ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಭಾತ್ ರಂಗಮಂದಿರದಲ್ಲಿ ವಿಮೂವ್ ಉತ್ಸವ, ಮಾಗಡಿ ಡೇಸ್ ನೋಡಿ

By Mahesh
|
Google Oneindia Kannada News

ಬೆಂಗಳೂರು, ಫೆ.25: ನಮ್ಮ ಮೆಟ್ರೋ, ನನ್ನವಳ ಕಾಗದ, ಪಿ.ಎಸ್ ಐ ಡೋಂಟ್ ಲವ್ ಯು, ತತ್ಯನ ಮೋಹ, ಮಾಗಡಿ ಡೇಸ್, ಕಾಕ್ ಟೇಲ್ ಮುಂತಾದ ನಾಟಕಗಳ ಮೂಲಕ ಬೆಂಗಳೂರು, ಮೈಸೂರು, ಚೆನ್ನೈ ಹಾಗೂ ಹೈದರಾಬಾದಿನ ನಾಟಕ ಪ್ರಿಯರ ಮನಸ್ಸಿನಲ್ಲಿ ವಿಮೂವ್ ಥೀಯೇಟರ್ ತಂಡ ಮನೆ ಮಾಡಿದೆ.

ಈಗ 'ವಿ ಮೂವ್ ಥಿಯೇಟರ್ ಕಾರ್ನಿವಲ್' ಅಂಗವಾಗಿ ತಂಡದ ಎರೆಡು ಜನಪ್ರಿಯ ಕನ್ನಡ ನಾಟಕಗಳನ್ನು ಈ ಫೆಬ್ರವರಿ 27 ಹಾಗೂ 28 ರಂದು ಬೆಂಗಳೂರಿನ ಕೆಇಎ ಪ್ರಭಾತ್ ರಂಗಮಂದಿರದಲ್ಲಿ ಪ್ರದರ್ಶಿಸುತ್ತಿದೆ.

ಉತ್ಸವದ ಮೊದಲನೆ ದಿನ, 'ಮಾಗಡಿ ಡೇಸ್' ನಾಟಕವನ್ನು ಫೆಬ್ರವರಿ 27ರಂದು ಸಂಜೆ 7.30ಕ್ಕೆ ವಿಮೂವ್ ಥಿಯೇಟರ್ ರಂಗದ ಮೇಲೆ ತರುತ್ತಿದೆ.

ಉತ್ಸವದ ಎರಡನೆ ದಿನ, 'E =MC2' ನಾಟಕವನ್ನು ಫೆಬ್ರವರಿ 28ರಂದು ಸಂಜೆ 7.30ಕ್ಕೆ ವಿಮೂವ್ ಥಿಯೇಟರ್ ರಂಗದ ಮೇಲೆ ತರುತ್ತಿದೆ.

E =MC2 ನಾಟಕದ ಸಾರಾಂಶ

E =MC2 ನಾಟಕದ ಸಾರಾಂಶ

ಸ್ಕಿಜೋಪ್ರೇನಿಕ್ ರಂಗಕಲಾವಿದನಾದ ನಾಯಕನ ಪರಿಚಯದೊಂದಿಗೆ ಪ್ರಾರಂಭವಾಗುವ ನಾಟಕವನ್ನು E =MC2 ಎಂಬ ಸೂತ್ರದ ಸುತ್ತಲೂ ಹೆಣೆಯಲಾಗಿದೆ. ಆ ಸೂತ್ರದ ಎಳೆ ಹಿಡಿದು ಹೊರಡುವ ನಾಯಕನು ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾನೆ.

 E =MC2ನ್ನು ಕಂಡುಹಿಡಿಯುವನೇ?

E =MC2ನ್ನು ಕಂಡುಹಿಡಿಯುವನೇ?

