ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋ ಚಾಲಕನ ಮುಖಕ್ಕೆ ಉಗಿದ ಮಹಿಳೆ

|
Google Oneindia Kannada News

ಬೆಂಗಳೂರು, ಅ.20 : ಮಹಿಳೆಯೊಬ್ಬರು ಕಾರು ಮುಂದೆ ಹೋಗಲು ಅವಕಾಶ ನೀಡದ ಆಟೋ ಡ್ರೈವರ್‌ ಮುಖಕ್ಕೆ ಉಗಿದು, ಅಸಭ್ಯವಾಗಿ ವರ್ತಿಸಿದ ಘಟನೆ ಕುರಿತು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಟೋ ಚಾಲಕ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಪ್ರತಿದೂರು ಸಲ್ಲಿಸಿದ್ದಾರೆ.

ಶನಿವಾರ ರಾತ್ರಿ ಕೋರಮಂಗಲದ ನಿವಾಸಿ ಪ್ರಶಾಂತ್ ಪ್ರಯಾಣಿಕರ ಸಮೇತ ವೆಂಕಟಾಪುರ ಮುಖ್ಯ ರಸ್ತೆಯಲ್ಲಿ ಬರುತ್ತಿದ್ದರು. ವಿಕ್ಟೋರಿಯಾ ಬಡಾವಣೆಯ ನಿವಾಸಿಯಾದ ಆಂಧ್ರಪ್ರದೇಶ ಮೂಲದ ಸರಿತಾ ಅವರ ಕಾರು ಪ್ರಶಾಂತ್ ಅವರ ಆಟೋವನ್ನು ಓವರ್‌ಟೇಕ್ ಮಾಡಲು ಯತ್ನಿಸಿದೆ. [ಮಹಿಳೆ ಮುಖಕ್ಕೆ ಉಗಿದ ಆಟೋ ಚಾಲಕ]

Auto Rickshaws

ಅಪಘಾತವಾಗುತ್ತದೆ ಎಂದು ತಿಳಿದ ಆಟೋ ಚಾಲಕ ಪ್ರಶಾಂತ್ ಎಡಗಡೆಯಿಂದ ನುಗ್ಗಿದ ಕಾರಣಕ್ಕೆ ಕಾರಿನ ಚಾಲಕನಿಗೆ ಕೈ ತೋರಿಸಿದ್ದ. ಇದರಿಂದ ಕೋಪಗೊಂಡ ಕಾರಿನಲ್ಲಿದ್ದ ಸರಿತಾ ಕೆಳಕ್ಕೆ ಇಳಿದುಬಂದು ಆಟೋ ಚಾಲಕನಿಗೆ ಗುದ್ದಿದ್ದಲ್ಲದೆ ಆತನ ಮುಖಕ್ಕೆ ಉಗಿದಿದ್ದಾರೆ.

ಘಟನೆ ಬಗ್ಗೆ ಪ್ರಶಾಂತ್ ಆಟೋ ಚಾಲಕರ ಸಂಘಕ್ಕೆ ವಿಷಯ ಮುಟ್ಟಿಸಿದ್ದಾರೆ. ಆಟೋ ಸಂಘದ ಮುಖಂಡರು ಸ್ಥಳಕ್ಕೆ ಧಾವಿಸಿ ಘಟನೆಯ ಬಗ್ಗೆ ವಿಚಾರಿಸಿದರೂ ಮಹಿಳೆ ಸರಿಯಾಗಿ ಉತ್ತರ ನೀಡಿಲ್ಲ. ಅದೇ ಹೊತ್ತಿಗೆ ಸ್ಥಳಕ್ಕೆ ಧಾವಿಸಿದ ಹೊಯ್ಸಳ ಪೊಲೀಸರು ಆಟೋ ಚಾಲಕ ಮತ್ತು ಮಹಿಳೆಯನ್ನು ಮಡಿವಾಳ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. [ಆಟೋ ದರದ ಬಗ್ಗೆ ಮಾಹಿತಿ ಬೇಕೆ ಎಸ್ಎಂಎಸ್ ಮಾಡಿ]

ಬ್ಲಡಿ ಲೋಕಲ್ಸ್ : ಈ ಘಟನೆಯ ಕುರಿತು ಮಡಿವಾಳ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದೆ. ಮಡಿವಾಳ ಉಪ ವಿಭಾಗದ ಎಸಿಪಿ ಶಾಂತಕುಮಾರ್ ಠಾಣೆಗೆ ಧಾವಿಸಿ ವಿಚಾರಣೆ ನಡೆಸಿದ್ದಾರೆ. ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸುವಾಗಲೂ ಆ ಮಹಿಳೆ 'ಬ್ಲಡಿ ಲೋಕಲ್ಸ್' ಮತ್ತು 'ಬ್ಲಡಿ ಬೆಗ್ಗರ್ಸ್‌' ಎಂದು ಬೈಯುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

English summary
In an incident of road rage, a Andhra Pradesh based woman Sarita allegedly spit at an auto rickshaw driver on Venkatapura Road under Madiwala police limits on Saturday. Auto driver Prashanth field complaint against woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X