ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಕ್ಷದ ಸಮಸ್ಯೆ ನೀವೆ ಬಗೆಹರಿಸಿಕೊಳ್ಳಿ: ಬಿಎಸ್ ವೈಗೆ ಹೈಕಮಾಂಡ್ ಗುದ್ದು

By Ananthanag
|
Google Oneindia Kannada News

ಬೆಂಗಳೂರು, ಜನವರಿ 25: ಸಣ್ಣ ಪುಟ್ಟ ವ್ಯಾಜ್ಯಗಳನ್ನು ಹಿಡಿದು ನೀವು ದೆಹಲಿಗೆ ತರುವ ಅವಶ್ಯವಿಲ್ಲ. ನಿಮ್ಮನ್ನು ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿರುವ ಹಿನ್ನೆಲೆ ಪಕ್ಷದಲ್ಲಿ ಉಲ್ಭಣಿಸುವ ಭಿನ್ನಾಭಿಪ್ರಾಯ, ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಹೈಕಮಾಂಡ್ ಖಡಕ್ ಎಚ್ಚರಿಕೆ ಸಂದೇಶ ನೀಡಿದೆ.

ಕೆಲದಿನಗಳ ಹಿಂದೆ ಬಿ ಎಸ್ ಯಡಿಯೂರಪ್ಪ ದೆಹಲಿಗೆ ತೆರಳಿದ್ದು, ಕೇಂದ್ರ ಬಿಜೆಪಿ ಮುಖಂಡರಾದ ಅಮಿತ್ ಷಾ, ರಾಜನಾಥ್ ಸಿಂಗ್ ಇತರರನ್ನು ಭೇಟಿ ಮಾಡಿ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತಿಯ ತೊಡಕುಗಳು ಮತ್ತು ರಾಯಣ್ಣ ಬ್ರಿಗೇಡ್ ಕುರಿತು ಮಾತನಾಡಿದ್ದು ಅವರು ನಿಮ್ಮನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಪಕ್ಷದಲ್ಲಿನ ಅಪಸ್ವರವನ್ನು ನಿವಾರಣೆ ಮಾಡುವುದಕ್ಕಾಗಿ, ಅಲ್ಲದೆ ನೀವು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಲಾಗಿದೆ. ಪದೇ ಪದೇ ದೆಹಲಿಗೆ ಬರುವುದು ಬೇಡ ಎಂದು ಹೇಳಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.[ಈಶ್ವರಪ್ಪಗೆ ಭಾರೀ ಹಿನ್ನಡೆ: ರಾಯಣ್ಣ ಬ್ರಿಗೇಡ್ ಪಥಸಂಚಲನ ಬಂದ್?]

You should correct your problem your self : BJP High Command

ಹೀಗಾಗಿ ಬಿ.ಎಸ್. ಯಡಿಯೂರಪ್ಪ ಅವರು ಭಿನ್ನಮತಿಯರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕರೆದ ಸಭೆ ಊರ್ಜಿತಗೊಳ್ಳಲಿಲ್ಲ. ಅಲ್ಲದೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟಕ್ಕೆ ಪಕ್ಷದ ಸದಸ್ಯರಲ್ಲಿ ಬಿರುಕನ್ನು ಮತ್ತಷ್ಟು ಹೆಚ್ಚಿಸಿದೆ ಅಲ್ಲದೆ ಬಿಜೆಪಿಯಲ್ಲಿ ಬಣಗಳು ಹೆಚ್ಚಾಗಿದ್ದು ಅವರು ಯಾರ ಮಾತನ್ನು ಕೇಳದಂತಾಗಿದ್ದಾರೆ.[ಬಿಎಸ್ ವೈ ಬೆಂಬಲಿಗರಿಂದ ಈಶ್ವರಪ್ಪ ವಿರುದ್ಧ ಹೈಕಮಾಂಡಿಗೆ ಪತ್ರ]

ಇನ್ನು ಇತ್ತೀಚಿನ ಬೆಳವಣಿಗೆಯಲ್ಲಿ ಯಡಿಯೂರಪ್ಪ ಬೆಂಬಲಿಗರು ಈಶ್ವರಪ್ಪ ವಿರುದ್ಧ ಸಹಿ ಸಂಗ್ರಹ ಮಾಡಲಿದ್ದು, ಅದಕ್ಕೆ ಪಕ್ಷದಲ್ಲಿಯೇ ಆಕ್ಷೇಪಗಳು ಹೆಚ್ಚಾಗಿದೆ. ರಾಜ್ಯದ ಬಿಜೆಪಿ ಕೇಂದ್ರ ಸಚಿವರುಗಳು ಪಕ್ಷದ ಒಡಕನ್ನು ಈಡೇರಿಸಲು ಮಾಡಿರುವ ಪ್ರಯತ್ನ ಸಪಲವಾಗಿಲ್ಲ. ಬಿಜೆಪಿ ಭಿನ್ನಮತ ಮುಂದಿನ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ.

English summary
You should correct your problem your self says BJP High command to State President B.S.Yeddyurappa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X