ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಡೋಸಲ್ಫಾನ್ ಸಂತ್ರಸ್ತರು ಸರ್ಕಾರದ ಮುಂದಿಟ್ಟ ಬೇಡಿಕೆಯೇನು?

By ಐಸಾಕ್ ರಿಚರ್ಡ್
|
Google Oneindia Kannada News

ಬೆಂಗಳೂರು, ನವೆಂಬರ್, 19 : ಪರಿಹಾರ ಹಣ, ಮಾಸಾಶನ ಹೆಚ್ಚಳ, ಉಚಿತ ಚಿಕಿತ್ಸೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಂಡೋಸಲ್ಫೋನ್ ಎಂಬ ಮಹಾರೋಗಕ್ಕೆ ತುತ್ತಾಗಿ ನರಕಯಾತನೆ ಅನುಭವಿಸುತ್ತಿರುವ ಪೀಡಿತರು ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ಎಂಡೋ ಸಲ್ಫಾನ್ ಸಿಂಪಡಣೆಯಿಂದ ವಿವಿಧ ಸಮಸ್ಯೆಗೆ ಒಳಗಾಗಿದ್ದ ಜಿಲ್ಲೆಯ ಮಂದಿಗೆ ಪರಿಹಾರ ನೀಡಬೇಕು ಎಂದು ಕಳೆದ ಹಲವಾರು ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ. ಆದರೂ ಸೂಕ್ತ ರೀತಿಯ ಪರಿಹಾರ ಲಭ್ಯವಾಗುತ್ತಿಲ್ಲ. ಸರ್ಕಾರ ಭರವಸೆಯ ಆಶಾಗೋಪುರವನ್ನೇ ಕಟ್ಟಿತೇ ಹೊರತು ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.[ಕೊಕ್ಕಡದಲ್ಲಿ ನರಕ ಸೃಷ್ಟಿಸಿರುವ ಎಂಡೋಸಲ್ಫಾನ್]

ಎಂಡೋಸಲ್ಫಾನ್ ಪೀಡಿತರ ಹೋರಾಟಕ್ಕೆ ಸಿನಿಮಾ ಧಾರವಾಹಿ ನಟರು ಸೇರಿದಂತೆ ಅನೇಕರು ಭಾಗವಹಿಸಿದ್ದು, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ, ಶಾಸಕರಾದ ಸಿ.ಟಿ ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಶಕುಂತಲಾ ಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.


ಎಂಡೋ ಸಲ್ಫಾನ್ ಸಂತ್ರಸ್ತರು ಸರ್ಕಾರದ ಮುಂದೆ ಇಟ್ಟಿರುವ ಬೇಡಿಕೆಗಳೇನು?

* ಎಂಡೋ ಸಲ್ಫಾನ್ ಪೀಡಿತರಿಗೆ ನೀಡುತ್ತಿರುವ ಮಾಸಾಶನವನ್ನು 3 ರಿಂದ 5 ಸಾವಿರಕ್ಕೆ ಏರಿಸಬೇಕು
* 5 ರಿಂದ 10 ಲಕ್ಷ ಪರಿಹಾರ ಹಣವನ್ನು ಕುಟುಂಬಕ್ಕೆ ನೀಡಬೇಕು
*1600 ಮಂದಿಗೆ 6 ತಿಂಗಳಿನಿಂದ ತಡೆ ಹಿಡಿದಿರುವ ಮಾಸಾಶನವನ್ನು ಶೀಘ್ರವೇ ಬಿಡುಗಡೆ ಮಾಡಬೇಕು
* ಚಿಕಿತ್ಸೆಗೆ ಹೋಗಿಬರಲು ಎಂಡೋಸಲ್ಫಾನ್ ಸಂತ್ರಸ್ತರಿಗೆ ಉಚಿತ ಬಸ್ ಮತ್ತು ರೈಲು ಪಾಸ್ ವಿತರಿಸಬೇಕು
* ಎಂಡೋಲ್ಫಾನ್ ಬಾದಿತ ಪ್ರತಿ ಕುಟುಂಬಕ್ಕೆ ತಿಂಗಳಿಗೆ 50 ಕೆಜಿ ಪೌಷ್ಠಿಕ ಆಹಾರ ಒದಗಿಸಬೇಕು
* ಕುಟುಂಬದವರಿಗೆ ಬಡ್ಡಿ ರಹಿತ ಸಾಲ ನೀಡಬೇಕು ಮತ್ತು ಉಚಿತ ಶಿಕ್ಷಣ ಕಲ್ಪಿಸಬೇಕು
* ಎಂಡೋಸಲ್ಫಾನ್ ಬಾದಿತ ಮಕ್ಕಳನ್ನು ನೋಡಿಕೊಳ್ಳುವವರಿಗೆ 2000 ಹಣವನ್ನು ಸರ್ಕಾರವೇ ನೀಡಬೇಕು
* ಶಾಶ್ವತ ಪುನರ್ವಸತಿ ಕೇಂದ್ರವನ್ನು ನಿರ್ಮಾಣ ಮಾಡಬೇಕು

English summary
Endosulfan victims has taken protest in Freedom park, Bengaluru, on Wednesday, November 18th. They put on some demands to the government like free medical treatment, pention, free bus and railway pass, 5 to 10 lakhs compensation etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X