ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಕಾಲ್ ಸೆಂಟರ್ ವಿರುದ್ಧ - ಐಟಿ ಬಿಟಿ ಕನ್ನಡಿಗರ ಟ್ವಿಟ್ಟರ್ ಸಮರ

By Mahesh
|
Google Oneindia Kannada News

ಬೆಂಗಳೂರು, ಜೂನ್ 30: ಬಿಬಿಎಂಪಿಯವರು ಪರಭಾಷೆ ಕಾಲ್ ಸೆಂಟರ್ ಆರಂಭಿಸುತ್ತಿರುವುದರ ವಿರುದ್ಧವಾಗಿ ಐಟಿ ಬಿಟಿ ಕನ್ನಡಿಗರು ಟ್ವಿಟ್ಟರ್ ನಲ್ಲಿ ಅಭಿಯಾನ ಮಾಡುತ್ತಿರುವುದೇಕೆ? ಅಭಿಯಾನದ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಿಟಿ ರವಿ ಅವರ ವಿರುದ್ಧ ಬಂದ ಟ್ವೀಟ್ ಗಳು ಹೇಗಿತ್ತು? ಈ ಬಗ್ಗೆ ವಿವರಣೆ ಐಟಿ ಬಿಟಿ ಕನ್ನಡಿಗರಿಂದ ಬಂದಿದೆ ಓದಿ...

ಅಭಿಯಾನದ ಸಂದರ್ಭದಲ್ಲಿ ಸಿ.ಟಿ.ರವಿಯವರು ಇದಕ್ಕೆ ಬೆಂಬಲ ವ್ಯಕ್ತಪಡಿಸಿ ಕೆಲವೊಂದು ಟ್ವೀಟ್ ಗಳನ್ನು ಮಾಡಿದರು, ಕಾಂಗ್ರೆಸ್ ಸರ್ಕಾರವುಳ್ಳ ಬಿಬಿಎಂಪಿಯ ಈ ನಿಲುವಿನ ಬಗ್ಗೆ ಯಾವ ವಿರೋಧ ಪಕ್ಷದವರು ಉಸಿರೆತ್ತದೆ ಇದ್ದ ಸಂದರ್ಭದಲ್ಲಿ ಸಿ.ಟಿ. ರವಿಯವರ ಹೇಳಿಕೆಗಳು ಸೂಕ್ತವಾಗಿದ್ದವು.[ಬೆಂಗಳೂರು ಮಹಾನಗರ ಪಾಲಿಕೆಗೇಕೆ ಪರಭಾಷೆ ಕಾಲ್ ಸೆಂಟರ್?]

ಆದರೆ, ಅದೆಲ್ಲಿಂದಲೋ ಮಧ್ಯ ಬಂದ Media Watcher(@india_msm) ಎಂಬ ವ್ಯಕ್ತಿ ಸಿ.ಟಿ.ರವಿಯವರ ಮೇಲೆ ಅನವಶ್ಯಕ ದಾಳಿ ಮಾಡಿದರು, ಕಾರಣ ಸಿ.ಟಿ.ರವಿ ಯವರು ಬೇರೆ ಭಾಷೆಗಳು ಬಿಬಿಎಂಪಿಯ ಕಾಲ್ ಸೆಂಟರ್ ನಲ್ಲಿ ಬೇಡ, ಕೆಲವರು ಕರ್ನಾಟಕದಲ್ಲಿ 5 ವರ್ಷಕ್ಕಿಂತಲೂ ಹೆಚ್ಚು ಕಾಲ ಇಲ್ಲಿರುತ್ತಾರೆ ಅಂತವರು ಇಲ್ಲಿಯ ಭಾಷೆ ಕಲಿತು ಇಲ್ಲಿಗೆ ಒಗ್ಗಿಕೊಳ್ಳುವುದು ಸೂಕ್ತ ಎಂದು ಹೇಳಿದ್ದು.