ಆತ ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತಾನೆ? ಕೊನೆಗೂ ಅವನು E =MC2ನ್ನು ಕಂಡುಹಿಡಿಯುವನೇ? ಎಂಬುದನ್ನು ತಿಳಿಯಲು ನಾಟಕವನ್ನು ನೋಡಬೇಕು. ನಾಟಕದಲ್ಲಿ ಬರುವ ವಿಭಿನ್ನ ಪಾತ್ರಗಳು, ಚಾಣಾಕ್ಷ್ಯ ಮಾತುಗಳು ಹಾಗು ರೋಚಕ ಕಥಾಹಂದರ, ಪ್ರೇಕ್ಷಕರನ್ನು ಕೊನೆಯವರೆಗೂ ಉಸಿರು ಬಿಗಿಹಿಡಿದು ನಾಟಕ ನೋಡುವಂತೆ ಮಾಡುತ್ತದೆ.

ರಂಗಾಸಕ್ತರನ್ನು ಫೆಬ್ರವರಿ 28ರಂದು 'E=MC2' ರಂಗಪ್ರಯೋಗಕ್ಕೆ ಬರಮಾಡಿಕೊಳ್ಳಲು ವಿಮೂವ್ ಥೀಯೇಟರ್ ಕಾತರದಿಂದ ಎದುರು ನೋಡುತ್ತಿದೆ.

rn

E =mc2 ನಾಟಕದ ಟೀಸರ್ ಇಲ್ಲಿದೆ ನೋಡಿ

E =mc2 ನಾಟಕದ ಟೀಸರ್ ಇಲ್ಲಿದೆ ನೋಡಿ

ನಾಟಕ : E=mc2

ನಾಟಕ : E=mc2

ಕೆಇಎ ಪ್ರಭಾತ್ ರಂಗಮಂದಿರ, ಬಸವೇಶ್ವರ ನಗರ
ಫೆಬ್ರವರಿ 27, 2016
ಸಂಜೆ 7.30
ತಾರಾಗಣ: ಅನಿರುಧ್ ಮಹೇಶ್, ರಂಗರಾಜ್ ಭಟ್ಟಾಚಾರ್ಯ, ಸೋನು ಗೌಡ,ರೂಪಾ ರಾಯಪ್ಪ, ಹಂಪಾ ಕುಮಾರ್, ಕುಮಾರ್ ಅಂಗಡಿ, ಸುಶಾಂತ್ ಶಾಂಡಿಲ್ಯ, ವಿನಯ್ ಧ್ರುವ ಕುಮಾರ್ ಹಾಗೂ ದೀಪಿಕಾ ನಿದಿಗೆ.

ಮಾಗಡಿ ಡೇಸ್ ನಾಟಕದ ಸಾರಾಂಶ

ಮಾಗಡಿ ಡೇಸ್ ನಾಟಕದ ಸಾರಾಂಶ

ಕಲಾವಿದರಿಗ್ಯಾಕೆ ರಾಜಕೀಯ ? ಅನ್ನೋ ಪ್ರಶ್ನೆಗೆ ಸರಳ ಉತ್ತರ, ಸಾಮಾಜಿಕ ಕಳಕಳಿಯಷ್ಟೇ , ಮತ್ಯಾವ ಉದ್ದೇಶವೂ ಎಲ್ಲ ಎನ್ನುವ ವಿಮೂವ್ ಥೀಯೇಟರ್ ನ ಈ ನಾಟಕ ಯಾವುದೇ ಪಕ್ಷ ಅಥವಾ ಸಂಘಟನೆಯ ಪರ ಅಥವಾ ವಿರೋಧವಾಗಿಲ್ಲ. ಇದು ಬರಹಗಾರನ ಒಂದು ಕಾಲ್ಪನಿಕ ಕಥೆಯಾಗಿದ್ದು ಇಂದಿನ ನೈಜ ಜೀವನಕ್ಕೆ ಹಾಗೂ ಪ್ರಸ್ತುತ ರಾಜಕೀಯಕ್ಕೆ ತುಂಬಾ ಹತ್ತಿರವಾಗಿದೆ.

