಯು ಉಪನ್ಯಾಸಕರಿಗೆ ವೇತನ ಬಡ್ತಿ

By Ananthanag
|
Google Oneindia Kannada News

ಬೆಳಗಾವಿ, ನವೆಂಬರ್ 23: ಶಿಕ್ಷಕರು- ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಸಬೇಕೆಂದು ಹಲವು ಬಾರಿ ಒತ್ತಾಯ ಪಡಿಸಿ ಪ್ರತಿಭಟಿಸಿದರೂ ಸರ್ಕಾರದ ಕಣ್ಣು ತೆರೆದಿರಲಿಲ್ಲ ಆದರೆ ಬೆಳಗಾವಿಯ ಅಧಿವೇಶನಲ್ಲಿ ಇದಕ್ಕೆ ಉತ್ತರ ಸಿಕ್ಕಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರ ಬೇಡಿಕೆಗಳ ಬಗ್ಗೆ ಕುಮಾರ್ ನಾಯಕ್ ಸಮಿತಿ ಅಧ್ಯಯನ ಮಾಡಿ ವರದಿ ಸಲ್ಲಿಸಿದೆ. ಸಲ್ಲಿಸಿರುವ ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವಿರ್ ಸೇಠ್ ಹೇಳಿದರು.

A lot of planning the logistics of the winter session

ಕುಮಾರ ನಾಯಕ್ ಸಮಿತಿಯ ವರದಿಯನ್ವಯ ಜೂನ್ 2016ರಂದು ಕಾರ್ಯನಿರ್ವಹಿಸುತ್ತಿರುವ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು- ಉಪನ್ಯಾಸಕರುಗಳಿಗೆ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಲಾಗಿದೆ. ಈ ಎಲ್ಲ ಸೌಲಭ್ಯಗಳು 2016 ಜೂನ್ ತಿಂಗಳಿನಿಂದ ಜಾರಿಗೆ ಬರುತ್ತದೆ ಎಂದು ಸಚಿವರು ತಿಳಿಸಿದರು

ಈ ವರದಿಯನ್ವಯ ಪಿಯು ಕಾಲೇಜಿಗೆ ಸೇರಿದ ಉಪನ್ಯಾಸಕರು, ಪ್ರಾಂಶುಪಾಲರಿಗೆ ತಮ್ಮ ಅನುಭವಕ್ಕನುಗುಣವಾಗಿ ವೇತನವನ್ನು ಹೆಚ್ಚಿಸಲಿದ್ದು, ಅತಿಥಿ ಉಪನ್ಯಾಸಕರಿಗೂ ವೇತನ ಹೆಚ್ಚಿಸುವ ಸಾಧ್ಯತೆಯಿದೆ.[ಬರ ಪರಿಹಾರ ಕಾಮಗಾರಿಗಳಿಗೆ ರು. 254 ಕೋಟಿ ಬಿಡುಗಡೆ]

ಅನುದಾನಿತ ಐಟಿಐಗಳಿಗೆ ವೇತನ ಪರಿಷ್ಕರಣೆ
ರಾಜ್ಯದಲ್ಲಿರುವ ಖಾಸಗಿ ಐಟಿಐ ಸಿಬ್ಬಂದಿಗಳಿಗೆ ಪ್ರೋ. ಪಿ.ಎಸ್.ಎಸ್. ಥಾಮಸ್ ವರದಿಯ ಶಿಫಾರಸ್ಸುಗಳ ಪ್ರಕಾರ ವೇತನ, ಪಿಂಚಣಿ ಇನ್ನಿತರ ಸೌಲಭ್ಯಗಳನ್ನು 4 ತಿಂಗಳೊಳಗಾಗಿ ಎಲ್ಲ ಅರ್ಹ ಸಿಬ್ಬಂದಿಗಳಿಗೆ ಒದಗಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ವಿಧಾನ ಪರಿಷತ್ ನಲ್ಲಿ ಹೇಳಿದರು.

ಮುಕ್ತ ವಿವಿ ಪದವಿಗೆ ಮಾನ್ಯತೆ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ರಾಜ್ಯ ವಿಶ್ವವಿದ್ಯಾಲಯವಾಗಿದೆ. ಈ ವಿಶ್ವವಿದ್ಯಾಲಯದಿಂದ ಪಡೆದ ಪದವಿಗಳಿಗೆ ಮಾನ್ಯತೆ ಇರುತ್ತದೆ. ಮಾನ್ಯ ಉಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನನ್ವಯ ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಪಡೆದ ಪದವಿಗಳನ್ನು ಉದ್ಯೋಗವಕಾಶಕ್ಕಾಗಿ ಪರಿಗಣಿಸಬೇಕಾಗಿರುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.

