ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲಹಂಕ ಪೊಲೀಸರ ಕಾರ್ಯಾಚರಣೆಗೆ ಸಲಾಂ

|
Google Oneindia Kannada News

ಬೆಂಗಳೂರು, ಡಿಸೆಂಬರ್ 29 : ಬೆಂಗಳೂರಿನ ಯಲಹಂಕ ಪೊಲೀಸರು ಅಪಹರಣಗೊಂಡಿದ್ದ ಪಿಯುಸಿ ವಿದ್ಯಾರ್ಥಿಯನ್ನು ಕೆಲವೇ ಗಂಟೆಗಳಲ್ಲಿ ರಕ್ಷಿಸಿದ್ದಾರೆ. ಹಣಕ್ಕಾಗಿ ಪಿಯುಸಿ ವಿದ್ಯಾರ್ಥಿಯನ್ನು ಅಪಹರಣ ಮಾಡಿ ನೀಲಗಿರಿ ತೋಪಿನಲ್ಲಿ ಬಚ್ಚಿಡಲಾಗಿತ್ತು.

ಸೋಮವಾರ ಮುಂಜಾನೆ 7.50ರ ಸುಮಾರಿಗೆ ಅಪಹರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಮೊಬೈಲ್ ನಂಬರ್‌ನ ಟವರ್ ಲೊಕೇಷನ್ ಆಧಾರದ ಮೇಲೆ ತ್ವರಿತ ಕಾರ್ಯಾಚರಣೆ ನಡೆಸಿ, ಹೆಸರಘಟ್ಟದ ಬಸ್ ನಿಲ್ದಾಣದ ಬಳಿ ಅಪಹರಣಕ್ಕೆ ಬಳಸಿದ್ದ ಕಾರನ್ನು ಪತ್ತೆಹಚ್ಚಿ, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. [ಹಾಡಹಗಲೇ ಯುವತಿಯ ಅಪಹರಣ, ಸಿಸಿಟಿವಿಯಲ್ಲಿ ಸೆರೆ]

arrest

ಬಂಧಿತ ಆರೋಪಿಯ ವಿಚಾರಣೆ ನಡೆಸಿ, ಕೋಡಿಹಳ್ಳಿ ಗ್ರಾಮದ ನೀಲಗಿರಿ ತೋಪಿಗೆ ತೆರಳಿ ಕೈಕಾಲು ಕಟ್ಟಿ ಬಚ್ಚಿಡಲಾಗಿದ್ದ ಪಿಯುಸಿ ವಿದ್ಯಾರ್ಥಿಯನ್ನು ಪೊಲೀಸರು ರಕ್ಷಿಸಿದ್ದಾರೆ. ವಿದ್ಯಾರ್ಥಿಗೆ ಸೂಕ್ತ ಚಿಕಿತ್ಸೆ ನೀಡಿ ಪೋಷಕರಿಗೆ ಒಪ್ಪಿಸಲಾಗಿದೆ. [ಪ್ರಿಯಕರನೊಂದಿಗೆ ಸಿಕ್ಕ ನಂದಿನಿ, ಅಪಹರಣವೇ ಆಗಿಲ್ಲ]

ಘಟನೆಯ ವಿವರ : ನಾಗರ್ಜುನ ಪಿಯು ವಿದ್ಯಾರ್ಥಿ ನಿತೀಶ್ ಡಿಸೆಂಬರ್ 28ರ ಸೋಮವಾರ ಮುಂಜಾನೆ 7.50ರ ಸಮಯದಲ್ಲಿ ಯಲಹಂಕ ಪೊಲೀಸ್ ಠಾಣೆಗೆ ಬಂದು, ನಾನು ಮತ್ತು ನನ್ನ ಸ್ನೇಹಿತ ವೈದ್ಯನಾಥ್ ಕಾಲೇಜಿಗೆ ಹೋಗುವಾಗ ವೈದ್ಯನಾಥ್‌ನನ್ನು ಯಾರೋ ಅಹರಣ ಮಾಡಿದರು ಎಂದು ಮೌಖಿಕವಾಗಿ ದೂರು ನೀಡಿದ್ದ.

ಕಾಲೇಜಿಗೆ ಹೋಗುವಾಗ ಹಾರೋಹಳ್ಳಿ ಕೆರೆಯ ಏರಿಯ ಸಮೀಪ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ನಮ್ಮ ಬೈಕ್ ಅಡ್ಡಗಟ್ಟಿ ನನಗೆ ಹೊಡೆದು, ವೈದ್ಯನಾಥ್‌ನನ್ನು ಅಪಹರಿಸಿಕೊಂಡು ಹೋದರು. ಆತನ ಮೊಬೈಲ್ ಫೋನ್‌ ಅನ್ನು ಅಪಹರಣಕಾರರು ತೆಗೆದುಕೊಂಡು ಹೋದರು ಎಂದು ಮಾಹಿತಿ ನೀಡಿದ.

ದೂರು ನೀಡುವಾಗ ನಿತೀಶ್ ಕಾರಿನ ನಂಬರ್‌ ಅನ್ನು ನೀಡಿದ್ದ. ಕಾರಿನ ನಂಬರ್ ಮೂಲಕ ತನಿಖೆ ಆರಂಭಿಸಿದ ಪೊಲೀಸರು, ಕಾರನ್ನು ಬಾಡಿಗೆಗೆ ನೀಡಿದ ಕೇಂದ್ರದಿಂದ ಅದನ್ನು ಬಾಡಿಗೆಗೆ ಪಡೆದ ವ್ಯಕ್ತಿಯ ನಂಬರ್ ಪತ್ತೆ ಹಚ್ಚಿದರು.

ಮೊಬೈಲ್ ನಂಬರ್‌ನ ಟವರ್ ಲೊಕೇಷನ್ ಆಧರಿಸಿ, ತ್ವರಿತವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಹೆಸರಘಟ್ಟ ಬಸ್ ನಿಲ್ದಾಣದ ಬಳಿ ಕಾರು ಸಿಕ್ಕಿತು. ಕಾರನ್ನು ಬಾಡಿಗೆಗೆ ಪಡೆದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಪಹರಿಸಿದ ವೈದ್ಯನಾಥ್‌ನನ್ನು ಕೋಡಿಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ಬಚ್ಚಿಟ್ಟಿರುವುದು ತಿಳಿಯಿತು. ಅಲ್ಲಿಗೆ ತೆರಳಿದ ಪೊಲೀಸರು ಆತನನ್ನು ರಕ್ಷಣೆ ಮಾಡಿದರು.

ನಿತೀಶ್ ನೀಡಿದ ದೂರಿನ ಮೇರೆಗೆ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಹಣಕ್ಕಾಗಿ ಅಪಹರಣ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

English summary
Bengaluru Yelahanka police on Monday rescued the PUC student who was kidnapped for a money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X