ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ : ವಾಹನ ಹಾಯ್ದರೂ ಪವಾಡಸದೃಶವಾಗಿ ಬದುಕುಳಿದ ಮಗು

ಅಪ್ಪ ಅಮ್ಮ ಸದಾ ಬಿಜಿ, ಕೆಲಸಕ್ಕೆ ಹೋಗುವ ತವಕ, ಯಾವುದೋ ಲೋಕದಲ್ಲಿ ವಿಹರಿಸುತ್ತಿರುತ್ತಾರೆ, ಮಕ್ಕಳೇನೋ ಮಾಡುತ್ತಿರುತ್ತವೆ, ಹೊರಗಡೆ ರಸ್ತೆಯಲ್ಲಿ ಏನೋ ಸಂಭವಿಸಿರುತ್ತದೆ. ಅನಾಹುತ ನಡೆದಾಗಲೇ ಪೋಷಕರು ಈ ವಾಸ್ತವ ಲೋಕಕ್ಕಿಳಿಯುವುದು.

By Prasad
|
Google Oneindia Kannada News

ಬೆಂಗಳೂರು, ಮೇ 22 : ಉಸಿರನ್ನು ಬಿಗಿಯಾಗಿ ಹಿಡಿದುಕೊಂಡು ಪ್ರತಿಯೊಬ್ಬ ಪೋಷಕರು ನೋಡಲೇಬೇಕಾದ ವಿಡಿಯೋ ಇದು. ಏಕೆಂದರೆ, ಹಿಂದಿನ ಬೆಂಗಳೂರಾಗಿ ಉಳಿದಿರದ ಇಂದಿನ ಬೆಂಗಳೂರಿನಲ್ಲಿ ನಿಮ್ಮ ಮಗುವಿಗೆ ಏನು ಬೇಕಾದರೂ ಸಂಭವಿಸಬಹುದು.

ಅಪ್ಪ ಅಮ್ಮ ಸದಾ ಬಿಜಿ, ಕೆಲಸಕ್ಕೆ ಹೋಗುವ ತವಕ, ಯಾವುದೋ ಲೋಕದಲ್ಲಿ ವಿಹರಿಸುತ್ತಿರುತ್ತಾರೆ, ಮಕ್ಕಳೇನೋ ಮಾಡುತ್ತಿರುತ್ತವೆ, ಹೊರಗಡೆ ರಸ್ತೆಯಲ್ಲಿ ಏನೋ ಸಂಭವಿಸಿರುತ್ತದೆ. ಅನಾಹುತ ನಡೆದಾಗಲೇ ಪೋಷಕರು ಈ ವಾಸ್ತವ ಲೋಕಕ್ಕಿಳಿಯುವುದು. ಹೀಗಾಗದಂತೆ ಎಚ್ಚರವಹಿಸಬೇಕಾದರೆ ಈ ವಿಡಿಯೋ ನೋಡಿ. [ಪವಾಡ: ತಲೆಗೆ ಪೆಟ್ಟು ಬಿದ್ದಿದ್ದೆ ತಡ ಕುರುಡುತನ ಮಾಯ!]

Video : Babies close encounter with death in Bengaluru

ತಂದೆ ನಾಪಿತ. ಡಾಲರ್ಸ್ ಕಾಲೋನಿಯಲ್ಲಿರುವ ಮನೆಯಲ್ಲಿಯೇ ಕ್ಷೌರದಂಗಡಿ ಇಟ್ಟಿದ್ದಾರೆ. ತಾಯಿ ಖಾಸಗಿ ಕಂಪನಿಯ ಉದ್ಯೋಗಿ. ಬೆಳಗಿನ ಜಾವ ಕ್ಷೌರದಂಗಡಿ ಬಾಗಿಲು ತೆರೆದಿದ್ದಾಗ, ಅಲ್ಲೇ ಆಟವಾಡುತ್ತಿದ್ದ ನೋಡಿ 14 ತಿಂಗಳ ಮಗು ಹೊರಗೆ ರಸ್ತೆಗೆ ಬಂದಿದೆ.[ಮಧ್ಯಪ್ರದೇಶದಲ್ಲಿ ಕಂದಕಕ್ಕೆ ಉರುಳಿದ ಬಸ್, 6 ಮಂದಿ ಸಾವು]

ಅಷ್ಟರಲ್ಲಿ ಕಪ್ಪು ಬಣ್ಣದ ಕಾರು ಹಿಂಬದಿ ಮುಖವಾಗಿ ಬಂದಿದೆ. ಅದರ ಅಡಿ ಮಗು ಸಿಲುಕಿದೆ. ನೋಡನೋಡುತ್ತಿದ್ದಂತೆ ಮಗುವಿನ ಮೇಲೆ ವಾಹನ ಹತ್ತಿಬಿಟ್ಟಿದೆ. ಅಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬ ಕಿರುಚಿಕೊಂಡಾಗಲೇ ನಡೆದ ದುರಂತ ಗಮನಕ್ಕೆ ಬಂದಿದೆ.

ಅದೃಷ್ಟವಶಾತ್ ಮಗು ಬದುಕುಳಿದಿದೆ. ಅಷ್ಟು ದೊಡ್ಡ ವಾಹನ ಹತ್ತಿಳಿದರೂ ಮಗು ಬದುಕುಳಿದಿರುವುದು ಪವಾಡವೇ ಸರಿ ಎಂದು ವೈದ್ಯರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಾಲಿನ ಹೆಬ್ಬೆರಳ ಮೂಳೆ ಪುಡಿಪುಡಿಯಾಗಿರುವುದು ಬಿಟ್ಟರೆ ಮಗುವಿಗೆ ಅಂತಹ ಗಾಯವಾಗಿಲ್ಲ.

ದೇವರು ದೊಡ್ಡವನು. ಮಗು ಬದುಕುಳಿಯಿತು. ಆದರೆ, ಇನ್ನು ಮೇಲಾದರೂ ಸದಾ ತಮ್ಮ ಕೆಲಸದಲ್ಲಿಯೇ ಮಗ್ನರಾಗಿರುವ ಪೋಷಕರು ಪಾಠ ಕಲಿಯುತ್ತಾರೆಯೆ? ಅದಕ್ಕೇ ಹೇಳಿದ್ದು ಇಂದು ಬೆಂಗಳೂರು ಅಂದಿನ ಬೆಂಗಳೂರಾಗಿ ಉಳಿದಿಲ್ಲ. ಮಕ್ಕಳು ರಸ್ತೆಗಿಳಿದರೆ ಸಾಕು ಏನು ಸಂಭವಿಸುತ್ತದೋ ಎಂಬ ಭಯ ಕಾಡುತ್ತಿರುತ್ತದೆ. [ಮದರ್ ತೆರೆಸಾ ಸಂತಳಾಗಿದ್ದು ಹೇಗೆ? ಪವಾಡಗಳೇನು?]

English summary
A 14-month-old girl miraculously escaped from the jaws of death when it escaped unhurt after being run over by a car in Bengaluru. Working parents should take extra care of their children while they are playing on the road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X