ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಕ್ಷಗಾನ ಬಯಲಾಟ ಅಕಾಡೆಮಿ ಪುಸ್ತಕ ಬಹುಮಾನ ಪ್ರಕಟ

By Vanitha
|
Google Oneindia Kannada News

ಬೆಂಗಳೂರು, ಜು, 02 : ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ 2011 , 2012 ಹಾಗೂ 2013 ನೇ ಸಾಲಿನ ಪುಸ್ತಕ ಬಹುಮಾನ ಪ್ರಕಟಿಸಿದೆ. ವಿಜೇತರು ಹಾಗೂ ಅವರ ಪುಸ್ತಕಗಳು ಇಂತಿದೆ.

2011 ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ಈಶ್ವರಚಂದ್ರ ಎಸ್. ಬೆಟಗೇರಿ ಇವರ 'ಪಗಡೆಯಾಟ', ದಕ್ಷಿಣ ಕನ್ನಡ ಜಿಲ್ಲೆಯ ಡಿ.ಎಸ್. ಶ್ರೀಧರ್ ಇವರ 'ಯಕ್ಷಗಾನ ಪ್ರಸಂಗಮಾಲಿಕಾ' ಹಾಗೂ ಬೆಂಗಳೂರಿನ ಜಿಡ್ಡು ಸದಾಶಿವ ಭಟ್ಟ ಇವರ 'ಲಿಂಗಣ್ಣ' ಕೃತಿಗಳು ಆಯ್ಕೆಯಾಗಿವೆ.

Yakshagana and the Academy published a book prize

2012 ನೇ ಸಾಲಿನಲ್ಲಿ ಹೊಸಪೇಟೆಯ ದಿವಂಗತ ಬಸವರಾಜ ಮಲಶೆಟ್ಟಿ ಇವರ 'ಗಿರಿಜಾ ಕಲ್ಯಾಣ', ಉಡುಪಿ ಜಿಲ್ಲೆಯ ಸುಬ್ರಹ್ಮಣಯ್ಯ ಬೈಪಡಿತ್ತಾಯ ಇವರ 'ಸಾಧಕ ಸಂಪದ' ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸದಾಶಿವ ಭಟ್ಟ ಇವರ 'ತ್ರಿಂಶತಿ' ಕೃತಿಗಳು ಆಯ್ಕೆಯಾಗಿವೆ.

2013 ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಮನೋಹರ ಎಸ್. ಕುಂದರ್ ಇವರ 'ಯಕ್ಷಗಾನ ರಂಗಬೈಭವ', ದಿವಂಗತ ಸಾಣೂರು ಎಂ. ಶ್ರೀಧರ ಪಾಂಡಿ ಅವರ 'ಜಿನಯಕ್ಷಗಾನ ಸಂಪುಟ' ಹಾಗೂ ಬಳ್ಳಾರಿ ಜಿಲ್ಲೆಯ ಮೋಹನ ಕುಂಟಾರ್ ಇವರ 'ಯಕ್ಷಗಾನ ಸ್ಥಿತ್ಯಂತರ ಪುಸ್ತಕಗಳು' ಬಹುಮಾನಕ್ಕೆ ಆಯ್ಕೆಯಾಗಿದೆ ಎಂದು ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

English summary
2011, 2012 and 2013 in different art form Yakshagana and Bayalata Academy Book Prize has selected the books. All books based on yakshagana and bayalata art form. congratulations to all.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X