{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/bengaluru/what-is-stopping-bengaluru-from-achieving-cleanliness-sign-petition-092150.html" }, "headline": "ಕ್ಲೀನ್ ಬೆಂಗಳೂರು ಬೇಕಾ? ಇಲ್ಲಿ ಋಜು ಹಾಕಿ", "url":"https://kannada.oneindia.com/news/bengaluru/what-is-stopping-bengaluru-from-achieving-cleanliness-sign-petition-092150.html", "image": { "@type": "ImageObject", "url": "http://kannada.oneindia.com/img/1200x60x675/2015/02/28-1425105775-bengaluru-garbage600.jpg", "width": "1200", "height":"675" }, "thumbnailUrl":"http://kannada.oneindia.com/img/128x50/2015/02/28-1425105775-bengaluru-garbage600.jpg", "datePublished": "2015-02-28T12:19:50+05:30", "dateModified": "2015-03-02T13:18:40+05:30", "author": { "@type": "Person", "name": "ಎಸ್ಕೆ ಶಾಮ ಸುಂದರ" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Bangalore", "description": "What is stopping Bengaluru from achieving cleanliness? Badrinath Vittal, one such citizen of the city, has come up with a new initiative to raise awareness of cleanliness. He has launched an online petition procedure to be submitted to the chief authorities and the state government.", "keywords": "Call for Swacchta in Namma Bengaluru, ಸ್ವಚ್ಛ ಬೆಂಗಳೂರು ಬೇಕಿದ್ದವರು ಇದನ್ನು ಓದಿ, ಸಹಿಹಾಕಿ ", "articleBody":"ನಮ್ಮ ಬೆಂಗಳೂರಿನ ಕಸದ ಸಮಸ್ಯೆ ಬಗ್ಗೆ ದೇಶ ವಿದೇಶಗಳಲ್ಲಿ ಚರ್ಚೆಯಾಗಿದೆ.ಗಾರ್ಡನ್ ಸಿಟಿ -ನಮ್ಮ ಬೆಂಗಳೂರಿನ ನಾಗರೀಕರು ಸಮಸ್ಯೆ, ನಿವಾರಣೆ ಬಗ್ಗೆ ಯೋಚಿಸುವ ಮೊದಲೇ ಸಮಸ್ಯೆ ಹುದುಗಿ ಹೋಗಿದೆ. ಅದರೆ, ಪರಿಹಾರವಂತೂ ಸಿಕ್ಕಿಲ್ಲ. ಸ್ವಚ್ಛ ಬೆಂಗಳೂರು ಎಂಬುದು ಇನ್ನೂ ಕಲ್ಪನೆಯಲ್ಲಿ, ಕಾಗದದಲ್ಲೇ ಉಳಿದಿದೆ.ಕಸದ ಸಮಸ್ಯೆಯಿಂದಾಗಿ ಗಾರ್ಡನ್ ಸಿಟಿ ಯಿಂದ ಬೆಂಗಳೂರು ಗಾರ್ಬೇಜ್ ಸಿಟಿ ಯಾಗಿದೆ. ಆಡಳಿತ ಸಂಸ್ಥೆಗಳು, ಕರ್ನಾಟಕ ಸರ್ಕಾರಗಳು ಕಾಲಕಾಲಕ್ಕೆ ಅನೇಕ ಪರಿಹಾರ ಘೋಷಣೆ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಬೆಂಗಳೂರಿನ ಮಾನ ಹರಾಜಿದ್ದನ್ನು ತಪ್ಪಿಸಲಾಗಲಿಲ್ಲ.ಪರಿಸ್ಥಿತಿ ಹೀಗಿರುವಾಗ, ಬೆಂಗಳೂರು ಎಂದಾದರೂ ಕಸಮುಕ್ತಗೊಳ್ಳಲು ಸಾಧ್ಯವೇ? ಸ್ವಚ್ಛ ಬೆಂಗಳೂರಿಗೆ ಯಾರು ಕರೆ ನೀಡುತ್ತಾರೆ? ಎಂಬ ಮುಖ್ಯವಾದ ಪ್ರಶ್ನೆ ಮೂಡುತ್ತದೆ.ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ ಪ್ರತಿ ನಾಗರಿಕರು ಅರ್ಧ ಕಿಲೋ ತ್ಯಾಜ್ಯವನ್ನು ಹೊರಹಾಕುತ್ತಿದ್ದಾರೆ. ಪ್ರತಿ ದಿನಕ್ಕೆ 5,000 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಬಿಬಿಎಂಪಿಯಲ್ಲಿ 14,000 ಪೌರಕಾರ್ಮಿಕರಿದ್ದಾರೆ. ಅದರೆ, ಸಮಸ್ಯೆ ಮಾತ್ರ ಹಾಗೆ ಇದೆ.ಕರ್ನಾಟಕ ಸರ್ಕಾರ ಹಾಗೂ ಬಿಬಿಎಂಪಿ ಸರಿಯಾಗಿ ಕಾರ್ಯ ನಿರ್ವಹಣೆ ಮಾಡಲಾಗದ ಸಂದರ್ಭದಲ್ಲಿ ನಾಗರಿಕರು ಎಚ್ಚೆತ್ತುಕೊಂಡು ಜನ ಜಾಗೃತ ಮೂಡಿಸಬೇಕಿದೆ. ಇದಕ್ಕಾಗಿ ಸ್ವಚ್ಛ ಬೆಂಗಳೂರು ಅಭಿಯಾನವನ್ನು ಆರಂಭಿಸಬೇಕಿದೆ.ಈ ನಿಟ್ಟಿನಲ್ಲಿ ಬದ್ರಿನಾಥ್ ವಿಠಲ್ ಅವರು ಹೊಸ ನಡೆ ಇಟ್ಟಿದ್ದು ಆನ್ ಲೈನ್ ಮೂಲಕ ಬದಲಾವಣೆಗಾಗಿ ಪಿಟಿಷನ್ ಹಾಕಿದ್ದಾರೆ.ಈ ಪಿಟಿಷನ್ ನಲ್ಲಿ ಸಹಿ ಹಾಕುವ ಮೂಲಕ ನಿಮ್ಮ ಕಾಳಜಿ ಹಾಗೂ ಮನವಿಯನ್ನು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲುಪಿಸಲಾಗುತ್ತದೆ.ದೇಶದಲ್ಲಿ ಅನೇಕ ನಗರಗಳು ಸಾಂಘಿಕ ಹೋರಾಟದ ಮೂಲಕ ತಮ್ಮ ನಗರವನ್ನು ಸ್ವಚ್ಛಗೊಳಿಸಿವೆ. ನಾವು ಏಕೆ ಈ ರೀತಿ ಚಳವಳಿ ಆರಂಭಿಸಬಾರದು. ಜನಪ್ರತಿನಿಧಿಗಳ ಕೈಲಿಂದ ಕೆಲಸ ಮಾಡಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.ಸ್ವಚ್ಛ ಭಾರತ್ ಅಭಿಯಾನದ ನಿಜ ಪ್ರಯೋಜನ ಗ್ರಾಮೀಣ ಭಾಗದ ಜೊತೆಗೆ ನಗರಗಳಿಗೆ ಆಗಬೇಕಿದೆ. ಅದರಲ್ಲೂ ನಮ್ಮ ಬೆಂಗಳೂರು ಮತ್ತೆ ಸ್ವಚ್ಛ ಸುಂದರಗೊಳ್ಳಬೇಕಿದೆ. ಇದಕ್ಕಾಗಿ ಈ ಆನ್ ಲೈನ್ ಅರ್ಜಿಯಲ್ಲಿ ಹೆಚ್ಚೆಚ್ಚು ನಾಗರಿಕರು ಸಹಿ ಹಾಕಬೇಕಿದೆ ಆನ್ ಲೈನ್ ಪಿಟಿಷನ್ ಲಿಂಕ್ ಇಲ್ಲಿದೆ ದಯವಿಟ್ಟು ನಿಮ್ಮ ನಗರಕ್ಕಾಗಿ ಕ್ಲಿಕ್ ಮಾಡಿ" }
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಲೀನ್ ಬೆಂಗಳೂರು ಬೇಕಾ? ಇಲ್ಲಿ ಋಜು ಹಾಕಿ