Why IT BT Kannadigas are protesting against Multilingual Call Center BBMP

ಬಿಜೆಪಿ ಮತ್ತು ಆರ್ ಎಸ್ ಎಸ್ ಗೆ ಸಂಬಂಧಿಸಿದ ಹೇಳಿಕೆಗಳನ್ನು ಕೊಟ್ಟ Media Watcher(@india_msm),
1) ಆರ್ ಎಸ್ ಎಸ್ ನ ಮುಖ್ಯ ಅಜೆಂಡಾ ಹಿಂದಿಯನ್ನು ಪಸರಿಸುವುದು,
2) ಪ್ರಾಮುಖ್ಯತೆ ಕೊಡಬೇಕಾಗಿರುವುದು ಹಿಂದಿಗೆ,ನಿಮ್ಮ ಕನ್ನಡಕ್ಕಲ್ಲ,
3) ನೀವು ಅದರ ವಿರುದ್ಧವಾಗಿ ನಡೆಯುತ್ತಿದ್ದೀರಿ, ಸದ್ಯದಲ್ಲೇ ಮೋದಿಯನ್ನು ಭೇಟಿಯಾಗುತ್ತಿದ್ದೇನೆ,
4) ಮೋದಿಯವರಿಗೆ ಇದರ ಬಗ್ಗೆ ತಿಳಿಸುತ್ತೇನೆ ನಿಮ್ಮ ವಿರುದ್ಧ ಕ್ರಮ ತೆಗೆದು ಕೊಳ್ಳುತ್ತೇವೆ. ಎಂಬುದಾಗಿ ಸಿ ಟಿ ರವಿಯವರ ಮೇಲೆ ಟ್ವೀಟ್ ಗಳನ್ನು ಮಾಡಿದ್ದಾರೆ.

ಇದಕ್ಕೆ ಪ್ರತಿರೋಧವಾಗಿ ಐಟಿ ಬಿಟಿ ಕನ್ನಡಿಗರು Media Watcher(@india_msm) ನ ಮೇಲೆ ಮತ್ತು ಸಿ ಟಿ ರವಿ ಗೆ ವಿರೋಧವಾಗಿ ಟ್ವೀಟ್ ಮಾಡುತ್ತಿದ್ದವರ ಮೇಲೆ ಹರಿ ಹಾಯ್ದರು, ಸಿ ಟಿ ರವಿಯವರ ಬೆಂಬಲಕ್ಕೆ ನಿಂತರು. ವ್ಯಾಪಕ ವಿರೋಧ ವ್ಯಕ್ತವಾದ ಮೇಲೆ ಕನ್ನಡದ ವಿರುದ್ದವಾಗಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

Why IT BT Kannadigas are protesting against Multilingual Call Center BBMP

ಪ್ರಾಮುಖ್ಯತೆ ಕೊಡಬೇಕಾಗಿರುವುದು ಹಿಂದಿಗೆ, ನಿಮ್ಮ ಕನ್ನಡಕ್ಕಲ್ಲ ಎಂಬ ಹೇಳಿಕೆಯಂತೂ ನಮ್ಮ ನಾಡಿಗೆ-ಭಾಷೆಗೆ-ಕನ್ನಡಿಗರಿಗೆ ದೊಡ್ಡ ಅಪಾಯವೊಂದು ಮುಂದಿರುವುದನ್ನು ಸೂಕ್ಷ್ಮವಾಗಿ ತಿಳಿಸುತ್ತಿದೆ.

ಅಲ್ಲ ಸ್ವಾಮಿ, ಒಂದು ಕಡೆ ಕಾಂಗ್ರೆಸ್ ಸರ್ಕಾರವುಳ್ಳ ಬಿಬಿಎಂಪಿ ಬೆಂಗಳೂರಿನಲ್ಲಿ ಪರ ಭಾಷಿಕರಿಗೆ ಅನುಕೂಲ ಆಗುವ ಹಾಗೆ 6 ಭಾಷೆಗಳಲ್ಲಿ ಕಾಲ್ ಸೆಂಟರ್ ತೆಗಿತೀವಿ ಅಂತಾರೆ, ಇನ್ನೊಂದು ಕಡೆ ಬಿಪಿಜೆಪಿಯ ಭಾಗವಾದ ದೇಶದ ಬಹು ದೊಡ್ಡ ಸ್ವಯಂ ಸೇವಕ ಸಂಸ್ಥೆಯೊಂದು ಪ್ರಾಮುಖ್ಯತೆ ಕೊಡಬೇಕಾಗಿರುವುದು ಹಿಂದಿಗೆ, ನಿಮ್ಮ ಕನ್ನಡಕ್ಕಲ್ಲ ಎಂದು ಘನತೆವೆತ್ತ ಕಾರ್ಯವೆಂಬಂತೆ ಹೇಳಿಕೊಳ್ಳುತ್ತಿದ್ದಾರೆ.

