ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮಾನುಜರ ಸ್ಮರಣೆಗಾಗಿ ವಿಶ್ಮಮಂಗಳ ಸಹಸ್ರಮಾನೋತ್ಸವ

By Ananthanag
|
Google Oneindia Kannada News

ಶ್ರೀ ರಾಮಾನುಜಾಚಾರ್ಯರು ತಮ್ಮ ದಿವ್ಯ ಜೀವನ ಕಳೆದು ಒಂದು ಸಾವಿರ ವರ್ಷವಾಗಿರುವ ಹಿನ್ನೆಲೆ ಯಲಚೇಹಳ್ಳಿಯಲ್ಲಿರುವ ಶ್ರೀ ರಾಮಾನುಜಾಚಾರ್ಯ ಸಹಸ್ರಮಾನೋತ್ಸವ ಸಮಿತಿಯಿಂದ ಜನವರಿ 29 ರಂದು ವಿಶ್ವಮಂಗಳ ಮಹೋತ್ಸವ ಆಚರಣೆ ನಡೆಯಲಿದೆ.

ಜನವರಿ 29 ರಂದು ಕನಕಪುರ ರಸ್ತೆಯಲ್ಲಿರುವ ಜ್ಯೋತಿ ವಿದ್ಯಾಕೇಂದ್ರದಲ್ಲಿ ಶ್ರೀ ರಾಮಾನುಜಾಚಾರ್ಯರಿಗೆ ವಿಶ್ವಮಂಗಳ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಮೇಲುಕೋಟೆ ಯದುಗಿರಿ ಯತಿರಾಜ ಮಠದ ಯತಿರಾಜ ನಾರಾಯಣ ರಾಮಾನುಜ ಜೀಯರ್ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಆಚಾರ್ಯರ ವಿಶೇಷ ಪೂಜೆ ಮತ್ತು ಸ್ತೋತ್ರ ಪಾರಾಯಣ ಮತ್ತು ಪಾದುಕಾ ಪೂಜೆ, ರಾಮಾನುಜರ ಮಹಿಮೆಯನ್ನು ವಿವರಿಸಲಿದ್ದಾರೆ.[ನಾವು ಮತ್ತು ಆಧ್ಯಾತ್ಮಿಕತೆ]

ಇನ್ನು ಯುವ ಬ್ರಿಗೇಡ್ ಸಂಚಾಲಕರಾದ ಚಕ್ರವರ್ತಿ ಸೂಲಿಬೆಲೆಯವರು ರಾಮಾನುಜಾಚಾರ್ಯರ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮಗಳನ್ನು ಲೋಕಕಲ್ಯಾಣಾರ್ಥ ಶ್ರೀರಾಮಾನುಜಾಚಾರ್ಯರು ಸಾವಿರ ವರ್ಷದ ಹಿಂದೆ ಅವರು ದೇಶ ಮತ್ತು ಧಾರ್ಮಿಕ ಸುಧಾರಣೆಗಾಗಿ ಸಲ್ಲಿಸಿದ ಸೇವೆಗಾಗಿ ಸ್ಮರಣೆಗಾಗಿ ನಡೆಸಲಾಗುತ್ತಿದೆ.

ಶ್ರೀರಾಮಾನುಜಾಚಾರ್ಯರ ಬಗೆಗಿನ ಕಿರುಪರಿಚಯ ಇಲ್ಲಿದೆ.

ಇಳೆಗಿಳಿದ ಪೆರುಮಾಳ್

ಇಳೆಗಿಳಿದ ಪೆರುಮಾಳ್

*ತಮಿಳುನಾಡಿನ ಪೆರಂಬೂರಿನಲ್ಲಿ ಕೇಶವ ಸೋಮಯಾಜಿ, ಕಾಂತಿಮತಿ ಎಂಬ ದಂಪತಿಗೆ ಕ್ರಿ.ಶ. 1017ರಲ್ಲಿ ಜನನ.
*ಇಳೆಯ ಪೆರುಮಾಳ್ ಜನ್ಮನಾಮ, ಗುರುಗಳಾದ ಯಾದವ ಪ್ರಕಾಶರಲ್ಲಿ ವಿದ್ಯಾಭ್ಯಾಸ
*ಚರ್ಚೆಗಳಲ್ಲಿ ಯಾದವ ಪ್ರಕಾಶರನ್ನೇ ಮೀರಿಸುತ್ತಿದ್ದ ಕಾರಣ ಗುರುಗಳಿಂದ ವಿರೋಧ

ನಾರಾಯಣನಲ್ಲಿ ಭಕ್ತಿ

ನಾರಾಯಣನಲ್ಲಿ ಭಕ್ತಿ

*ಇಳೆಯ ಪೆರುಮಾಳಿಗೆ ನಾರಾಯಣನಲ್ಲಿ ಭಕ್ತಿ, ವೈಷ್ಣ ಸಂಪದಾಯ ಬಗ್ಗೆ ಪ್ರೀತಿ
*ವರದರಾಜ ದೇವಾಲಯದ ಮೇಲೆ ನಿಂತು ತಿರುಮಂತ್ರದ ಪಠಣ
*ಶೈವ ಸಂಪ್ರದಾಯದ ನ್ಯೂನತೆಯನ್ನು ಎತ್ತಿ ತೋರಿಸಿದ್ದು, ದೊರೆ ಕುಲೋತ್ತುಂಗ ರಾಜನಿಗೆ ಬೇಸರ
*ರಾಜನ ಕಡೆಯವರಿಂದ ರಾಮಾನುಜರಿಗೆ ಪ್ರಾಣ ಬೆದರಿಕೆ