By ಎಸ್ಕೆ ಶಾಮ ಸುಂದರ
|
Google Oneindia Kannada News

ನಮ್ಮ ಬೆಂಗಳೂರಿನ ಕಸದ ಸಮಸ್ಯೆ ಬಗ್ಗೆ ದೇಶ ವಿದೇಶಗಳಲ್ಲಿ ಚರ್ಚೆಯಾಗಿದೆ.ಗಾರ್ಡನ್ ಸಿಟಿ -ನಮ್ಮ ಬೆಂಗಳೂರಿನ ನಾಗರೀಕರು ಸಮಸ್ಯೆ, ನಿವಾರಣೆ ಬಗ್ಗೆ ಯೋಚಿಸುವ ಮೊದಲೇ ಸಮಸ್ಯೆ ಹುದುಗಿ ಹೋಗಿದೆ. ಅದರೆ, ಪರಿಹಾರವಂತೂ ಸಿಕ್ಕಿಲ್ಲ. ಸ್ವಚ್ಛ ಬೆಂಗಳೂರು ಎಂಬುದು ಇನ್ನೂ ಕಲ್ಪನೆಯಲ್ಲಿ, ಕಾಗದದಲ್ಲೇ ಉಳಿದಿದೆ.

ಕಸದ ಸಮಸ್ಯೆಯಿಂದಾಗಿ ಗಾರ್ಡನ್ ಸಿಟಿ ಯಿಂದ ಬೆಂಗಳೂರು ಗಾರ್ಬೇಜ್ ಸಿಟಿ ಯಾಗಿದೆ. ಆಡಳಿತ ಸಂಸ್ಥೆಗಳು, ಕರ್ನಾಟಕ ಸರ್ಕಾರಗಳು ಕಾಲಕಾಲಕ್ಕೆ ಅನೇಕ ಪರಿಹಾರ ಘೋಷಣೆ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಬೆಂಗಳೂರಿನ ಮಾನ ಹರಾಜಿದ್ದನ್ನು ತಪ್ಪಿಸಲಾಗಲಿಲ್ಲ.

