ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಐಜಿ ರೂಪಾ ವರ್ಗಾವಣೆ: ಗಣ್ಯರು ಏನಂತಾರೆ?

|
Google Oneindia Kannada News

ಬೆಂಗಳೂರು, ಜುಲೈ 17: "ಪ್ರಾಮಾಣಿಕ ಅಧಿಕಾರಿಯನ್ನು ಎಲ್ಲಿಗೇ ವರ್ಗಾಯಿಸಿದರೂ ಆತನಿಗೆ ಅದು ಶಿಕ್ಷೆಯಲ್ಲ, ಬದಲಾಗಿ ಹೊಸ ಅವಕಾಶ. ಅಲ್ಲಿಯೂ ಆತ ಅಷ್ಟೇ ಉತ್ತಮ ಪ್ರದರ್ಶನ ತೋರಬಲ್ಲ," ಇದು ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಮಾತು.

ಕರ್ನಾಟಕದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಮತ್ತು ಹಿರಿಯ ಅಧಿಕಾರಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಹೊರಟ ಡಿಐಜಿ (ಕಾರಾಗೃಹ) ರೂಪಾ ಡಿ ಅವರನ್ನು ವರ್ಗಾವಣೆ ಮಾಡಿದ ಸರ್ಕಾರದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ರೂಪಾ ಈ ರೀತಿ ಪ್ರತಿಕ್ರಿಯಿಸಿದರು.

ಜೈಲಿನ ಭ್ರಷ್ಟಾಚಾರ ಬಯಲಿಗೆಳೆದ ರೂಪಾಗೆ ವರ್ಗಾವಣೆ ಶಿಕ್ಷೆಜೈಲಿನ ಭ್ರಷ್ಟಾಚಾರ ಬಯಲಿಗೆಳೆದ ರೂಪಾಗೆ ವರ್ಗಾವಣೆ ಶಿಕ್ಷೆ

ಡಿಐಜಿ (ಕಾರಾಗ್ರಹ) ರೂಪಾ ಡಿ. ಅವರನ್ನು ವರ್ಗಾವಣೆ ಮಾಡಿದ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಡಿಐಜಿ ರೂಪಾ ವರ್ಗಾವಣೆ ಖಂಡನೀಯ : ಎಚ್ಡಿಕೆಡಿಐಜಿ ರೂಪಾ ವರ್ಗಾವಣೆ ಖಂಡನೀಯ : ಎಚ್ಡಿಕೆ

ಸಂಸದ ಪ್ರತಾಪ್ ಸಿಂಹ, ಶಾಸಕ ಸುರೇಶ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಗಣ್ಯರು ರೂಪಾ ಅವರ ವರ್ಗಾವಣೆಯನ್ನು ವಿರೋಧಿಸಿದ್ದು, ಸರ್ಕಾರದ ನಡೆಯ ಕುರಿತು ಬೇಸರ ವ್ಯಕ್ತಪಡಿದ್ದಾರೆ.

ರೂಪಾ ವರ್ಗ : ಟ್ವಿಟ್ಟರಿನಲ್ಲಿ ಸಿದ್ದು ವಿರುದ್ಧ ಭುಗಿಲೆದ್ದ ಆಕ್ರೋಶರೂಪಾ ವರ್ಗ : ಟ್ವಿಟ್ಟರಿನಲ್ಲಿ ಸಿದ್ದು ವಿರುದ್ಧ ಭುಗಿಲೆದ್ದ ಆಕ್ರೋಶ

ವರ್ಗಾವಣೆ ಎಂದರೆ ಹೊಸ ಅವಕಾಶ!

ವರ್ಗಾವಣೆ ಮಾಡುವ ವ್ಯವಸ್ಥೆಯ ನಿರ್ಧಾರವನ್ನು ತಡೆಯುವುದಕ್ಕಾಗುವುದಿಲ್ಲ. ಆದರೆ ಈ ವರ್ಗಾವಣೆಯಾದ ಪ್ರಾಮಾಣಿಕ ಅಧಿಕಾರಿಗಳು ಎಲ್ಲಿಯೇ ಹೋದರೂ ತಮ್ಮ ಉತ್ತಮ ಕಾರ್ಯವನ್ನು ಮಾತ್ರ ನಿಲ್ಲಿಸುವುದಿಲ್ಲ. ಅವರಿಗೆ ಈ ವರ್ಗಾವಣೆ ಹೊಸ ಅವಕಾಶ ಅಷ್ಟೆ ಎಂದು ಕಿರಣ್ ಬೇಡಿಕಯವರು ಟ್ವೀಟ್ ಮಾಡಅ, ರೂಪಾ ಅವರಿಗೆ ಧೈರ್ಯ ನೀಡಿದ್ದಾರೆ.

ಇದು ಪ್ರಬುದ್ಧತೆಯೇ?

ಪರಪ್ಪನ ಅಗ್ರಹಾರದಲ್ಲಿನ ಕರ್ಮಕಾಂಡವನ್ನು ಬಯಲಿಗೆಳೆದದ್ದಕ್ಕೆ ಅಪ್ರಸ್ತುತ ಡೆಸ್ಕ್ ಕೆಲಸಕ್ಕೆ ವರ್ಗಾವಣೆ ಮಾಡುವುದು ನಿಮ್ಮ "ಪ್ರಭುದ್ಧತೆ"ಯ ಸಂಕೇತವೇ ಮುಖ್ಯಮಂತ್ರಿಗಳೇ? ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಪ್ರಶ್ನಿಸಿದ್ದಾರೆ.

ಭ್ರಷ್ಟಾಚಾರ ಮುಚ್ಚಿಹಾಕುವುದಕ್ಕೆ ಸಾಧ್ಯವಿಲ್ಲ

ಸಿದ್ದರಾಮಯ್ಯನವರೇ, ರೂಪಾ ಅವರನ್ನು ವರ್ಗಾವಣೆ ಮಾಡುವ ಮೂಲಕ, ಅವರು ಬಯಲಿಗೆಳೆಯಲು ಹೊರಟಿದ್ದ ಪ್ರಕರಣಗಳನ್ನೆಲ್ಲ ನೀವು ಮುಚ್ಚಿಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ದಕ್ಷ ಅಧಿಕಾರಿಗಳಿಗೆ ಅವಕಾಶವಿಲ್ಲ

ಒಳ್ಳೆಯ, ದಕ್ಷ ಅಧಿಕಾರಿಗಳ ಬಗ್ಗೆ ಯಾವುದೇ ಸರಕಾರಕ್ಕೂ ಅಸಹನೆ ಇರಕೂಡದು. ಆದರೆ ಕರ್ನಾಟಕದಲ್ಲಿ "ದಕ್ಷ ಅಧಿಕಾರಿಗಳಿಗೆ ಅವಕಾಶವಿಲ್ಲ" ಎಂದು ಬೋರ್ಡ್ ಹಾಕುವುದೊಂದೇ ಬಾಕಿ ಎಂದು ಶಾಸಕ ಸುರೇಶ್ ಕುಮಾರ್, ಕರ್ನಾಟಕ ಸರ್ಕಾರದ ಬಗೆಗಿನ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

English summary
While establishment always does what it is best at (Transfers).A performing officer does best with whatever she gets.Another opportunity?, former IPS officer Kiran Bedi tweeted. Her reaction is on Karnataka's DIG (prison) Roopa D.'s transfer case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X