ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನೊಂದು ವಾರದೊಳಗೆ ಸ್ಟೀಲ್ ಬ್ರಿಡ್ಜ್ ಕಾಮಗಾರಿ ಆರಂಭ!

ಸಾರ್ವಜನಿಕ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾಗಿದ್ದು.ಇನ್ನೊಂದು ವಾರದೊಳಗೆ ಕಾಮಗಾರಿ ಆರಂಭಸುವಂತೆ ಗುತ್ತಿಗೆ ಪಡೆದ ನಾಗಾರ್ಜುನ ಮತ್ತು ಎಲ್ ಅಂಡ್ ಟಿ ಕಂಪನಿಗೆ ಬಿಡಿಎ ಕಾರ್ಯದೇಶ ನೀಡುವ ಸಾಧ್ಯತೆಗಳಿವೆ.

By Ramesh
|
Google Oneindia Kannada News

ಬೆಂಗಳೂರು, ಅಕ್ಟೋಬರ್. 22 : ಸಾರ್ವಜನಿಕರ ವಿರೋಧ ನಡುವೆಯೂ ವಿವಾದಿತ ಬೆಂಗಳೂರು ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಪಣತೊಟ್ಟು ನಿಂತಿದೆ. ಈಗಾಗಲೇ ಸ್ಟೀಲ್ ಬ್ರಿಡ್ಜ್ ಯೋಜನೆ ಗುತ್ತಿಗೆ ಪಡೆದಿರುವ ಕಂಪನಿಗೆ ಕಾರ್ಯದೇಶ ನೀಡಲು ಬಿಡಿಎ ಸಿದ್ಧತೆ ನಡೆಸಿದೆ.

ತೀವ್ರ ಆಕ್ಷೇಪದ ನಡುವೆಯೂ ಕನ್ನಡ ರಾಜ್ಯೋತ್ಸವದಂದು ಅಂದರೆ ನವೆಂಬರ್ 1ರಂದು ಕಾಮಗಾರಿ ಆರಂಭವಾಗುವ ಸಾಧ್ಯತೆಗಳಿವೆ. ನಾಗಾರ್ಜುನ ಮತ್ತು ಎಲ್ ಅಂಡ್ ಟಿ ಕಂಪನಿಗೆ ವರ್ಕ್ ಆರ್ಡರ್ ನೀಡಲಾಗಿದ್ದು. ಒಟ್ಟು 1, 800 ಕೋಟಿ ರುಗಳ ವೆಚ್ಚದಲ್ಲಿ ಈ ಕಾಮಗಾರಿ ಆರಂಭವಾಗಲಿದೆ. [ಬುಡಮೇಲಾದ ಸ್ಟೀಲ್ ಫ್ಲೈಓವರ್ ವಿರೋಧಿಗಳ ಹೋರಾಟ!]

ಪರಿಸರವಾದಿಗಳು ಕೋರ್ಟ್ ನಿಂದ ತಡೆಯಾಜ್ಞೆ ತರುವ ಭೀತಿಯಲ್ಲಿ ಸರ್ಕಾರ ತರಾತುರಿಯಲ್ಲಿ ಕಾರ್ಯಾದೇಶ ಆದೇಶ ಹೊರಡಿಸಲು ಬಿಡಿಎ ಮುಂದಾಗಿದೆ. ಚಾಲುಕ್ಯ ಸರ್ಕಕ್ ನಿಂದ ಹೆಬ್ಬಾಳ ಫ್ಲೈಓವರ್ ವರೆಗೆ ಕಾರ್ಯಾದೇಶ ನೀಡಲಾಗಿದೆ. 21 ಮೀಟರ್ ಎತ್ತರದಲ್ಲಿ ಈ ಉಕ್ಕಿನ ಸೇತುವೆ ನಿರ್ಮಾಣವಾಗಲಿದೆ. [ಸಂಶಯ ಬಿಡಿ, ಉಕ್ಕು ಸೇತುವೆ ಯೋಜನೆ ಪಾರದರ್ಶಕ]

ಈ ಉಕ್ಕಿನ ಸೇತುವೆ ಬೇಡವೇ ಬೇಡವೆಂದು ಸಾರ್ವಜನಿಕರು ಹಲವಾರು ಪ್ರತಿಭಟನೆಗಳು ಹಾಗೂ ಸ್ಟೀಲ್ ಬ್ರಿಡ್ಜ್ ವಿರೋಧಿಸಿ ಸಹಿ ಸಂಗ್ರಹಗಳು ನಡೆಯುತ್ತಿವೆ.

ಸಾರ್ವಜನಿಕರ ವಿರೋಧ

ಸಾರ್ವಜನಿಕರ ವಿರೋಧ

ಉಕ್ಕಿನ ಸೇತುವೆ ವಿರೋಧಿಸಿ ಬೆಂಗಳೂರಿನ ನಾಗರಿಕರು ಪ್ರತಿಭಟನೆಗಳನ್ನು ಮಾಡಿದ್ದರು. ರಾಜರಾಜೇಶ್ವರಿನಗರದಿಂದ ಮಾನ್ಯತಾ ಟೆಕ್ ಪಾರ್ಕ್ ವರೆಗೆ ಮತ್ತು ಮಲ್ಲೇಶ್ವರಂ, ವಸಂತ್ ನಗರ್, ಚರ್ಟ್ ಸ್ಟ್ರೀಟ್, ರಂಗಶಂಕರ ಜಯನಗರ ಟಿಟಿಎಂಸಿ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಯೋಜನೆ ಕೈಬಿಡುವಂತೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿತ್ತು.