A lot of planning the logistics of the winter session

ಇನ್ವೆಸ್ಟ್ ಕರ್ನಾಟಕ: 1080 ಯೋಜನೆಗಳಿಗೆ ಒಪ್ಪಿಗೆ
ಕರ್ನಾಟಕ ಸರ್ಕಾರ ಆಯೋಜಿಸಿದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ-2016 ಸಮಾವೇಶದಲ್ಲಿ 1080 ಕೈಗಾರಿಕಾ ಪ್ರಸ್ತಾವನೆಗಳ ಯೋಜನೆಗಳು ಅನುಮೋದನೆಗೊಂಡಿವೆ. 122 ಯೋಜನಾ ಒಡಂಬಡಿಕೆಗಳು ಸಹಿ ಮಾಡಲ್ಪಟ್ಟಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುನಾರಚನೆ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲಾಗುವುದು. ಇಲಾಖೆಯನ್ನು ಪುನರ್ ರಚಿಸಲು ಪರಿಣಿತರ ಸಮಿತಿಯನ್ನು ರಚಿಸಲಾಗಿದೆ ಎಂದು ಮೀನುಗಾರಿಕೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಮಾನವ-ಪ್ರಾಣಿ ಸಂಘರ್ಷ ನಿಗ್ರಹಕ್ಕೆ ಚಿಂತನೆ
ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನ ಬೆಟ್ಟ, ಮಹದೇಶ್ವರ ಬೆಟ್ಟ ರಾಷ್ಟ್ರೀಯ ಅಭಯಾರಣ್ಯಗಳ ಅಂಚಿನ ಗ್ರಾಮಗಳಲ್ಲಿ ವನ್ಯ ಪ್ರಾಣಿ ಮಾನವ ಸಂಘರ್ಷ ಹೆಚ್ಚಾಗಿದೆ. ಈ ಕುರಿತು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ತಜ್ಞರ ತಂಡ ಅಧ್ಯಯನ ನಡೆಸಿದೆ ಎಂದು ಅರಣ್ಯ ವನ್ಯಜೀವಿ ಪರಿಸ್ಥಿತಿ ಮತ್ತು ಪರಿಸರ ಖಾತೆ ಸಚಿವ ಬಿ.ರಮಾನಾಥ ರೈ ವಿಧಾನ ಪರಿಷತ್ ನಲ್ಲಿ ಹೇಳಿದ್ದಾರೆ.

ಕಾರಂಜಾ ಯೋಜನೆ: ಹೊಸತೇನಿಲ್ಲ
ಬಚಾವತ್ ಆಯೋಗದ ವರದಿ ಅನುಸಾರ ಕಾರಂಜಾ ಯೋಜನೆಗೆ ಒಟ್ಟು 22.37 ಟಿಎಂಸಿ ನೀರು ಹಂಚಿಕೆಯಾಗಿದೆ. ಬಚಾವತ್ ಆಯೋಗದ ವರದಿ ಪ್ರಕಾರ ಗೋದಾವರಿ ಕೊಳ್ಳದ ರಾಜ್ಯದ ಕಾರಂಜಾ ಯೋಜನೆಗೆ 22.37 ಟಿಎಂಸಿ ನೀರು ಹಂಚಿಕೆಯಾಗಿದೆ. ಇದರಲ್ಲಿ ಕಾರಂಜಾ ಯೋಜನೆಯ 13.10 ಟಿಎಂಸಿ ನೀರನ್ನು ಮಾಂಜ್ರಾ ಏತ ನೀರಾವರಿ ಯೋಜನೆಗೆ 3.80 ಟಿಎಂಸಿ ನೀರು ಮರು ಹಂಚಿಕೆ ಮಾಡಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದರು.

English summary
The tenday winter session of the Karnataka Assembly to be held at the Suvarna soudha. Tanveer sait accepted Kumar nayak Committee and proceed in jun 2016 to salary hike in P U college principle, lecturer, and So muchplanning the logistics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X