ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುಣ್ಯಕೋಟಿ ನಾಡಲ್ಲಿ 'ಗೌರಿ' ಹಸುವಿಗೆ ಬಾಯಾರಿಕೆಯಾದಾಗ...

By ಹರಾ
|
Google Oneindia Kannada News

ಹಾಯ್ ಹಲೋ....ನನ್ನ ಹೆಸರು ಗೌರಿ ಅಂತ. ದೇಸಿ ತಳಿಯ ಆಕಳು ನಾನು. ನೀವೆಲ್ಲಾ ಚಳಿಗಾಲ ಮುಗಿಸಿ ಬೇಸಿಗೆ ಕಾಲವನ್ನ ಸ್ವಾಗತಿಸೋಕೆ ರೆಡಿ ಆಗ್ತಿದ್ದೀರಾ. ಆದ್ರೆ, ನನಗೆ ಈ ಬೇಸಿಗೆ ಕಾಲ ಬಂತೂ ಅಂದ್ರೆ ಆತಂಕ ಭಯ ಎರಡೂ ಆರಂಭವಾಗುತ್ತೆ. ಯಾಕೆ ಅಂತೀರಾ? ಅದಕ್ಕೂ ಮೊದಲು ಈ ವಿಡಿಯೋನ ಒಂದು ಸಲ ನೋಡಿ, ಆಮೇಲೆ ಮುಂದಿನದ್ದನ್ನ ಹೇಳ್ತೀನಿ.....

ನೋಡಿದ್ರಿ ತಾನೇ, ಕಳೆದ ವರ್ಷ ತುಂಬಾ ಬಾಯಾರಿಕೆ ಆಗಿದ್ದ ಅದೊಂದು ದಿನ, ಈ ಬೋರ್ ವೆಲ್ ನಲ್ಲಿ ನಾನೇ ನೀರು ಹೊಡೆದುಕೊಂಡು ಕುಡಿದಿದ್ದೆ. ಅಷ್ಟರಮಟ್ಟಿಗೆ ನೀರಿನ ಸೆಲೆ ಅಲ್ಲಿ ತುಂಬಿತ್ತು. ಆದ್ರೆ, ಮೊನ್ನೆ ಮೊನ್ನೆ ಅದೇ ಬೋರ್ ವೆಲ್ ಗೆ ನೀರು ಕುಡಿಯೋಣ ಅಂತ ಹೋಗಿದ್ದೆ. ಆಗ, ಅಲ್ಲಿದ್ದವರ ಮಾತು ಕೇಳಿ ತಬ್ಬಿಬ್ಬಾದೆ.

ಅದ್ಯಾಕೆ ಅಂತೀರಾ, ಸಮೃದ್ಧವಾಗಿದ್ದ ಆ ನೀರಿನ ಸೆಲೆ ಅನವಶ್ಯಕ ಬಳಕೆ ಕಾರಣ ಇಂಗಿ ಹೋಗೋ ಹಂತ ತಲುಪಿದೆಯಂತೆ. ಹತ್ತಾರು ಬಾರಿ ಪಂಪ್ ಮಾಡಿದ್ರೆ ಅರ್ಧ ಕೊಡ ನೀರು ಬರುತ್ತಂತೆ. ಹೀಗಾದ್ರೆ ಹೇಗೆ ಅನ್ನೋ ಆತಂಕ ನನಗೀಗ ಕಾಡ್ತಿರೋದು.

ಯಾಕಂದ್ರೆ ಮೊದಲಿನಂತೆ ನಮ್ಮನ್ನ ನೋಡಿಕೊಳ್ಳೋರು ಈಗ ವಿರಳ. ಅದರ ಜೊತೆಗೆ ನಮ್ಮ ಕಾಳಜಿ ತೆಗೆದುಕೊಳ್ಳೋರೂ ಅಷ್ಟಕಷ್ಟೆ. ಇಂತಹ ಸನ್ನಿವೇಶದಲ್ಲಿ ನಾವೇ ನಮ್ಮ ಮೇವು ನೀರನ್ನ ಹುಡುಕಿಕೊಳ್ಳೋಣ ಅಂತ ಸ್ವಪ್ರಯತ್ನಕ್ಕೆ ಮುಂದಾದ್ರೆ, ಅಲ್ಲೂ ನಮ್ಮ ಯತ್ನಕ್ಕೆ ಜಯ ಸಿಗೋದು ಎಷ್ಟು ಅಂತ ನಿಮಗೂ ಗೊತ್ತು.

ಹೀಗಿರುವಾಗ ಅಲ್ಲೊಂದು ಇಲ್ಲೊಂದು ಅಂತ ಸಿಗೋ ಇಂತಹ ನೀರಿನ ಆಹಾರದ ಮೂಲಗಳನ್ನು ಅತಿಯಾದ ಹಾಗೂ ಅನವಶ್ಯಕ ಬಳಕೆ ಕಾರಣ ನಶಿಸಿ ಹೋಗುವಂತೆ ಮಾಡೋದು ಎಷ್ಟು ಸರಿ ನೀವೇ ಹೇಳಿ. [ಗೋವುಗಳನ್ನು ಕಟುಕರ ಕೈಗೆ ಕೊಡಬೇಡಿ]

ನಿಮಗಂತೂ ನಮ್ಮ ಬಗ್ಗೆ ಗಮನಹರಿಸುವಷ್ಟು ಟೈಮ್ ಇಲ್ಲ. ಹಾಗಿರುವಾಗ ನಮ್ಮ ಕೆಲಸ ಮಾಡಿಕೊಳ್ಳೋ ನಮಗೆ ಸಹಕಾರಿಯಾಗೋ ಇಂತಹ ಮೂಲಗಳನ್ನಾದ್ರೂ ಉಳಿಸಿಕೊಡಿ. ಪ್ಲೀಸ್...ಬೇಸಿಗೆ ಆರಂಭಕ್ಕೂ ಮುನ್ನ ನಮ್ಮವರ ಪರವಾಗಿ ನನ್ನ ಮನವಿ ಈಡೇರಿಸಿ. ನೀವೂ ಬಳಸಿ, ನೀರು ಉಳಿಸಿ, ನಮ್ಮನ್ನೂ ರಕ್ಷಿಸಿ, ಪ್ಲೀಸ್...ಸೇವ್ ದಿ ವಾಟರ್. ನನ್ನ ಮಾತಿಗೆ ಬೆಲೆ ಕೊಡೋ ನಂಬಿಕೆಯಲ್ಲಿ ಇಂತಿ ನಿಮ್ಮ ಗೌರಿ. (ವಿಡಿಯೋ ಕೃಪೆ - ವಾಟ್ಸ್ ಆಪ್)

English summary
India Summer is here : Water scarcity is acute. There is challenge of ensuring water availability for animals. By watching the video of a Cow drinking water using hand pump. Here goes a small request for all our readers to Save Water, in a big way ! (Video Courtesy - WhatsApp)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X