ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಮಂತ್ರಿ ಮಾಲ್ ನಲ್ಲಿ ಗೋಡೆ ಕುಸಿತ: ಕೆಲವರಿಗೆ ಗಾಯ

|
Google Oneindia Kannada News

ಬೆಂಗಳೂರು, ಜನವರಿ 16: ಪ್ರತಿಷ್ಠಿತ ಮಂತ್ರಿ ಮಾಲ್ ನ ಹಿಂಬದಿ ಗೋಡೆ ಕುಸಿದ ಕಾರಣದಿಂದಾಗಿ, ಲಕ್ಷ್ಮಮ್ಮ (45) ಎಂಬುವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಅವರು ಹೌಸ್ ಕೀಪಿಂಗ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಂದು ಬೆಳಗ್ಗೆ ಎಂದಿನಂತೆ ಮಂತ್ರಿ ಮಾಲ್ ಆರಂಭಗೊಂಡಿದ್ದು, ಜನರಿಂದ ತುಂಬಿ ತುಳುಕುತ್ತಿತ್ತು. ಆದರೆ, ಮಧ್ಯಾಹ್ನದ ಹೊತ್ತಿಗೆ ಮಾಲ್ ನ ಹಿಂಬದಿಯಲ್ಲಿರುವ ಗೋಡೆ ಕುಸಿದು ಅಲ್ಲಿದ್ದ ಕೆಲವರ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಇವರಲ್ಲಿ ಲಕ್ಷ್ಮಮ್ಮ ಎಂಬುವರ ಬಗ್ಗೆ ಮಾತ್ರ ಮಹಿತಿ ಲಭ್ಯವಾಗಿದ್ದು, ಇತರರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಲಕ್ಷ್ಮಮ್ಮ ಹೊರತುಪಡಿಸಿದಂತೆ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿರಬಹುದೆಂದು ಶಂಕಿಸಲಾಗಿದೆ.

Wall collapsed in Matri Square of Bengaluru; several injured

ಗೋಡೆ ಕುಸಿತಕ್ಕೆ ನಿಖರ ಕಾರಣ ಸಿಕ್ಕಿಲ್ಲ. ಇಡೀ ಮಾಲ್ ನಲ್ಲಿ ಅಳವಡಿಸಲಾಗಿರುವ ಸೆಂಟ್ರಲ್ ಎಸಿಯ ಪೈಪ್ ತುಂಡಾಗಿದ್ದು, ಅದರಲ್ಲಿ ನೀರು ಸೋರಿಕೆಯಾಗಿದ್ದರಿಂದಾಗಿ ಗೋಡೆಯು ನೀರಿನಲ್ಲಿ ನೆನೆದಿದ್ದರಿಂದ ಕುಸಿಯಿತು ಎಂದು ಅಂದಾಜಿಸಲಾಗಿದೆ.

ಘಟನೆ ನಡೆದ ಕೂಡಲೇ ಮಂತ್ರಿ ಮಾಲ್ ನಲ್ಲಿದ್ದ ಎಲ್ಲರನ್ನೂ ತೆರವುಗೊಳಿಸಲಾಗಿದೆ. ಮಾಲ್ ನಲ್ಲಿ ನಡೆಯುತ್ತಿದ್ದ ಎಲ್ಲಾ ಸಿನಿಮಾ ಶೋಗಳನ್ನೂ ರದ್ದುಗೊಳಿಸಿ ಪ್ರೇಕ್ಷಕರನ್ನು ಹೊರಕಳಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಜಂಟಿ ಆಯುಕ್ತ ಪಳಂಗಪ್ಪ (ಪಶ್ಚಿಮ ವಲಯ), ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಬಿಬಿಎಂಪಿ ಆಯುಕ್ತರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಘಟನೆಗೆ ಕಾರಣ ತನಿಖೆ ನಡೆದ ಮೇಲಷ್ಟೇ ತಿಳಿಯುತ್ತದೆ ಎಂದರು.

ಇದೇ ವೇಳೆ, ಮಂತ್ರಿ ಮಾಲ್ ಗೋಡೆ ಕುಸಿತದಿಂದ ಅದರ ಹಿಂದೆ ನಡೆಯುತ್ತಿರುವ ಮೆಟ್ರೋ ಕಾಮಗಾರಿಗೆ ಯಾವುದೇ ಅಡಚಣೆ ಉಂಟಾಗಿಲ್ಲ ಎಂದು ಅವರು ತಿಳಿಸಿದರು.

English summary
Several people injured as a wall in infamouse Mantri Square, Bengaluru, collapsed on Monday noon. As per the first report, a house keeping worker inside the mall named Lakshmamma (45) injured has been taken to the hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X