ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತಾರಾಷ್ಟೀಯ ಯೋಗ ದಿನಾಚರಣೆಗೂ ಮುನ್ನ ಗಿನ್ನೆಸ್ ವಿಶ್ವ ದಾಖಲೆ

By Mahesh
|
Google Oneindia Kannada News

ಬೆಂಗಳೂರು, ಜೂನ್ 18: ಅಂತಾರಾಷ್ಟೀಯ ಯೋಗ ದಿನಾಚರಣೆ (ಜೂನ್ 21) ಗೂ ಮುನ್ನ ಕರ್ನಾಟಕದ ಯೋಗಪಟುಗಳು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಜೂನ್ 18ರಂದು 3000 ಯೋಗಿಗಳು 30 ಸೆಕೆಂಡುಗಳ ಕಾಲ ಶೀರ್ಷಾಸನಕ್ಕೆ ವಿಧಾನಸೌಧ ಮುಂಭಾಗ ವೇದಿಕೆಯಾಗಿತ್ತು.

ಆಯುಷ್ ಇಲಾಖೆ, ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯ, ಆರ್ಟ್ ಆಫ್ ಲಿವಿಂಗ್, ಪತಂಜಲಿ, ಯೋಗ ಗಂಗೋತ್ರಿ, ವಿಜಯವಾಣಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Vidhana Soudha 3000 Yogis Sheershasna For 30 Seconds Guinness Book of Records

ವಿಧಾನಸೌಧದ ಮುಂಭಾಗ ಬೆಳಗ್ಗೆ 6.30 ರಿಂದ 8.30ರ ಅವಧಿಯಲ್ಲಿ ಕಾರ್ಯಕ್ರಮಕ್ಕೆ ರಾಜ್ಯಪಾಲ ವಜುಭಾಯಿ ವಾಲ ಅವರು ಚಾಲನೆ ನೀಡಿದರು.


ಇದಕ್ಕೂ ಮುನ್ನ ರಾಜಭವನದಿಂದ ವಿಧಾನಸೌಧದ ತನಕ 'ಯೋಗ ನಡಿಗೆ' ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ, ಆರೋಗ್ಯ ಸಚಿವ ರಮೇಶ್ ಕುಮಾರ್, ಇಲಾಖೆ ಕಾರ್ಯದರ್ಶಿ ಶಾಲಿನಿ ರಜನೀಸ್ ಮುಂತಾದವರು ಪಾಲ್ಗೊಂಡಿದ್ದರು.

ಕಳೆದ ವರ್ಷ ಚೆನ್ನೈನ ಮರೀನಾ ಬೀಚ್ ನಲ್ಲಿ ಸುಮಾರು 646 ಮಂದಿ ಏಕಕಾಲಕ್ಕೆ ಶೀರ್ಷಾಸನ ಮಾಡುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು ಈ ದಾಖಲೆಯನ್ನು ಈಗ ಕರ್ನಾಟಕದ ಯೋಗಪಟುಗಳು ಮುರಿದಿದ್ದಾರೆ.

ಇನ್ನೊಂದೆಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೈಸೂರಿನ ರೇಸ್ ಕೋರ್ಸ್ ಆವರಣದಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿ ಸಾಮೂಹಿಕ ಯೋಗ ಪ್ರದರ್ಶನ ನೀಡುವುದರೊಂದಿಗೆ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.

English summary
3000 yogis doing Sheershasna for 30 seconds enters Guinness book of world records. The event held in front of Vidhan Souda on June 18th morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X