ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಡುವ ಬೋಳುತಲೆಗೆ ಬೆಸ್ಟ್ ಪರಿಹಾರ ಇಲ್ಲಿದೆ!

|
Google Oneindia Kannada News

ಬೆಂಗಳೂರು, ಮೇ 23: ತಲೆ ಕೂದಲು ಉದುರುವುದು ಇಂದು ದೊಡ್ಡ ತಲೆ ಬಿಸಿಯಾಗಿದೆ. ಇದಕ್ಕೆ ಪರಿಹಾರ ಹುಡುಕುವುದರಲ್ಲಿಯೇ ನಮ್ಮ ಅರ್ಧ ಆಯಸ್ಸು ಕಳೆದು ಹೋಗಿರುತ್ತದೆ. ಅಷ್ಟರಲ್ಲಿ ತಲೆಯೂ ಬರಿದಾಗಿರುತ್ತದೆ.

ಕೂದಲು ಉದುರುವುದಕ್ಕೆ ಕಾರಣಗಳೇನು? ವೃದ್ಧರಾಗುವ ಮುನ್ನವೇ ಬೋಳು ತಲೆಯಾಗುತ್ತಿರುವುದಕ್ಕೆ ಏನು ಕಾರಣ? ಮತ್ತು ಈ ಕೂದಲು ನಷ್ಟವನ್ನು ಹೋಗಲಾಡಿಸಲು ಕೂದಲು ನೇಯ್ಗೆ(ಹೆಣೆ) ಯಾವ ರೀತಿ ಪರಿಹಾರ ನೀಡುತ್ತದೆ ಎಂಬುದರ ಬಗ್ಗೆ ಹೇರ್ ಲೈನ್ ಇಂಟರ್ ನ್ಯಾಷನಲ್ ಹೇರ್ ಅಂಡ್ ಸ್ಕಿನ್ ಕ್ಲಿನಿಕ್ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕ ಬನಿ ಆನಂದ್ ಮಾತುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.[ನಿಮ್ಮ ಕೇಶ ವಿನ್ಯಾಸ ಹೀಗಿರಬೇಕು]

hair

ಪ್ರಶ್ನೆ: ಪ್ರಸ್ತುತ ಕೂದಲು ಉದುರುವುದು ಸಾಮಾನ್ಯವಾದಂತಾಗಿದೆ. ಈ ಸಮಸ್ಯೆ ನಿವಾರಣೆಗಾಗಿ ಜನರು ಹಲವಾರು ಚಿಕಿತ್ಸೆ/ಥೆರಪಿಗಳ ಮೊರೆ ಹೋಗುತ್ತಿದ್ದಾರೆ. ಈ ಪೈಕಿ ಕೂದಲು ನೇಯ್ಗೆಯೂ ಒಂದಾಗಿದೆ. ಈ ಕೂದಲು ನೇಯ್ಗೆ ಹೇಗಿರುತ್ತದೆ? ಇದು ಹೇಗೆ ಕಾರ್ಯಸಾಧುವಾಗುತ್ತದೆ?

ಆನಂದ್: ಕೂದಲು ಉದುರಿದ ಪರಿಣಾಮ ತಲೆ ಬೋಳಾಗುವುದನ್ನು ಈ ಕೂದಲು ನೇಯ್ಗೆ ಅಥವಾ ಹೆಣೆಯುವಿಕೆ ನೆರವಾಗುತ್ತದೆ. ಕೂದಲು ಉದುರಿದ ಜಾಗದಲ್ಲಿ ಹೆಚ್ಚುವರಿಯಾಗಿ ಕೂದಲನ್ನು ನೇಯ್ಗೆ ಮಾಡಲಾಗುತ್ತದೆ. ಅಂದರೆ, ಆ ನೈಸರ್ಗಿಕ ಕೂದಲುಗಳನ್ನೇ ಕೂದಲಿಲ್ಲದಿರುವ ಜಾಗಕ್ಕೆ ನೇಯಲಾಗುತ್ತದೆ. ಇದಲ್ಲದೇ, ಸಿಂಥೆಟಿಕ್ ಮಾದರಿಯ ಕೂದಲು ಅಥವಾ ಮನುಷ್ಯನ ಕೂದಲನ್ನೇ ಹೆಣೆಯಲಾಗುತ್ತದೆ. ಬೇರೊಬ್ಬ ವ್ಯಕ್ತಿಯ ತಲೆಕೂದಲನ್ನೇ ಕತ್ತರಿಸಿ ಸಂಸ್ಕರಿಸಲಾಗುತ್ತದೆ.[ಲಲನೆಯರ ಮಾರ್ಜಾಲ ನಡಿಗೆಗೆ ಪುಳಕವಾಯಿತೆನ್ನ ಮನ]

