ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಮತ್ತೊಂದು ಜೀವಂತ ಹೃದಯ ಸಾಗಣೆ

By Super Admin
|
Google Oneindia Kannada News

ಬೆಂಗಳೂರು, ಫೆ. 28 : ಬೆಂಗಳೂರು ಇಂದು ಮತ್ತೊಂದು ಜೀವಂತ ಹೃದಯ ಸಾಗಣೆಗೆ ಸಾಕ್ಷಿಯಾಗಲಿದೆ. ನಗರದ ವಿಕ್ಟೋರಿಯಾ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಹೈದರಾಬಾದ್‌ಗೆ ರವಾನಿಸಲಾಗುತ್ತದೆ. ಶುಕ್ರವಾರ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಪೋಷಕರು ಹೃದಯವನ್ನು ದಾನ ಮಾಡಲು ಒಪ್ಪಿಗೆ ನೀಡಿದ್ದು, ಶಸ್ತ್ರ ಚಿಕಿತ್ಸೆ ನಡೆಯುತ್ತಿದೆ.

ಶುಕ್ರವಾರ ಎಲೆಕ್ಟ್ರಾನಿಕ್ ಸಿಟಿ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಕಲಬುರಗಿ ಮೂಲದ ಪಂಡಿತ್ ಶಿವರಾಯ್ ಭಾಗಿ (30) ಅವರ ಮೆದುಳು ನಿಷ್ಕ್ರೀಯಗೊಂಡ ಹಿನ್ನಲೆಯಲ್ಲಿ ಹೃದಯವನ್ನು ದಾನ ಮಾಡಲು ಪೋಷಕರು ಒಪ್ಪಿಗೆ ನೀಡಿದ್ದಾರೆ. [ಚೆನ್ನೈಗೆ ತೆರಳಿದ ಜೀವಂತ ಹೃದಯ]

Heart

ಶನಿವಾರ ಬೆಳಗ್ಗೆ 11.40ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಜೀವಂತ ಹೃದಯ ಹೈದರಾಬಾದ್‌ಗೆ ತೆರಳಲಿದೆ. ಮೊದಲ ಬಾರಿ ಸರ್ಕಾರಿ ಆಸ್ಪತ್ರೆಯ ಮೂಲಕ ಜೀವಂತ ಹೃದಯವನ್ನು ತೆಗೆದು ರವಾನೆ ಮಾಡಲಾಗುತ್ತಿದೆ. [ಬೆಂಗಳೂರಿನಲ್ಲಿ ಜೀವಂತ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿ]

ಗ್ರೀನ್ ಕಾರಿಡಾರ್ ಸಿದ್ಧ : ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಜೀವಂತ ಹೃದಯ ಸಾಗಣೆಗೆ ಬೆಂಗಳೂರು ಸಂಚಾರಿ ಪೊಲೀಸರ ನೆರವು ಕೇಳಿದ್ದಾರೆ. ಗ್ರೀನ್ ಕಾರಿಡಾರ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಯಿಂದ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಜೀವಂತ ಹೃದಯವನ್ನು ಆಂಬ್ಯುಲೆನ್ಸ್ ಮೂಲಕ ತೆಗೆದುಕೊಂಡು ಹೋಗಲಾಗುತ್ತದೆ.

ಕಣ್ಣು, ಕಿಡ್ನಿಯೂ ದಾನ : ಜೀವಂತ ಹೃದಯವನ್ನು ಹೈದರಾಬಾದ್‌ನ ಯಶೋಧಾ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಅಲ್ಲಿ 30 ವರ್ಷದ ಯುವಕನಿಗೆ ಹೃದಯವನ್ನು ಕಸಿ ಮಾಡಲಾಗುತ್ತದೆ. ಶಿವರಾಯ್ ಭಾಗಿ ಅವರ ಕಣ್ಣು, ಕಿಡ್ನಿಗಳನ್ನು ದಾನ ಮಾಡಲು ಪೋಷಕರು ಒಪ್ಪಿಗೆ ನೀಡಿದ್ದಾರೆ. [ಪಿಟಿಐ ಚಿತ್ರ]

ಮೂರು ಬಾರಿ ಸಾಗಣೆಯಾಗಿದೆ : ಬೆಂಗಳೂರಿನಿಂದ 2014ರಲ್ಲಿ ಎರಡು ಬಾರಿ ಚೆನ್ನೈಗೆ ಜೀವಂತ ಹೃದಯವನ್ನು ತೆಗೆದುಕೊಂಡು ಹೋಗಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. 2015ರ ಜನವರಿಯಲ್ಲಿ ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಬಿಜಿಎಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಯಶಸ್ವಿಯಾಗಿ ಕಸಿ ಮಾಡಲಾಗಿತ್ತು.

English summary
Bengaluru Victoria Hospital doctors to take live heart to Hyderabad for implantation. Heart implantation surgery will be held in Yashoda Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X