ಶ್ರೀರಂಗಂ ನಿಂದ ಕರುನಾಡಿಗೆ

ಶ್ರೀರಂಗಂ ನಿಂದ ಕರುನಾಡಿಗೆ

*ಪ್ರಾಣ ಬೆದರಿಕೆಯ ಕಾರಣ ಶ್ರೀರಂಗಮ್ ನಿಂದ ಕರ್ನಾಟಕದ ಕೆರೆತೊಣ್ಣನೂರಿನಲ್ಲಿ ನೆಲೆ

*ಕೆಲವು ರಾಮಾನುಜರ ಅನುಯಾಯಿಗಳು ಕರುನಾಡಿಗೆ ಪಯಣ
*ಕರ್ನಾಟಕದ ಮಹಾರಾಜನಾಗಿದ್ದ ಹೊಯ್ಸಳ ದೂರೆ ಬಿಟ್ಟಿದೇವನಲ್ಲಿ ಆಶ್ರಯ

ರಾಮಾನುಜರ ಸಿದ್ಧಾಂತಕ್ಕೆ ಶರಣದಾದ ಬಿಟ್ಟಿದೇವ

ರಾಮಾನುಜರ ಸಿದ್ಧಾಂತಕ್ಕೆ ಶರಣದಾದ ಬಿಟ್ಟಿದೇವ

*ರಾಮಾನುಜರ ತತ್ವ ಸಿದ್ಧಾಂತಕ್ಕೆ ಶರಣಾದ ಬಿಟ್ಟಿದೇವನಿಂದ ವೈಷ್ಣವ ಸಂಪ್ರದಾಯದ ಆಚರಣೆ
*ಬಿಟ್ಟಿದೇವ, ವಿಷ್ಣುವರ್ಧನನಾಗಿ ವೈಷ್ಣವ ಸಂಪ್ರದಾಯದ ಪ್ರಚಾರಕ್ಕೆ ತಂದ
*ವಿಷ್ಣುವರ್ಧನನ ಆಸ್ಥಾನದ ರಾಜಗುರುವಾದ ಶ್ರೀ ರಾಮಾನುಜರು.

ಹಿಂದುಳಿದವರಿಗೂ ದೇವಾಲಯ ಪ್ರವೇಶಾವಕಾಶ

ಹಿಂದುಳಿದವರಿಗೂ ದೇವಾಲಯ ಪ್ರವೇಶಾವಕಾಶ

*ರಾಮಾನುಜರಿಗಾರಿಗಾಗಿ ಮೈಸೂರಿನ ಮೇಲುಕೋಟೆ ಕೆಲ ಜಾಗಗಳ ದತ್ತಿ.
*ಮೇಲುಕೋಟೆಯಲ್ಲಿ ನೆಲೆನಿಂತ ರಾಮಾನುಜರು ಸಿದ್ಧಾಂತವನ್ನು ಪಸರಿಸಿದರು.
*ರಾಮಾನುಜರ ತತ್ವಗಳಿಗೆ ಹೆಚ್ಚಿದ ಅನುಯಾಯಿಗಳು, ತಿರುನಾರಾಯಣನ ಆರಾಧನೆ
*ಹಿಂದುಳಿದವರಿಗೂ ದೇವಾಲಯ ಪ್ರವೇಶ, ಮತ್ತು ಪೂಜೆಗೆ ಅವಕಾಶ

ಮರಳಿ ಶ್ರೀರಂಗಂಗೆ

ಮರಳಿ ಶ್ರೀರಂಗಂಗೆ

*ಮೇಲುಕೋಟೆಯಲ್ಲಿ ಹಲವು ವರ್ಷಗಳ ಕಾಲ ನೆಲೆ
*ದೊರೆ ಕುಲೋತ್ತುಂಗ ಚೋಳನ ಮರಣಾನಂತರ ಮತ್ತೆ ಶ್ರೀರಂಗಂ ಗೆ ಮರಳಿದ ಶ್ರೀಗಳು
*ಕರ್ನಾಟಕದಲ್ಲಿ ವೈಷ್ಣವ ಸಂಪ್ರದಾಯವನ್ನು ಪ್ರತಿಪಾದಿಸಿದ ಶ್ರೀಗಳು ವಿಷ್ಣುವರ್ಧನಿಗೆ ಅಭಯ ನೀಡಿ ತೆರಳಿದರು.

ಧರ್ಮಪ್ರಚಾರ, ಗ್ರಂಥ ರಚನೆ

ಧರ್ಮಪ್ರಚಾರ, ಗ್ರಂಥ ರಚನೆ

*ಶ್ರೀರಂಗಂಗೆ ತೆರಳಿ ಧರ್ಮಪ್ರಚಾರ, ಗ್ರಂಥ ರಚನೆ, ಸುಧಾರಣೆ
*ಸುಮಾರು ಕ್ರಿ.ಶ. 1137 ರಲ್ಲಿ ತಮ್ಮ 120 ನೇ ವಯಸ್ಸಿನಲ್ಲಿ ಕೀರ್ತಿಶೇಷರಾದರು
*ಶ್ರೀ ವೈಷ್ಣವ ಸಂಪ್ರದಾಯದಲ್ಲಿ ಅನೇಕ ಗದ್ಯಗಳು, ಬ್ರಹ್ಮ ಸೂತ್ರಕ್ಕೆ ಶ್ರೀಭಾಷ್ಯ ಅನೇಕ ಕೃತಿಯನ್ನು ರಚಿಸಿ ಅಜರಾಮರರಾದರು.

English summary
Vishwamangala Mahothsava function has been organised by Shri Ramanujacharya sahasramanothsava samithi, Yalachenahalli of Bengaluru to commemorate the demise of sage Ramanujacharya one thousand years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X