ಒಂದು ವೇಳೆ ರೋಗಿಯ ತಲೆಯಲ್ಲಿ ಕೂದಲಿದ್ದರೆ ಅದನ್ನು ಔಷಧೀಕೃತ ದಾರದಿಂದ ಕೂದಲಿನೊಂದಿಗೆ ಮೂಲ ಕೂದಲಿನ ದಪ್ಪ ಮತ್ತು ದಟ್ಟತನಕ್ಕೆ ಹೊಂದುವಂತೆ ಹೆಣೆಯಲಾಗುತ್ತದೆ. ಈ ರೀತಿ ಕೂದಲು ನೇಯುವ ಪ್ರಕ್ರಿಯೆ ನಡೆಯುತ್ತದೆ. ಹೀಗೆ ನೇಯ್ಗೆ ಮಾಡಿದ ಕೂದಲನ್ನು ರೋಗಿಯ ಇಷ್ಟದಂತೆ ಕತ್ತರಿಸಿ ಅದಕ್ಕೊಂದು ಅಂದ ನೀಡಲಾಗುತ್ತದೆ. ಇಂತಹ ಚಿಕಿತ್ಸೆ ಪಡಯಲು ರೋಗಿ ಪ್ರತಿ ಎರಡು ತಿಂಗಳಿಗೊಮ್ಮೆ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.

hair

ಪ್ರಶ್ನೆ: ಇದು ಶಾಶ್ವತ ಪರಿಹಾರವಾಗಬಲ್ಲುದೇ?
ಆನಂದ್: ಕೂದಲು ನೇಯ್ಗೆ ಚಿಕಿತ್ಸೆ ಕೂದಲು ನಷ್ಟಕ್ಕೆ ಶಾಶ್ವತ ಪರಿಹಾರ ನೀಡುವುದಿಲ್ಲ. ತಲೆಯ ಮೂಲೆಯ ಒಂದು ಭಾಗದಿಂದ ಕೂದಲನ್ನು ಹೆಣೆಯಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರೋಗಿಯು ಪ್ರತಿ 2-3 ತಿಂಗಳಿಗೊಮ್ಮೆ ಕೇಶ ತಜ್ಞರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಬಹುದು.

ಪ್ರಶ್ನೆ: ಕೂದಲು ನೇಯ್ಗೆಯಿಂದ ಚರ್ಮದ ಸಮಸ್ಯೆ ಕಾಣಿಸಿಕೊಳ್ಳುತ್ತದೆಯೇ?
ಆನಂದ್: ಒಂದು ವೇಳೆ ನಿಮ್ಮ ಚರ್ಮ ಅತ್ಯಂತ ಸೂಕ್ಷ್ಮಮತಿಯದ್ದಾಗಿದ್ದರೆ, ತುರಿಕೆ ಕಾಣಿಸಿಕೊಳ್ಳಬಹುದು. ಆದರೆ, ಶೇ.99 ರಷ್ಟು ಜನರಿಗೆ ಯಾವುದೇ ಚರ್ಮ ಸಮಸ್ಯೆ ಕಂಡುಬರುವುದಿಲ್ಲ. ಬೋಳುತಲೆಗೆ ಅತ್ಯಂತ ಶೀಘ್ರವಾಗಿ ಪರಿಹಾರ ನೀಡಬಲ್ಲಂತಹ ಚಿಕಿತ್ಸೆಯಾಗಿರುವುದರಿಂದ ಕೂದಲು ನೇಯ್ಗೆ ಜನಪ್ರಿಯವಾಗಿದೆ. ಏಕೆಂದರೆ, ಕೂದಲು ಕಸಿಯಂತಹ ಚಿಕಿತ್ಸಾ ವಿಧಾನಗಳಿಂದ ಕೂದಲು ಮರುಹುಟ್ಟು ಪಡೆಯಲು ಕನಿಷ್ಟ 7 ತಿಂಗಳು ಬೇಕಾಗುತ್ತದೆ. ಕೂದಲು ಕಸಿ ಸೇರಿದಂತೆ ಇತರೆ ಚಿಕಿತ್ಸೆಗಳಿಗಿಂತ ಕಡಿಮೆ ಖರ್ಚಿನಲ್ಲಿ ಆಗುತ್ತದೆ.

ಪ್ರಶ್ನೆ: ಚಿಕಿತ್ಸೆಗೆ ತಗುಲುವ ವೆಚ್ಚ ಎಷ್ಟು? ಇದು ಕೈಗೆಟುಕುವ ದರದಲ್ಲಿರುತ್ತದೆಯೇ?
ಆನಂದ್: ಕೂದಲು ನೇಯ್ಗೆ ಚಿಕಿತ್ಸೆಗೆ 5,000 ದಿಂದ 25,000 ರೂಪಾಯಿವರೆಗೆ ವೆಚ್ಚ ಆಗುತ್ತದೆ. ಈ ವೆಚ್ಚ ನೇಯ್ಗೆ ವಿಧಾನ, ಕೂದಲಿನ ಸಂಖ್ಯೆ ಮತ್ತು ಇತರೆ ಖರ್ಚುಗಳ ಮೇಲೆ ಅವಲಂಬಿತವಾಗಿರುತ್ತದೆ.

English summary
Hair loss and balding is a major concern, especially amongst youngsters. Multiple therapies prevail, each offering a magic cure. Ms. Bani Anand Founder and Managing Director of Hairline International Hair and Skin Clinic speaks at length about hair loss, premature baldness and hair weaving as an option to address permanent hair loss. Baldness or loss of hair has become an increasingly common phenomenon today. People look to various treatments or therapies to try and cure this disease. Hair weaving is one such treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X