ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವೀಣ್ ಸೂದ್ ನಡೆ ಟೀಕಿಸಿ ವಿಡಿಯೋ ಅಪ್ಲೋಡ್ ಮಾಡಿದ ಪ್ರತಾಪ್ ಸಿಂಹ

ಪ್ರಭಾ ಬೈಲಹೊಂಗಲ ಅವರ ಬಗ್ಗೆ ದೂರು ನೀಡಿ ಹತ್ತು ದಿನವಾದರೂ ಕ್ರಮಕೈಗೊಳ್ಳದ ಪ್ರವೀಣ್ ಸೂದ್ ಅವರ ನಡೆಯನ್ನು ಪ್ರಶ್ನಿಸಿ ಸಂಸದ ಪ್ರತಾಪ್ ಸಿಂಹ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾರೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 1: ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರ ನಡೆಯನ್ನು ಟೀಕಿಸಿ ಫೇಸ್‍ಬುಕ್‍ ನಲ್ಲಿ ವಿಡಿಯೋ ಒಂದನ್ನು ಸಂಸದ ಪ್ರತಾಪ್ ಸಿಂಹ ಅಪ್ಲೋಡ್ ಮಾಡಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ಪ್ರಭಾ ಬೆಳವಂಗಲ ಫೇಸ್‍ಬುಕ್ ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದರ ವಿಚಾರಕ್ಕೆ ಸಂಬಂಧಿಸಿದಂತೆ ನಾವು ದೂರು ನೀಡಿದ್ದರೂ ಪೊಲೀಸರು ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.[ಗೂಟದ ಕಾರು ನೆನಪಾಗಿ ಗೀತಾ ಚುನಾವಣೆಗೆ:ಹೇಳಿಕೆ ಹಿಂಪಡೆದ ಪ್ರತಾಪ್ ಸಿಂಹ]

What is the status of Prabha case: Simha asks Sood

ದೂರು ನೀಡುವ ವೇಳೆ ಆ ವ್ಯಕ್ತಿ ಇದ್ದರೋ ಇಲ್ಲವೋ ಗೊತ್ತಿಲ್ಲ. ಯುಆರ್ ಎಲ್ ಚೆಕ್ ಮಾಡಬೇಕು ಎಂದು ಪ್ರವೀಣ್ ಸೂದ್ ಹೇಳಿದ್ದಕ್ಕೆ ನಾವು ಪ್ರಭಾ ಅವರಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ನೀಡಿದ್ದೇವೆ. ಆದರೆ ದೂರಿನ ಸ್ಥಿತಿ ಏನಾಗಿದೆ ಎನ್ನುವುದನ್ನು ಅವರು ತಿಳಿಸಿಲ್ಲ. ಈ ಬಗ್ಗೆ ಸೋಮವಾರ ಕೇಳಿದ್ದಕ್ಕೆ ನಾನೇ ನಿಮಗೆ ಫೋನ್ ಮಾಡುತ್ತೇನೆ ಎಂದು ಸೂದ್ ಹೇಳಿದ್ದರು. ಆದರೆ ದೂರು ದಾಖಲಾದ ಬಳಿಕ 10 ದಿನವಾದರೂ ಇದೂವರೆಗೂ ಈ ಬಗ್ಗೆ ಏನೂ ಗೊತ್ತಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.[ಯೋಗಿ ಆದಿತ್ಯನಾಥ್ ಅವಹೇಳನ : ಪ್ರತಾಪ್ ಸಿಂಹ ಆಕ್ರೋಶ]

ಸಿಎಂ ಸಿದ್ದರಾಮಯ್ಯ ವಿರುದ್ಧ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಕ್ಕೆ ತುಮಕೂರಿನಲ್ಲಿ ನಾಗರಾಜ ಎಂಬುವವರನ್ನು ಬಂಧಿಸುತ್ತೀರಿ. ಅದೇ ಆಸಕ್ತಿಯನ್ನು ಈ ಪ್ರಕರಣದಲ್ಲಿ ಯಾಕೆ ತೋರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ದೂರು ನೀಡಿದ ವ್ಯಕ್ತಿಗೆ ಆ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ತಿಳಿಯುವ ಹಕ್ಕು ಇದೆ. ಅಷ್ಟೇ ಅಲ್ಲದೇ ದೂರು ನೀಡಿದ ವ್ಯಕ್ತಿಗೆ ಆ ಪ್ರಕರಣ ಎಲ್ಲಿಗೆ ಬಂತು ಎಂದು ತಿಳಿಸುವುದು ಪೊಲೀಸರ ಕರ್ತವ್ಯ. ಆದರೆ ಈ ಪ್ರಕರಣದಲ್ಲಿ ಇದ್ಯಾವುದು ನಡೆಯುತ್ತಿಲ್ಲ ಯಾಕೆ ಎಂದು ಅವರು ಪ್ರವೀಣ್ ಸೂದ್ ಅವರಲ್ಲಿ ಪ್ರಶ್ನಿಸಿದ್ದಾರೆ.

ಒಂದು ವೇಳೆ ಈ ಪ್ರಕರಣದ ಬಗ್ಗೆ ನೀವು ತಿಳಿಸದೇ ಇದ್ದರೆ ನಾವು ಹೈಕೋರ್ಟ್ ಮೊರೆ ಹೋಗಿ ಉತ್ತರವನ್ನು ಪಡೆದುಕೊಳ್ಳಬೇಕಾಗುತ್ತದೆ. ಒಬ್ಬ ಸಂಸದನ ದೂರಿಗೆ ಸ್ಪಂದಿಸದ ನೀವು ಜನ ಸಾಮಾನ್ಯರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತೀರಿ, ಪೊಲೀಸ್ ಇಲಾಖೆಯ ಬಗ್ಗೆ ನನಗೆ ಗೌರವ ಇದೆ. ಹೀಗಾಗಿ ಈ ವಿಡಿಯೋ ನೋಡಿಯಾದರೂ ನೀವು ಉತ್ತರ ನೀಡುತ್ತೀರಿ ಎನ್ನುವ ನಂಬಿಕೆಯನ್ನು ನಾನು ಇಟ್ಟುಕೊಂಡಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.[ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರಭಾ ದೂರು]

ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಿಳೆಯೊಬ್ಬಳ ಜೊತೆ ಇರುವ ನಕಲಿ ಅಶ್ಲೀಲ ವಿಡಿಯೋದ ಚಿತ್ರವನ್ನು ಪ್ರಭಾ ಬೆಳವಂಗಲ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದರು. ಇದನ್ನು ಖಂಡಿಸಿ ಪ್ರಭಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಬಿಜೆಪಿ ಯುವಮೋರ್ಚಾ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರಿಗೆ ದೂರು ನೀಡಿತ್ತು

English summary
BJP MP Pratap Simha has uploaded a vedio in his facebook wall, asking the status of Prabha belavangala's case from city police commissioner Praveen sood. Prabha had uploaded a fake photo of Yogi Adityanath in her facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X