ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

3 ದಿನಗಳಲ್ಲೇ ಇಂದಿರಾ ಕ್ಯಾಂಟೀನ್ ನಿರ್ಮಾಣ!

By Mahesh
|
Google Oneindia Kannada News

ಬೆಂಗಳೂರು, ಜೂನ್ 25: ಲಕ್ಷಾಂತರ ಮಂದಿ ಹಸಿವು ನೀಗಿಸಲು ಬೆಂಗಳೂರಿನಲ್ಲಿ ರಿಯಾಯತಿ ದರದ ಕ್ಯಾಂಟೀನ್ ಆರಂಭಿಸಲಾಗುತ್ತಿದೆ.

ಹಸಿವು ಮುಕ್ತ ರಾಜ್ಯಕ್ಕಾಗಿ ಇಂದಿರಾ ಕ್ಯಾಂಟೀನ್, ಏನಿದರ ವಿಶೇಷ?ಹಸಿವು ಮುಕ್ತ ರಾಜ್ಯಕ್ಕಾಗಿ ಇಂದಿರಾ ಕ್ಯಾಂಟೀನ್, ಏನಿದರ ವಿಶೇಷ?

ಬಜೆಟ್ ನಲ್ಲಿ ಘೋಷಿಸಿದಂತೆ, ಸಿದ್ದರಾಮಯ್ಯ ಸರ್ಕಾರ ತನ್ನ ಮಹತ್ವ ಯೋಜನೆಯನ್ನು ಸಾಕಾರಗೊಳಿಸುತ್ತಿದೆ. ನಮ್ಮ ಕ್ಯಾಂಟೀನ್ ಎಂಬ ಹೆಸರು ಬದಲಾಗಿ ಇಂದಿರಾ ಕ್ಯಾಂಟೀನ್ ಹೆಸರು ಬಂದಿದೆ. ಬೆಂಗಳೂರಿನ ಪ್ರತಿ ವಾರ್ಡಿನಲ್ಲೂ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ಲಭ್ಯವಾಗಲಿದೆ.

ಇಂದಿರಾ ಕ್ಯಾಂಟೀನ್ ನ ಮೆನು, ದರಇಂದಿರಾ ಕ್ಯಾಂಟೀನ್ ನ ಮೆನು, ದರ

ಇಂದಿರಾ ಕ್ಯಾಂಟೀನ್' ಆಗಸ್ಟ್ 15ರಿಂದ ಆರಂಭವಾಗಲಿದ್ದು. ಬೆಂಗಳೂರಿನ ಎಲ್ಲಾ 198 ವಾರ್ಡ್ ಗಳಲ್ಲಿ ಏಕ ಕಾಲಕ್ಕೆ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಬಿಬಿಎಂಪಿಗೆ ಸೂಚಿಸಲಾಗಿದೆ.

ಅಲ್ಲದೆ, ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಷಷ್ಟನೆ ನೀಡಿದೆ. ಇಂದಿರಾ ಕ್ಯಾಂಟೀನ್ ಯೋಜನೆಯನ್ನು ತೆರೆಯಲು ಸಮಿತಿಗಳನ್ನು ರಚಿಸಲಾಗಿದ್ದು ಎಲ್ಲಾ ವಾರ್ಡ್ ಗಳಲ್ಲಿ ಎರಡರಿಂದ ಮೂರು ಜಾಗಗಳನ್ನು ಗುರುತಿಸಲಾಗಿದೆ. 122 ವಾರ್ಡ್ ಗಳಲ್ಲಿ ಕ್ಯಾಂಟೀನ್ ಗಾಗಿ ಜಾಗವನ್ನು ಈಗಾಗಲೇ ಅಳವಡಿಸಲಾಗಿದೆ.

ಕೇಂದ್ರಿಕೃತ ಅಡುಗೆ ಮನೆ

ಕೇಂದ್ರಿಕೃತ ಅಡುಗೆ ಮನೆ

ಕೇಂದ್ರಿಕೃತ ಅಡುಗೆ ಮನೆ ಮೂಲಕ ಇಂದಿರಾ ಕ್ಯಾಂಟೀನ್ ಗಳಿಗೆ ಆಹಾರ ಪೂರೈಸಲಾಗುತ್ತದೆ. ಮತ್ತು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಅಡುಗೆ ಮನೆ ನಿರ್ಮಿಸಲಾಗುತ್ತದೆ. ಪ್ರತಿ ಇಂದಿರಾ ಕ್ಯಾಂಟೀನ್ ಗೆ 32 ಲಕ್ಷ ರುಪಾಯಿ ವೆಚ್ಚವಾಗುತ್ತಿದ್ದು, ಲ್ಯಾಂಡ್ ಆರ್ಮಿಯಿಂದ ಕಟ್ಟಡ ನಿರ್ಮಿಸಲಿದೆ. ಶೇ 33ರಷ್ಟು ಅಡುಗೆ ಕೋಣೆಗಳನ್ನು ಸ್ರ್ತೀ ಶಕ್ತಿ ಸಂಘಗಳಿಗೆ ವಹಿಸಲು ನಿರ್ಧರಿಸಲಾಗಿದೆ. ಜೊತೆಗೆ 198 ಕ್ಯಾಂಟೀನ್ ಗಳನ್ನುನೋಡಿಕೊಳ್ಳಲು ಉನ್ನತ ಅಧಿಕಾರಿ ಸಮಿತಿ ನೇಮಕ ಮಾಡಲಾಗಿದೆ.

