ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ದಾಳಿ: ಅಕ್ರಮದ ವಿರುದ್ಧ ಜನಪ್ರತಿನಿಧಿಗಳ ಆಕ್ರೋಶ

By Ananthanag
|
Google Oneindia Kannada News

ಬೆಂಗಳೂರು, ಡಿಸೆಂಬರ್ 2: ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಇಬ್ಬರು ಅಧಿಕಾರಿಗಳ ಮನೆಯಲ್ಲಿ ಕೋಟ್ಯಂತರ ನಗದು ಹಾಗು ಅಪಾರ ಪ್ರಮಾಣದ ಚಿನ್ನಾಭರಣ ವಶವಾಗಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಇದರ ಬಗ್ಗೆ ರಾಜೀಯ ಮುಖಂಡರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಅಷ್ಟೊಂದು ಪ್ರಮಾಣದ ಹಣ ಎಲ್ಲಿತ್ತು. ಅಷ್ಟೊಂದು ಪ್ರಮಾಣದ ಹಣ ಎಲ್ಲಿತ್ತು? ಹೊಸ ನೋಟುಗಳು ಎಲ್ಲಿಂದ ಬಂತು? ಹೇಗೆ ಬದಲಾಯಿಸಲಾಯಿತು ಹೀಗೆ ಹತ್ತು ಹಲವು ಪ್ರಶ್ನೆಗಳು ಎಲ್ಲೆಡೆ ಕೇಳಿಬರುತ್ತಿದೆ. ಕಾವೇರಿ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕ
ಚಿಕ್ಕರಾಯಪ್ಪ ಅವರ ಮನೆ ಮೇಲೆ ನಡೆದ ಐಟಿ ದಾಳಿಯಲ್ಲಿ ಅಪಾರ ಪ್ರಮಾಣದ ನಗದು ಹಾಗೂ ಆಸ್ತಿ ದಾಖಲೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ತೀವ್ರ ಇರಿಸುಮುರಿಸು ಉಂಟಾಗಿದೆ.

ಸುವರ್ಣಸೌಧದ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ , ಸಿ.ಟಿ.ರವಿ, ಸೋಮಣ್ಣ ಮತ್ತಿತರರು ಅಕ್ರಮ ಹಣ ಪತ್ತೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.[ಐಟಿ ದಾಳಿ: ಇಬ್ಬರು ಭ್ರಷ್ಟ ಅಧಿಕಾರಿಗಳು ಅಮಾನತು]

ಕಾಣದ ಕೈಗೆಳೆಷ್ಟು?

ಕಾಣದ ಕೈಗೆಳೆಷ್ಟು?

ಸಮಾಜವಾದಿ ಸರ್ಕಾರದ ನಡೆಸುವ ಸಿಎಂ ಶಿಷ್ಯಂದಿರು ಸಿಕ್ಕಿಬಿದ್ದಿದ್ದಾರೆ. ನೋಟು
ರದ್ದತಿಯಿಂದಾಗಿ ಹಣವಿದ್ದರೂ ಕಂಗಾಲಾಗಿದ್ದಾರೆ. ಆದರೆ ಅಧಿಕಾರಿಗಳ ಬಳಿ ಇಷ್ಟು ಪ್ರಮಾಣದ
ಹಣ ಹೇಗೆ ಬಂತು? ಇಷ್ಟು ಬೇಗ ಕೋಟಿಗಟ್ಟಲೆ ಹೊಸ ನೋಟು ಎಲ್ಲಿಂದ ಬಂತು, ಅಧಿಕಾರಿಯೊಬ್ಬರ
ಬಳಿಯೇ ಇಷ್ಟು ಹಣವಿದ್ದರೆ ಇನ್ನು ಇವರ ಹಿಂದಿರುವವರ ಬಳಿ ಎಷ್ಟು ನೋಟು ಇರಬಹುದು ಎಂದು
ಬಿಜೆಪಿ ನಾಯಕ ಸಿ.ಟಿ.ರವಿ ಪ್ರಶ್ನಿಸಿದರು.

ಸಿಎಂ ಮೇಲೆ ಅನುಮಾನ?

ಸಿಎಂ ಮೇಲೆ ಅನುಮಾನ?

ಐಟಿ ದಾಳಿಯಲ್ಲಿ ಸಿಕ್ಕಿ ಹಾಕಿಕೊಂಡಿರುವವರು ಸಿಎಂ ಆಪ್ತರು, ಇದರ ಬಗ್ಗೆ ಸಮಗ್ರ
ತನಿಖೆಯಾಗಬೇಕು. ಹೊಸ ನೋಟು ಸಿಕ್ಕಿವೆ ಎಂದರೇನು? ಮುಖ್ಯಮಂತ್ರಿಗಳ ಮೇಲೆ ಅನುಮಾನ
ಮೂಡುತ್ತದೆ. ದೊಡ್ಡವರ ಕೈವಾಡವಿದೆ. ಇಷ್ಟು ಹೊಸ ನೋಟುಗಳು ಯಾವ ಬ್ಯಾಂಕ್ನಿಂದ ಬಂದಿತ್ತು
ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತ ಪಡಿಸಿದರು.

