ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತ ಕುಮಾರ್ ನೇತೃತ್ವದಲ್ಲಿ ಸಾಗಿದ ಹಸಿರು ತೇರು

|
Google Oneindia Kannada News

ಬೆಂಗಳೂರು, ಜೂ. 06: ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ನೇತೃತ್ವದಲ್ಲಿ 'ಹಸಿರು ತೇರು' ಲಾಲ್ ಬಾಗ್ ಪಶ್ಚಿಮ ದ್ವಾರದಿಂದ ಸೌತ್ ಎಂಡ್ ವೃತ್ತದವರೆಗೆ ಶನಿವಾರ ಬೆಳಗ್ಗೆ ಸಾಗಿತು.

ವಿಧಾನ ಪರಿಷತ್ ಸದಸ್ಯೆ, ನಟಿ ತಾರಾ ಅನುರಾಧಾ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ, ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು. ಲಾಲ್ ಬಾಗ್ ಪಶ್ವಿಮ ದ್ವಾರದಿಂದ ಆರಂಭವಾದ ತೇರು ಸೌತ್ ಎಂಡ್ ವೃತ್ತದ ಗಂಟೆ ಗಡಿಯಾರದ ಬಳಿ ಅಂತ್ಯವಾಯಿತು. [ಜಾಗೃತಿಗೆ ಮೊದಲು ಪರಿಸರ ಬಗ್ಗೆ ತಿಳಿದುಕೊಳ್ಳಿ]

environment

ಲಾಲ್ ಬಾಗ್ ನಲ್ಲಿ ಕೇಂದ್ರ ಸಚಿವರು ಗಿಟನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಸಿರು ಗಿಡಗಳನ್ನು ಹೊತ್ತ ತೇರು ಗಮನ ಸೆಳೆಯಿತು. ಪಲ್ಲಕ್ಕಿಯಲ್ಲಿ ಹಸಿರು ಗಿಡಗಳನ್ನು ಹೊತ್ತು ದಾರಿಯುದ್ದಕ್ಕೂ ಪರಿಸರ ಪ್ರೇಮ ಸಾರುವ ಘೋಷಣೆ ಕೂಗುತ್ತಾ, ಭಿತ್ತಿಪತ್ರಗಳನ್ನು ಹಿಡಿದು ಸಾಗಲಾಯಿತು.[ಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿ]

ಪರಿಸರ ಜಾಗೃತಿ, ವೃಕ್ಷ ನಿರ್ವಹಣೆ, ಗಿಡ ಬೆಳೆಸುವಿಕೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚಿಂತನ ನಡೆಯಿತು. ಬೆಳಗ್ಗೆ 8.30ಕ್ಕೆ ಗಂಟೆ ಗಡಿಯಾರದ ಮುಂದೆ ಸಮಾವೇಶಗೊಂಡ ಹಸಿರು ತೇರು ಸಮಾರೋಪವಾಯಿತು.

environment
English summary
Bengaluru: On the occasion of World Environment Day Union fertilizer Minister inaugurated the 'Hasiru Teeru' event at Lal bagh on june 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X