ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಮೂವ್ ಥಿಯೇಟರ್ ನ 100ನೇ ಶೋ E=mc2ಗೆ ಬನ್ನಿ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 04: ನಮ್ಮ ಮೆಟ್ರೋ, ಮಾಗಡಿ ಡೇಸ್, ನನ್ನವಳ ಕಾಗದ, ಪಿ.ಎಸ್ ಐ ಡೋಂಟ್ ಲವ್ ಯು, ತತ್ಯನ ಮೋಹ ಹಾಗೂ ಮಾಲ್ಗುಡಿ ಡೇಸ್ ನಂಥ ನಾಟಕಗಳ ಮೂಲಕ ಬೆಂಗಳೂರು ಹಾಗೂ ಮೈಸೂರು ಪ್ರಾಂತ್ಯದ ನಾಟಕಪ್ರಿಯರ ಮನದಲ್ಲಿ ಮನೆ ಮಾಡಿರುವ ವಿ ಮೂವ್ ಥಿಯೇಟರ್, ತನ್ನ ನೂರನೇ ಪ್ರದರ್ಶನದ ಅಂಗವಾಗಿ 'E = mc2' ಎಂಬ ಹೊಸ ಕನ್ನಡ ನಾಟಕವನ್ನು ರಂಗದ ಮೇಲೆ ತರುತ್ತಿದೆ.

ದಿನನಿತ್ಯ ಜೀವನದ ಜಂಜಾಟದಲ್ಲೇ ಮುಳುಗಿ ಹೋಗಿರುವ ಜನರಲ್ಲಿ ಈಗಲೂ ರಂಗಭೂಮಿ, ನಾಟಕಗಳ ಬಗ್ಗೆ ಇನ್ನೂ ಆಸಕ್ತಿ ಉಳಿದಿದೆಯಾ? ಇಂಥಾದ್ದೊಂದು ಪ್ರಶ್ನೆಗೆ ಉತ್ತರ ವಿಮೂವ್ ಥಿಯೇಟರ್ ನ ನೂರನೇ ಪ್ರದರ್ಶನ.

Bengaluru based theatre Group WeMove Theatre

E =mc2 ಇದು ಸ್ಕ್ರಿಜೋಫ್ರೆನಿಕ್ ರಂಗಕಲಾವಿದನ ಸುತ್ತ ಹೆಣೆದಿರುವ ಕಥೆಯಾಗಿದೆ. ಕಥೆಯಲ್ಲಿ ವಿಭಿನ್ನ ಹಾಗೂ ವಿಚಿತ್ರ ಪಾತ್ರಗಳು ಪ್ರೇಕ್ಷಕರನ್ನು ಕಾಡಲಿದೆ. ಅಭಿಜಿತ್ ಹಿಲಿಯಾನ ಅವರು ಬರೆದಿರುವ ಕಥೆಯನ್ನು ಅಭಿಷೇಕ್ ಐಯಂಗಾರ್ ಅವರು ರಂಗಕ್ಕೆ ರೂಪಾಂತರಿಸಿ, ನಿರ್ದೇಶಿಸಿದ್ದಾರೆ. ಗೀತ ಸಾಹಿತ್ಯ ಅಭಿಜಿತ್ ಮಹೇಶ್, ಹಿನ್ನೆಲೆ ಸಂಗೀತ ಅಭಿಷೇಕ್ ನೀಡಿದ್ದಾರೆ.

ನೂರರ ಸಂಭ್ರಮವನ್ನು ವಿಮೂವ್ ವಿಭಿನ್ನವಾಗಿ ಆಚರಿಸುತ್ತಿದೆ. ಶುಕ್ರವಾರ ಹಾಗೂ ಶನಿವಾರ ಮೊದಲ ನೂರು ಪ್ರೇಕ್ಷಕರಿಗೆ ಸಸಿಗಳನ್ನು ನೀಡಲಿದೆ. ಸರ್ಕಾರಿ ಶಾಲೆಗಳಲ್ಲಿ ನೀತಿಶಿಕ್ಷಣ ಸಾರುವ ನಾಟಕಗಳನ್ನು ಪ್ರದರ್ಶಿಸಿ ಕಲಿಕೆಗೆ ಪೂರಕ ವೇದಿಕೆ ರೂಪಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ನಾಟಕ : E=mc2
ಸ್ಥಳ: ಕೆಎಚ್ ಕಲಾಸೌಧ, ಹನುಮಂತನಗರ, ಬೆಂಗಳೂರು
ದಿನಾಂಕ: ಆಗಸ್ಟ್ 7 ಹಾಗೂ 8.
ಸಮಯ: 7.30
ತಾರಾಗಣ: ಅನಿರುಧ್ ಮಹೇಶ್, ರಂಗರಾಜ್ ಭಟ್ಟಾಚಾರ್ಯ, ರೂಪಾ ರಾಯಪ್ಪ, ಹಂಪಾ ಕುಮಾರ್, ಕುಮಾರ್ ಅಂಗಡಿ, ಸುಶಾಂತ್ ಶಾಂಡಿಲ್ಯ, ವಿನಯ್ ಧ್ರುವ ಕುಮಾರ್ ಹಾಗೂ ದೀಪಿಕಾ ನಿದಿಗೆ.

E =mc2 ನಾಟಕದ ಟೀಸರ್ ಇಲ್ಲಿದೆ ನೋಡಿ:


(ಒನ್ ಇಂಡಿಯಾ ಸುದ್ದಿ)

English summary
Bengaluru based theatre Group WeMove Theatre celebrates century with Kannada play, "E=MC2". WeMove theatre's 100th show, staging on August 7th and 8th, 7.30pm at K.H Kalasaudha, Bengaluru. WeMove successfully staged Namma Metro, Mirror Mirror, Malgudi Daze, cocktail and other dramas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X