ತ್ವರಿತಗತಿಯಲ್ಲಿ ಕಾಮಗಾರಿ

ತ್ವರಿತಗತಿಯಲ್ಲಿ ಕಾಮಗಾರಿ

ಬೆಂಗಳೂರಿನ ಕೊಡಿಗೆ ಹಳ್ಳಿಯ ಟಾಟಾ ನಗರದ ಬಳಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕೃಷ್ಣಗಿರಿಯಿಂದ ಪ್ರೀ ಕಾಸ್ಟ್ ವಸ್ತುಗಳನ್ನು ಆಮದು ಮಾಡಿಕೊಂಡು ಬಳಕೆ ಮಾಡುತ್ತಿರುವುದರಿಂದ ಒಂದು ಕ್ಯಾಂಟೀನ್ ನಿರ್ಮಾಣಕ್ಕೆ 3 ದಿನದ ಅವಧಿ ಸಾಕು. ಮೊದಲ ಹಂತದಲ್ಲಿ 122 ವಾರ್ಡ್ ಗಳಲ್ಲಿ ಕ್ಯಾಂಟೀನ್ ನಿರ್ಮಾಣವಾಗಲಿದೆ.

ಮೂರು ಹೊತ್ತು ಊಟ ತಿಂಡಿ

ಮೂರು ಹೊತ್ತು ಊಟ ತಿಂಡಿ

* ಇಂದಿರಾ ಕ್ಯಾಂಟೀನ್ ಯೋಜನೆಯಡಿಯಲ್ಲಿ ಮೂರು ಹೊತ್ತು ಊಟ ತಿಂಡಿ ನೀಡಲಾಗುತ್ತದೆ.
* 5 ರೂಪಾಯಿಗೆ ತಿಂಡಿ ಹಾಗೂ 10 ರೂಪಾಯಿಗೆ ಊಟ ನೀಡಲಾಗುತ್ತದೆ. ಇದಕ್ಕಾಗಿ ಮೆನು ಕೂಡ ತಯಾರಾಗಿದ್ದು ಮೆನು ಹೀಗಿದೆ.
ಬೆಳಗ್ಗಿನ ಉಪಹಾರ : ಇಡ್ಲಿ ಸಾಂಬಾರ್, ರೈಸ್ ಬಾತ್, ಅವಲಕ್ಕಿ ಉಪ್ಪಿಟ್ಟು, ಖಾರ ಉಪ್ಪಿಟ್ಟು, ಖಾರ ಪೊಂಗಲ್, (ವಾರದಲ್ಲಿ ಒಂದರಂತೆ,).
ಮಧ್ಯಾಹ್ನ ಮತ್ತು ರಾತ್ರಿ ಊಟ: ಅನ್ನ ಸಾರು, ಉಪ್ಪಿನಕಾಯಿ, ಹಪ್ಪಳ.
ಭಾನುವಾರ : ಬಿಸಿಬೇಳೆ ಬಾತ್, ತರಕಾರಿ, ಅನ್ನ, ಪುಳಿಯೊಗರೆ ಜೀರಿಗೆ ಅನ್ನ (ಪ್ರತೀ ವಾರದಲ್ಲಿ ಒಂದು).

ಆಗಸ್ಟ್ 15ರಂದು ಇಂದಿರಾ ಕ್ಯಾಂಟೀನ್

ಆಗಸ್ಟ್ 15ರಂದು ಇಂದಿರಾ ಕ್ಯಾಂಟೀನ್ ಬೆಂಗಳೂರು ನಗರದಲ್ಲಿ ಆರಂಭವಾಗಲಿದೆ. ಕಡಿಮೆ ದರದಲ್ಲಿ ಗುಣಮಟ್ಟದ ತಿಂಡಿ ಮತ್ತು ಊಟ ಒದಗಿಸುವ ಮಹತ್ವದ ಯೋಜನೆ ಇದಾಗಿದೆ. ಬಿಬಿಎಂಪಿ ವ್ಯಾಪ್ತಿಯ 122ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣ ಆರಂಭವಾಗಿದೆ. ಈ ಕುರಿತ ವರದಿ ಇಲ್ಲಿದೆ.

English summary
Watch : How the subsidised Indira Canteen constructed. Initially Canteen will be set up in 122 wards out of 98 wards and canteen building will be constructed in the span of 3 days claims Karnataka Information Department video. From August 15th all canteens would provide breakfast at Rs 5 and lunch and dinner at Rs 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X