ಜೆಡಿಎಸ್ ಅಂತೂ ಕಚ್ಚಾಟದಲ್ಲೇ ಸಾಯುತ್ತಿದೆ. ಗೆದ್ದು ಸರ್ಕಾರ ಕಟ್ಟೋ ತನಕ ಜನತೆಯ ಕಾಲು ಹಿಡಿಯೋ ಪಕ್ಷಗಳು ಗೆದ್ದ ಮೇಲೆ ಕನ್ನಡ-ಕನ್ನಡಿಗ-ಕರ್ನಾಟಕ ಅನ್ನೋದನ್ನೇ ಮರೆತುಬಿಡುತ್ತವೆ. ಬಂದ ವಲಸಿಗರಿಗೆಲ್ಲ ಮಣೆ ಹಾಕುತ್ತವೆ.

Why IT BT Kannadigas are protesting against Multilingual Call Center BBMP

ಸಾಕು ಮಾಡಿ ನಿಮ್ಮ ಗುಲಾಮಗಿರಿತನವನ್ನು: ಈ ಗುಲಾಮ ಗಿರಿ ಮಾಡೋ ಪಕ್ಷಗಳು ಕನ್ನಡಕ್ಕೆ ಉಪಯೋಗ ಮಾಡುವ ಒಂದು ಕೆಲಸವನ್ನು ಮಾಡಿದ್ದಿಲ್ಲ. ಕಳಸಾ-ಬಂಡೂರಿಯ ಹೋರಾಟ ವರ್ಷವಾದರೂ ಯಾರು ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಸಾಕು ಮಾಡಿ ನಿಮ್ಮ ಗುಲಾಮಗಿರಿತನವನ್ನು, ಇನ್ನು ಮುಂದೆ ಆದರೂ ನಮ್ಮ ನಾಡಿಗೆ ಉಪಯೋಗ ಆಗುವಂತ ಕೆಲಸಗಳನ್ನು ಮಾಡಿ.

ಚಳಿಗೆ ಬೆಚ್ಚನೆ ರೊಗ್ಗು ಹೊದ್ದು ನಿದ್ದೆ ಮಾಡುತ್ತಿರುವ ವಿರೋಧ ಪಕ್ಷಗಳೇ ಎದ್ದೇಳಿ, ಬಿಬಿಎಂಪಿಯವರು ಕನ್ನಡ-ಕನ್ನಡಿಗ- ಕರ್ನಾಟಕಕ್ಕೆ ಮಾರಕವಾಗಿರುವ ಪರಭಾಷೆ ಕಾಲ್ ಸೆಂಟರ್ ತೆಗೆಯುವುದರ ವಿರುದ್ಧ ನಿಮ್ಮ ನಿಲುವು ವ್ಯಕ್ತಪಡಿಸಿ, ವಿರೋಧಿಸಿ. ಸಿ ಟಿ ರವಿಯವರನ್ನು ಬಿಟ್ಟರೆ ಬೇರೆ ಯಾವ ರಾಜಕಾರಣಿಗಳು ಇದರ ಬಗ್ಗೆ ಮಾತನಾಡಿಲ್ಲ ಅಥವಾ ಕರ್ನಾಟಕದಲ್ಲಿ ವಿರೋಧ ಪಕ್ಷವೇ ಇಲ್ಲವಾ...