ಹಿಂದಿರುವ ಬ್ಯಾಂಕ್ ಅಧಿಕಾರಿ ಯಾರು?

ಹಿಂದಿರುವ ಬ್ಯಾಂಕ್ ಅಧಿಕಾರಿ ಯಾರು?

ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ಪತ್ತೆಯಾದ ಹಣದ ಹಿಂದೆ ಪ್ರಭಾವಿ ಮಂತ್ರಿಗಳಿದ್ದಾರೆ.
ಹಿರಿಯ ಅಧಿಕಾರಿಯ ಮನೆಯಲ್ಲಿ ಕಪ್ಪು ಹಣ ಸಿಕ್ಕಿದ್ದರೂ ಮುಖ್ಯಮಂತ್ರಿಗಳು ಏನು
ಮಾಡುತ್ತಿದ್ದಾರೆ. 6 ಕೋಟಿಯಷ್ಟು ಹೊಸ ನೋಟು ಪತ್ತೆಯಾಗಿರುವುದರ ಹಿಂದೆ ಯಾರು ಇದ್ದಾರೆ
ಎಂಬುದು ತಿಳಿಯಬೇಕು. ಇದರ ಹಿಂದಿರುವ ಬ್ಯಾಂಕ್ ಅಧಿಕಾರಿ ಯಾರು, ಇದಕ್ಕೆ ಪ್ರಭಾವ
ಬೀರಿರುವವರು ಯಾರು ಈ ಎಲ್ಲ ವಿಷಯಗಳ ಬಗ್ಗೆ ತಕ್ಷಣ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ
ಮುಖಂಡ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ಬೇಲಿಯೇ ಎದ್ದು ಹೊಲ ಮೇಯ್ದಂತೆ

ಬೇಲಿಯೇ ಎದ್ದು ಹೊಲ ಮೇಯ್ದಂತೆ

ಮುಖ್ಯಮಂತ್ರಿಗಳು ಭ್ರಷ್ಟಾಚಾರ ರಹಿತ ಆಡಳಿತ ಎನ್ನುತ್ತಾರೆ. ಆದರೆ ಇದು ಯಾವ ರೀತಿಯ
ಭ್ರಷ್ಟಾಚಾರ ಎಂದು ತಿಳಿಯುತ್ತಿಲ್ಲ. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಆರ್
ಬಿಐನವರೇ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಇಲ್ಲಿ ಕೋಟಿ ಕೋಟಿ ಹಣ ಸಿಗುತ್ತದೆ
ಎಂದರೆ ಏನು ಅರ್ಥ? ಕೇವಲ ಇವರನ್ನು ಅಮಾನತು ಮಾಡಿದರೆ ಸಾಲದು, ಈ ಘಟನೆಯ ಬಗ್ಗೆ ಕಠಿಣ
ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಕಾನೂನು ಕ್ರಮ ಕೈಗೊಳ್ಳಿ

ಕಾನೂನು ಕ್ರಮ ಕೈಗೊಳ್ಳಿ

ಕಾನೂನು ಕ್ರಮ ಕೈಗೊಳ್ಳಬೇಕು, ಅದಕ್ಕೂ ಮೊದಲು ಅವರನ್ನು ಅಮಾನತು ಮಾಡಬೇಕು, ಇಂತಹ
ಅಧಿಕಾರಿಗಳು ಇನ್ನು ಎಷ್ಟಿದ್ದಾರೋ ಗೊತ್ತಿಲ್ಲ ಕಂಡ ಕಂಡವರನೆಲ್ಲಾ ಅಮಾನತು ಮಾಡಿ ಮನೆಗೆ
ಕಳುಹಿಸಬೇಕು ರೈತ ಮುಖಂಡ ಪುಟ್ಟಣ್ಣಯ್ಯ ಎಂದು ತಿಳಿಸಿದರು.

ತಪ್ಪು ಮಾಡಿದವರಿಗೆ ಖಂಡಿತ ಶಿಕ್ಷೆ

ತಪ್ಪು ಮಾಡಿದವರಿಗೆ ಖಂಡಿತ ಶಿಕ್ಷೆ

ಕಾನೂನು ಚೌಕಟ್ಟಿನಲ್ಲಿ ಐಟಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಮುಂದಿನ ತನಿಖೆಯೂ
ನಡೆಯಬೇಕಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ ನಮಗೆ ಬ್ಯಾಂಕ್ನಲ್ಲಿ ಸಿಗೋದು 2
ಸಾವಿರ ಮಾತ್ರ. ಆದರೆ ಈ ಪ್ರಮಾಣದ ಹಣ ದೊರಕಿರುವುದು ಅಚ್ಚರಿ ಮೂಡಿಸಿದೆ. ಎಂದು ಗೃಹ
ಸಚಿವ ಡಾ.ಜಿ.ಪರಮೇಶ್ವರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

English summary
IT raid on two individuals at Bengaluru has led to a major seizure total of 152 crore. 5.7 in cash which were largely new notes. And 9 kg of jewelry. What is the opinion of state political leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X