ಸ್ಟೀಲ್ ಬ್ರಿಡ್ಜ್ ಗೆ ಕುಮಾರಸ್ವಾಮಿ ಕಿಡಿ

ಸ್ಟೀಲ್ ಬ್ರಿಡ್ಜ್ ಗೆ ಕುಮಾರಸ್ವಾಮಿ ಕಿಡಿ

ಕಾವೇರಿ ಹಾಗೂ ಮಹದಾಯಿ ಸಮಸ್ಯೆ ಬಗೆಹರಿಸುವತ್ತ ಹೆಚ್ಚಿನ ಗಮನ ಹರಿಸಿದೆ ಬೆಂಗಳೂರಿನ ಜನತೆಗೆ ಬೇಡವಾದ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಮುಂದಾಗಿರುವುದು ಖಂಡನಾರ್ಹ. ಇಷ್ಟಕ್ಕೂ ಸಾವಿರಾರು ಕೋಟಿ ರು ಖರ್ಚು ಮಾಡಲು ಇವರಿಗೆ ಹಣ ಎಲ್ಲಿಂದ ಬಂತು ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಭಾನುವಾರ ಪ್ರಶ್ನಿಸಿದ್ದಾರೆ.

ಉಕ್ಕಿನ ಸೇತುವೆಗೆ ಎಎಪಿ ವಿರೋಧ

ಉಕ್ಕಿನ ಸೇತುವೆಗೆ ಎಎಪಿ ವಿರೋಧ

ಸ್ಟೀಲ್ ಫ್ಲೈ ಓವರ್ ವಿರುದ್ಧದ ಚಾಲುಕ್ಯ ವೃತ್ತ, ಕಾವೇರಿ ವೃತ್ತ, ಮೇಕ್ರಿ ವೃತ್ತ ಹಾಗೂ ಹೆಬ್ಬಾಳದಲ್ಲಿ ನಡೆದಿರುವ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷದ ಬೆಂಗಳೂರಿನ ಘಟಕ ತನ್ನ ಸಂಪೂರ್ಣ ಬೆಂಬಲ ನೀಡಿತು.

ಉಕ್ಕು ಸೇತುವೆ ಯೋಜನೆ ಪಾರದರ್ಶಕ ಅಂತಿದೆ ಸರ್ಕಾರ

ಉಕ್ಕು ಸೇತುವೆ ಯೋಜನೆ ಪಾರದರ್ಶಕ ಅಂತಿದೆ ಸರ್ಕಾರ

ಉಕ್ಕು ಸೇತುವೆ ನಿರ್ಮಾಣ ಯೋಜನೆ ಸಂಪೂರ್ಣ ಪಾರದರ್ಶಕವಾಗಿದೆ. ಈ ಕುರಿತು ಯಾವುದೇ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸ್ಟೀಲ್ ಬ್ರಿಡ್ಜ್ ಗೆ ತಡೆ ನೀಡಲು ಹೈಕೋರ್ಟ್ ನಕಾರ

ಸ್ಟೀಲ್ ಬ್ರಿಡ್ಜ್ ಗೆ ತಡೆ ನೀಡಲು ಹೈಕೋರ್ಟ್ ನಕಾರ

ವಿವಾದಿತ ಸ್ಟೀಲ್‍ ಬ್ರಿಡ್ಜ್ ಯೋಜನೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಸುಮಾರು 1,800 ಕೋಟಿ ರು ವೆಚ್ಚದ 6 ಪಥ ಉಕ್ಕಿನ ಮೇಲ್ಸೇತುವೆ ರಸ್ತೆ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಇದನ್ನು ಪ್ರಶ್ನಿಸಿ ನಮ್ಮ ಬೆಂಗಳೂರು ಫೌಂಡೇಶನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿತ್ತು.

ಸ್ಟೀಲ್ ಬ್ರಿಡ್ಜ್ ಟೆಂಡರ್ ಬಗ್ಗೆ ಜಾರ್ಜ್ ಕೊಟ್ಟ ಉತ್ತರ

ಸ್ಟೀಲ್ ಬ್ರಿಡ್ಜ್ ಟೆಂಡರ್ ಬಗ್ಗೆ ಜಾರ್ಜ್ ಕೊಟ್ಟ ಉತ್ತರ

ಉಕ್ಕಿನ ದರ ಗಣನೀಯವಾಗಿ ಕಡಿಮೆಯಾದರೂ (ಪ್ರತಿ ಟನ್‌ ಉಕ್ಕಿಗೆ 46 ಸಾವಿರ ರು ನಷ್ಟಿದ್ದ ದರ ಈಗ 40 ಸಾವಿರ ರುಗಳಿಗೆ ಇಳಿದಿದೆ) ಈ ಮಾಹಿತಿಯಲ್ಲಿ ಯೋಜನಾ ವೆಚ್ಚ 1350 ಕೋಟಿ ರು ಎಂದಿದೆ. ಗುತ್ತಿಗೆದಾರರಿಗೆ 1,350 ಕೋಟಿ ರು ಬದಲಿಗೆ 1,791 ಕೋಟಿ ರು ನೀಡುತ್ತಿರುವುದು ಏಕೆ ಎಂಬ ಪ್ರಶ್ನೆ(ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕೇಳಿದ್ದು)ಗೆ ಜಾರ್ಜ್ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.

English summary
THE board meeting of the Bangalore Development Authority on Thursday has accepted the government’s move to go ahead with construction of the steel flyover from Basaveshwara Circle up to Hebbal. Work order for the project is set to be issued within a week, said BDA sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X