Why IT BT Kannadigas are protesting against Multilingual Call Center BBMP

ಕಡೆಯದಾಗಿ, ಮೇಯರ್ ಆಗಿ ಒಂದು‌ ವರ್ಷಾ ಆಯ್ತಾ ಬಂತು, ನಿಮ್ಮ ಏರಿಯಾ ವ್ಯಾಪ್ತಿಯಲ್ಲಿ ಬರೋ ತಾವರೆಕೆರೆ, ಮಾರುತಿ ನಗರ, ಬಿಟಿಎಂ ಲೇಔಟ್, ಮಡಿವಾಳ, ಮೈಕೊ ಲೇಔಟ್, ಸಿಲ್ಕ್ ಬೋರ್ಡ್, ಇದರ ಒಂದು‌ ದಾರೀನಾದ್ರೂ ಸರಿ ಮಾಡ್ಸೋಕೆ ಆಗಲಿಲ್ಲ, ಮಳೆ ಬಂದ್ರೆ ಇರೋ ಬರೋ‌ ನೀರೆಲ್ಲ ರಸ್ತೆ ತುಂಬಾ ಹರಿತದೆ, ಅಲ್ಪ ಸ್ವಲ್ಪ ಇದ್ದ ರಸ್ತೆನೆಲ್ಲ ನುಣ್ಣಗೆ ನಿಧಿಗಳ್ಳರ ತರ ಅಗೆದಾಕಿ ಇನ್ನೂ ಗುಂಡಿಗಳಾಗಿವೆ,

ಒಂದು ರಸ್ತೆ ಆದ್ರೂ ನೀಟಾಗಿ ಮಾಡ್ಸೋಕೆ ಆಗಲಿಲ್ಲ, ಆಗ್ಲೋ-ಈಗ್ಲೋ ಬಿದ್ದೋಗೊ ಕುರ್ಚಿ ಮೇಲೆ ಕೂತ್ಕೊಂಡು ಬಂದ ಭಿಕಾರಿಗಳಿಗೆಲ್ಲ ಸಹಾಯ ಆಗೋ ತರ ಅವರವರ ಭಾಷೇಲಿ‌ ಕಾಲ್ ಸೆಂಟರ್ ಕೊಡ್ತೀರ, ಬೆಂಗಳೂರು, ಕರ್ನಾಟಕ ಬರ್ತಾ ಬರ್ತಾ ತೋಟದಪ್ಪನ ಛತ್ರಾ ಮಾಡೋಕೆ ಹೊರಟಿದ್ದೀರ.

ಸದ್ಯಕ್ಕೆ ಒಂದು ಭಾಷೆಯಲ್ಲಿ ಸಮಸ್ಯೆಗಳನ್ನು ಬಗೆ ಹರಿಸಿ ಅಂತ ಕೇಳಿದರೆ ನಿಮಗೆ ಸಮಸ್ಯೆಗಳನ್ನು ನಿವಾರಿಸೋಕೆ ಆಗ್ತಾ ಇಲ್ಲ, ಇನ್ನು 6 ಭಾಷೇಲಿ ಕಾಲ್ ಸೆಂಟರ್ ಕೊಟ್ರೆ ವಲಸಿಗರು ನಿಮ್ಮ ಜೊತೆ ದಿನ ರಗಳೆ ತೆಗಿತಾರೆ, ಹೇಗೆ ನಿಭಾಯಿಸ್ತೀರಾ ಸ್ವಾಮಿ... ಕೆಂಪೇಗೌಡರು ಕಟ್ಟಿದ ಕರ್ಮ ಭೂಮೀಲಿ ಯಾಕೀ ಅನಾಚಾರ, ನಿಮಗೆ ಪರಭಾಷೆಗಳ ಮೇಲೆ ಅಷ್ಟು ಇಷ್ಟ ಇದ್ರೆ ಅಲ್ಲಿಗೇ ಹೋಗಿ ಇದ್ದು ಬಿಡಿ... ಓಟ್ ಹಾಕಿದವರ ಜನ್ಮ ಸಾರ್ಥಕ ಆಗೋಯ್ತು....

English summary
IT BT Kannadigas group and Pro Kannada organisation are opposing Bruhat Bengaluru Mahanagara Palike(BBMP)'s concept of centralized control room and Helpline services in multilingual. Here are the reasons why IT BT Kannadigas group are campaigning on Twitter
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X