ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮಾಜಿಕ ಜಾಲತಾಣಗಳ ಕುರಿತು ವಿಶೇಷ ಕಾರ್ಯಾಗಾರ

ಸಾಮಾಜಿಕ ಜಾಲತಾಣಗಳ ಕುರಿತು ಕರ್ನಾಟಕ ವಿಶ್ವ ಸಂವಾದ ಕೇಂದ್ರವು ಬೆಂಗಳೂರಿನಲ್ಲಿ ಡಿಸೆಂಬರ್ 4ರಂದು ವಿಶೇಷ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ. ಖ್ಯಾತ ವಿಶ್ಲೇಷಕರು ಮತ್ತು ಲೇಖಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

By Prithviraj
|
Google Oneindia Kannada News

ಬೆಂಗಳೂರು, ನವೆಂಬರ್, 28: ಸಾಮಾಜಿಕ ಜಾಲತಾಣಗಳ ಕುರಿತು ನುರಿತ ವಿಶ್ಲೇಷಕರು, ತಜ್ಞರು ಮತ್ತು ಖ್ಯಾತ ಬರಹಗಾರರೊಂದಿಗೆ 'ಕರ್ನಾಟಕ ವಿಶ್ವ ಸಂವಾದ ಕೇಂದ್ರ'ವು ಸೋಷಿಯಲ್ ಮೀಡಿಯಾ 2016 ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ.

ಖ್ಯಾತ ಲೇಖಕ ತರುಣ್ ವಿಜಯ್ ಹಾಗು ಮೈಸೂರು-ಕೊಡಗು ಸಂಸದ ಮತ್ತು ಅಂಕಣಕಾರ ಪ್ರತಾಪ್ ಸಿಂಹ ಅವರು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಭಾಗವಹಿಸಲಿದ್ದಾರೆ.

ಇನ್ನು ಲೇಖಕ ತೌಫಿಲ್ ಅಹಮದ್, ಆರ್ ಎಸ್ ಎಸ್ ಸಂಘ ಪ್ರಚಾರಕ ಜೆ. ನಂದಕುಮಾರ್, ಸೈಬರ್ ಸುರಕ್ಷತಾ ತಜ್ಞ ಪ್ರಶಾಂತ್ ಕದ್ಲೂರ್, ಸಾಮಾಜಿಕ ಮಾಧ್ಯಮಗಳ ಕಾರ್ಯಕರ್ತರಾದ ಅಮಿತ್ ಮಾಳವೀಯ, ವಿಕಾಸ್ ಪಾಂಡೆ, ಸಾಮಾಜಿಕ ಮಾಧ್ಯಮಗಳ ವಿಶ್ಲೇಷಕ ಕಿರಣ್.ಎಸ್ ಅವರೂ ಸಹ ಸಂವಾದಲ್ಲಿ ಭಾಗವಹಿಸಲಿದ್ದಾರೆ.

Vishwa samvada kendra organized social media meet 2016

ಕಾರ್ಯಕ್ರಮವು ಡಿಸೆಂಬರ್ 4, 2016ರಂದು ಭಾನುವಾರ ಬೆಳಿಗ್ಗೆ 9:30ಯಿಂದ 4:30ರವರೆಗೆ ನಡೆಯಲಿದ್ದು, ರಾಜಾಜಿನಗರ 2ನೇ ಹಂತದಲ್ಲಿರುವ ಕೆಎಲ್ಇ ಕಾಲೇಜು ಆಡಿಟೋರಿಯಂನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಂವಾದದಲ್ಲಿ ಭಾಗವಹಿಸಲು ಇಚ್ಛಿಸುವವರು 9902002825 ವಾಟ್ಸಪ್ ಸಂಖ್ಯೆಗೆ ಸಂದೇಶ ಕಳುಹಿಸಿ ನವೆಂಬರ್ 30 ರೊಳಗೆ ನೋಂದಣಿ ಮಾಡಿಸಿಕೊಳ್ಳಲು ಸಂಸ್ಥೆ ಮನವಿ ಮಾಡಿದೆ.

English summary
Karnataka Vishwa samvada kendra organized 'Social Media Meet 2016' in KLE college auditorium, Rajajinagar second block, on December 04, columnist Pratap Simha, author Tarun Vijay will be take part of the program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X