ಪರಿಸ್ಥಿತಿ ಹೀಗಿರುವಾಗ, ಬೆಂಗಳೂರು ಎಂದಾದರೂ ಕಸಮುಕ್ತಗೊಳ್ಳಲು ಸಾಧ್ಯವೇ? ಸ್ವಚ್ಛ ಬೆಂಗಳೂರಿಗೆ ಯಾರು ಕರೆ ನೀಡುತ್ತಾರೆ? ಎಂಬ ಮುಖ್ಯವಾದ ಪ್ರಶ್ನೆ ಮೂಡುತ್ತದೆ.

ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ ಪ್ರತಿ ನಾಗರಿಕರು ಅರ್ಧ ಕಿಲೋ ತ್ಯಾಜ್ಯವನ್ನು ಹೊರಹಾಕುತ್ತಿದ್ದಾರೆ. ಪ್ರತಿ ದಿನಕ್ಕೆ 5,000 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಬಿಬಿಎಂಪಿಯಲ್ಲಿ 14,000 ಪೌರಕಾರ್ಮಿಕರಿದ್ದಾರೆ. ಅದರೆ, ಸಮಸ್ಯೆ ಮಾತ್ರ ಹಾಗೆ ಇದೆ.

ಕರ್ನಾಟಕ ಸರ್ಕಾರ ಹಾಗೂ ಬಿಬಿಎಂಪಿ ಸರಿಯಾಗಿ ಕಾರ್ಯ ನಿರ್ವಹಣೆ ಮಾಡಲಾಗದ ಸಂದರ್ಭದಲ್ಲಿ ನಾಗರಿಕರು ಎಚ್ಚೆತ್ತುಕೊಂಡು ಜನ ಜಾಗೃತ ಮೂಡಿಸಬೇಕಿದೆ. ಇದಕ್ಕಾಗಿ ಸ್ವಚ್ಛ ಬೆಂಗಳೂರು ಅಭಿಯಾನವನ್ನು ಆರಂಭಿಸಬೇಕಿದೆ.

ಈ ನಿಟ್ಟಿನಲ್ಲಿ ಬದ್ರಿನಾಥ್ ವಿಠಲ್ ಅವರು ಹೊಸ ನಡೆ ಇಟ್ಟಿದ್ದು ಆನ್ ಲೈನ್ ಮೂಲಕ ಬದಲಾವಣೆಗಾಗಿ ಪಿಟಿಷನ್ ಹಾಕಿದ್ದಾರೆ.ಈ ಪಿಟಿಷನ್ ನಲ್ಲಿ ಸಹಿ ಹಾಕುವ ಮೂಲಕ ನಿಮ್ಮ ಕಾಳಜಿ ಹಾಗೂ ಮನವಿಯನ್ನು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲುಪಿಸಲಾಗುತ್ತದೆ.

ದೇಶದಲ್ಲಿ ಅನೇಕ ನಗರಗಳು ಸಾಂಘಿಕ ಹೋರಾಟದ ಮೂಲಕ ತಮ್ಮ ನಗರವನ್ನು ಸ್ವಚ್ಛಗೊಳಿಸಿವೆ. ನಾವು ಏಕೆ ಈ ರೀತಿ ಚಳವಳಿ ಆರಂಭಿಸಬಾರದು. ಜನಪ್ರತಿನಿಧಿಗಳ ಕೈಲಿಂದ ಕೆಲಸ ಮಾಡಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.

ಸ್ವಚ್ಛ ಭಾರತ್ ಅಭಿಯಾನದ ನಿಜ ಪ್ರಯೋಜನ ಗ್ರಾಮೀಣ ಭಾಗದ ಜೊತೆಗೆ ನಗರಗಳಿಗೆ ಆಗಬೇಕಿದೆ. ಅದರಲ್ಲೂ ನಮ್ಮ ಬೆಂಗಳೂರು ಮತ್ತೆ ಸ್ವಚ್ಛ ಸುಂದರಗೊಳ್ಳಬೇಕಿದೆ. ಇದಕ್ಕಾಗಿ ಈ ಆನ್ ಲೈನ್ ಅರ್ಜಿಯಲ್ಲಿ ಹೆಚ್ಚೆಚ್ಚು ನಾಗರಿಕರು ಸಹಿ ಹಾಕಬೇಕಿದೆ ಆನ್ ಲೈನ್ ಪಿಟಿಷನ್ ಲಿಂಕ್ ಇಲ್ಲಿದೆ ದಯವಿಟ್ಟು ನಿಮ್ಮ ನಗರಕ್ಕಾಗಿ ಕ್ಲಿಕ್ ಮಾಡಿ

English summary
Bengaluru is increasingly turning from a Garden City to a Garbage City, agonising its proud residents, but the authorities seem to be little bothered. But what is stopping Bengaluru from achieving cleanliness? Badrinath Vittal, one such citizen of the city, has come up with a new initiative to raise awareness of cleanliness. He has launched an online petition procedure to be submitted to the chief authorities and the state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X