ಟೆಕ್ಕಿಯೊಬ್ಬ ಮುಖ್ಯಮಂತ್ರಿಯಾದರೆ

ಟೆಕ್ಕಿಯೊಬ್ಬ ಮುಖ್ಯಮಂತ್ರಿಯಾದರೆ

ಸಾಫ್ಟವೇರ್ ಇಂಜಿನೀಯರ್ 'ಅನಂತ್' ಕೆಲಸ ಬಿಟ್ಟು ರಾಜಕಾರಣ ಸೇರಿ, ಮುಖ್ಯಮಂತ್ರಿಯಾಗಿ 'ಸ್ಪೆಂಡ್ ಲೆಸ್ ಗವೆರ್ಮೆಂಟ್ 'ಅಂತ ಕರೆಸಿಕೊಳ್ಳೋ ಯೋಜನೆಗಳನ್ನು ಜಾರಿಗೊಳಿಸಿ, ನಂತರ ಜನರಿಗೆ ಹತ್ತಿರವಾಗೋ ದೃಷ್ಟಿಯಿ೦ದ ರಾಜಕಾರಣದಲ್ಲಿ 'ಫೇಸ್ ಬುಕ್' ನ ಬಳಕೆ ಕಡ್ಡಾಯಗೊಳಿಸಲು ಹೋಗಿ ಅದರಿಂದ ಆವಾಂತರಗಳಿಗೆ ಸಿಕ್ಕಿಹಾಕಿಕೊಂಡು, ಸರಳವಾಗಿದ್ದ ಮನುಷ್ಯ ನಿಧಾನವಾಗಿ ಇಂದಿನ ರಾಜಕಾರಣಿಗಳಂತೆ 'ಚುನಾವಣೆಗೆ ಮುನ್ನ'ವೇ ಜನರ 'ಬೇಡಿಕೆ'ಗಳನ್ನು ಈಡೇರಿಸುವ ರಾಜಕಾರಣಿಯಾಗಿ ಬದಲಾಗುತ್ತಾನೆ.

ಆದರೆ ಆ ಆವಾಂತರಗಳಿಗೆ 'ಅನಂತ' ನೇ ಕಾರಣವೇ ಅಥವಾ ಅನಂತನ ಹಿಂದಿರುವ ಅನೇಕರೇ? ಎನ್ನುವುದು ನಾಟಕದ ಕಥ.

ವಿಮೂವ್ ಥಿಯೇಟರ್ ರಂಗದ ಮೇಲೆ ತರುತ್ತಿದೆ

ವಿಮೂವ್ ಥಿಯೇಟರ್ ರಂಗದ ಮೇಲೆ ತರುತ್ತಿದೆ

ನಮ್ಮ ಮೆಟ್ರೊ, ಪಿ.ಎಸ್ ಐ don't love you ಹಾಗೂ SMS, ಹೀಗೆ ಅನೇಕ ನಾಟಕಗಳನ್ನು ಬರೆದ ಅಭಿಷೇಕ್ ಅಯ್ಯಂಗಾರ್ ಈ ನಾಟಕವನ್ನು ಬರೆದು ನಿರ್ದೇಶನ ಮಾಡಿದ್ದಾರ.


ಉತ್ಸವದ ಮೊದಲನೆ ದಿನ, 'ಮಾಗಡಿ ಡೇಸ್' ನಾಟಕವನ್ನು ಫೆಬ್ರವರಿ 127ರಂದು ಸಂಜೆ 7.30ಕ್ಕೆ ವಿಮೂವ್ ಥಿಯೇಟರ್ ರಂಗದ ಮೇಲೆ ತರುತ್ತಿದೆ.

English summary
As a part Carnival Bengaluru based theatre Group WeMove Theatre to stage Kannada play, "E=MC2" and Malgudi Daz at KEA Prabhath Rangamandira, Bengaluru on February 27 and 28, 2016. WeMove successfully staged Namma Metro, Mirror Mirror, Cocktail and other dramas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X