ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 'ಹೊಗೆ ಪ್ರಮಾಣ ಪತ್ರ' ಕಡ್ಡಾಯ ಎಷ್ಟು ಸರಿ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ.4: ವಾಯು ಮಾಲಿನ್ಯ ತಡೆ ಮತ್ತು ಪರಿಸರ ಕಾಪಾಡುವ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಹೊರಡಿಸಲು ಮುಂದಾಗಿರುವ ಅಧಿಸೂಚನೆ ಬಗ್ಗೆ ವಿವರವಾದ ಮಾಹಿತಿ ಸಕಲರಿಗೂ ಲಭ್ಯವಿಲ್ಲ.

ಮಾಲಿನ್ಯ ತಡೆ, ಅಥವಾ 'ಹೊಗೆ' ಪ್ರಮಾಣ ಪತ್ರವಿರದ ವಾಹನಗಳಿಗೆ ಇಂಧನ ನೀಡದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿರುವ ಸಲಹೆ ಅನ್ವಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ.[ಹೊಗೆ ಪ್ರಮಾಣಪತ್ರವಿರದಿದ್ದರೆ ಇಂಧನ ಸಿಗಲ್ಲ]

petrol

ಮಾಲಿನ್ಯ ತಡೆ ಕುರಿತಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪಿಐಎಲ್ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಹಾಗೂ ನ್ಯಾಯಮೂರ್ತಿ ರಾಮಮೋಹನ್ ರೆಡ್ಡಿ ಅವರಿದ್ದ ವಿಭಾಗೀಯ ಪೀಠಕ್ಕೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ವರದಿಯೊಂದನ್ನು ಸಲ್ಲಿಕೆ ಮಾಡಿದ್ದರು.

ಇಂಧನ ಬೇಕಿದ್ದಲ್ಲಿ ಹೊಗೆ ಪ್ರಮಾಣ ಪತ್ರ ಕಡ್ಡಾಯ
ವಾಯು ಮಾಲಿನ್ಯ ತಡೆಗೆ ಸಾರಿಗೆ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ. ಸಮರ್ಪಕ ಎಮಿಷನ್ ಟೆಸ್ಟ್ ವರದಿ ಇಲ್ಲವಾದರೆ ಯಾವ ಬಂಕ್ ಗಳಿ ನಿಮಗೆ ಇಂಧನ ಹಾಕಲ್ಲ ಎಂಬುದು ಪ್ರಮುಖ ಅಂಶ.

ನಗರದ ಯಾವ ಬಂಕ್ ಗಳಲ್ಲೂ ಇಂಧನ ಸಿಗದೆ ಪರಿತಪಿಸಬೇಕಾಗುವುದು. ಇದನ್ನು ಸ್ಪಷ್ಟವಾಗಿ ಕಾರ್ಯರೂಪಕ್ಕೆ ತರುವಂತೆ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ವರದಿ ಸಲ್ಲಕೆ ಮಾಡಿದ್ದಾರೆ.[ಉಸಿರುಗಟ್ಟಿಸುವ ವಾತಾವರಣದಲ್ಲಿ ಬೆಂಗಳೂರು ವಿಲವಿಲ]

ಕರಡು ಪ್ರತಿ ಸಿದ್ಧ
ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ವರದಿ ಅನ್ವಯ ಕರಡೊಂದನ್ನು ಸಿದ್ಧಪಡಿಸಲಾಗಿದ್ದು ಶೀಘ್ರವೇ ಅನುಷ್ಠಾನವಾಗಲಿದೆ. ಸರ್ಕಾರ ಮತ್ತು ಬಿಬಿಎಂಪಿ ಮಾಲಿನ್ಯ ತಡೆಗೆ ಯಾವ ಯಾವ ಹೆಜ್ಜೆ ಇಡುತ್ತಿದೆ ಎಂಬುದನ್ನು ಸರಿಯಾದ ದಾಖಲೆಗಳೊಂದಿಗೆ ತಿಳಿಸುವಂತೆ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಹಾಗೂ ನ್ಯಾಯಮೂರ್ತಿ ರಾಮಮೋಹನ್ ರೆಡ್ಡಿ ಅವರಿದ್ದ ವಿಭಾಗೀಯ ಪೀಠ ಸೂಚನೆ ನೀಡಿದೆ.

ಯಾಕಾಗಿ ಇಂಥ ಕ್ರಮ
ಈ ಹಿಂದೆಯೇ ವಾಯು ಮಾಲಿನ್ಯ ತಡೆ ಮತ್ತು ಪರಿಸರ ಉಳಿಸಲು ಯಾವ ಕ್ರಮ ತೆಗೆದುಕೊಂಡಿದ್ದೀರಿ? ಎಂದು ಹೈ ಕೋರ್ಟ್ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಪ್ರಶ್ನೆ ಮಾಡಿತ್ತು. ಅಲ್ಲದೇ ಪರಿಸರ ಕಾಪಾಡಲು ಸಲಹೆ ಸೂಚನೆ ಗಳನ್ನು ನೀಡಲು ಗಡುವು ನೀಡಿತ್ತು. ಈಗ ವರದಿ ಸಲ್ಲಿಕೆಯಾಗಿದ್ದು ಕಾನೂನು ಜಾರಿ ನಿಶ್ಚಿತವಾಗಿದೆ.

ಬೆಂಗಳೂರಿಗೆ ಇಂಥ ಕಾನೂನು ಅಗತ್ಯವೇ? ಹೌದು ಎಂದಾದರೆ ನಿಜಕ್ಕೂ ಯೋಜನೆ ಜಾರಿ ಪಾರದರ್ಶಕವಾಗಿರುತ್ತದೆಯೇ? ಹಳೇ ವಾಹನಗಳನ್ನೇನು ಗುಜರಿಗೆ ಹಾಕಬೇಕಾ? ಲಂಚ ಪಡೆಯಲು ಇದು ಮತ್ತೊಂದು ದಾರಿ ಮಾಡಿಕೊಡುತ್ತದೆ ಎಂಬ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗತೊಡಿದೆ.

English summary
In a bid to save Bengaluru, the Garden City from air pollution, an interesting guideline which states that vehicle owners who do not possess an emission certificate will be denied fuel has been put out. In the action taken report of the Transport Department a directive to the Food and Civil Supplies department has been made. This was revealed when the Karnataka High Court was hearing a suo-motu Public Interest Litigation which seeks to bring down the air pollution levels in the city of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X