ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೆಜ್ ಅಥವಾ ನಾನ್ ವೆಜ್ , ನಿಮ್ಮ ಆಯ್ಕೆ ಯಾವುದು?

By Madhusoodhan
|
Google Oneindia Kannada News

ಬೆಂಗಳೂರು, ಜೂನ್ 11: ಆಧುನಿಕ ಸಮಾಜಕ್ಕೆ, ಆಹಾರ ಪದ್ಧತಿಗೆ ಒಗ್ಗಿಕೊಂಡವರಿಗೆ ಆಹಾರ ಪದ್ಧತಿ ಬಗ್ಗೆ ಎಷ್ಟು ಹೇಳಿದರೂ ಕಾಡಿಮೆಯೇ. ಉಪವಾಸ ಎಂಬ ಪದಕ್ಕೆ ಡಯೆಟ್ ಎಂಬ ಹಣೆಪಟ್ಟಿ ಹಚ್ಚಿಕೊಂಡು ಓಡಾಡುತ್ತಿದ್ದೇವೆ. ದೇಹದ ಸಮತೂಕ ಕಾಪಾಡಿಕೊಳ್ಳಲು ಹರಸಾಹಸ ಮಾಡುತ್ತಾ ಇದ್ದೇವೆ.

ಜನಗಣತಿ ವರದಿ ಹೇಳುವಂತೆ ಭಾರತದಲ್ಲಿ ಶೇ. 70 ರಷ್ಟು ಮಾಂಸಹಾರಿಗಳಿದ್ದರೆ ಶೇ. 15 ರಷ್ಟು ಮಾತ್ರ ಸಸ್ಯಹಾರಿಗಳಿದ್ದಾರೆ. ಸಸ್ಯಹಾರ ಉತ್ತಮವೋ ಅಥವಾ ಮಾಂಸಹಾರವೋ ಎಂಬ ಅಂಶಗಳನ್ನು ನಾವು ಲೆಕ್ಕ ಹಾಕಬೇಕಾಗುತ್ತದೆ.[ನಿಮ್ಮ ಮನೆಯಲ್ಲೂ ಸಿಹಿಕಹಿ ಚಂದ್ರು "ಬೊಂಬಾಟ್ ಭೋಜನ"!]

food

2014 ರ ಜನಗಣತಿ ದಾಖಲೆ ಹೇಳುವಂತೆ ತೆಲಂಗಾಣದಲ್ಲಿ ಅತಿ ಹೆಚ್ಚು ಮಾಂಸಹಾರಿಗಳಿದ್ದಾರೆ. ಶೇ. 98.8 ಪುರುಷರು ಮತ್ತು ಶೇ. 98.6 ರಷ್ಟು ಜನ ಮಹಿಳೆಯರು ಮಾಂಸಹಾರಿಗಳು. ಅತಿಹೆಚ್ಚು ಸಸ್ಯಹಾರಿಗಳಿರುವ ಜಿಲ್ಲೆ ರಾಜಸ್ಥಾನ, ರಾಜಸ್ಥಾನದಲ್ಲಿ ಶೇ. 73.2 ಪುರುಷರು ಮತ್ತು ಶೇ. 76.6 ರಷ್ಟು ಮಹಿಳೆಯರು ಸಸ್ಯಹಾರಿಗಳಾಗಿದ್ದಾರೆ.[ಅಪ್ಪೆಮಿಡಿ ಉಪ್ಪಿನಕಾಯಿ ಬೇಕಾ? ಭಟ್ಟರಿಗೆ ಫೋನ್ ಮಾಡಿ]

food

2014 ಮತ್ತು 2004 ರ ಜನಗಣತಿಗೆ ಹೋಲಿಕೆ ಮಾಡಿದರೆ ಮಾಂಸಹಾರಿಗಳ ಲೆಕ್ಕದಲ್ಲಿ ಶೇ. 5 ರಷ್ಟು ಇಳಿಕೆ ಕಂಡುಬಂದಿದೆ. ಆದರೆ ಮಾಂಸ ಮತ್ತು ಮೀನು ತಿನ್ನುವವಿಕೆ ಪ್ರಮಾಣ ಹೆಚ್ಚಾಗಿದೆ.

ಆದರೆ ಅಂಕಿ ಅಂಶಗಳು ಹೇಳುವಂತೆ ನಾನ್ ವೆಜಿಟೆರಿಯನ್ ಡಯಟ್ ಮಾಡುವುದಕ್ಕಿಂತ ವೆಜಿಟೆರಿಯಬ್ ಡಯಟ್ ಉತ್ತಮವಂತೆ. ಹೆಚ್ಚಿನ ಪೋಷಕಾಂಶಗಳು ಲಭ್ಯವಾಗುವುದು ಸಸ್ಯಹಾರದಲ್ಲಿಯೇ![ಕಳೆದ 59 ವರ್ಷಗಳಿಂದ ಇಲ್ಲಿ 'ಕಾಂಗ್ರೆಸ್' ನದ್ದೇ ಆಡಳಿತ!]

ಕರ್ನಾಟಕದ ಕತೆ ಏನು?
ಕರ್ನಾಟಕದಲ್ಲಿ ಶೇ. 20.9 ಸಸ್ಯಹಾರಿ ಪುರುಷರಿದ್ದರೆ ಶೇ. 21.3 ಸಸ್ಯಹಾರಿ ಮಹಿಳೆಯರಿದ್ದಾರೆ. ಶೇ. ಮಾಂಸಹಾರಿ ಪುರುಷರಿದ್ದರೆ 79.1 ಶೇ. 78.7 ಮಾಂಸಹಾರಿ ಮಹಿಳೆಯರಿದ್ದಾರೆ.

ಸಮತೋಲಿತ ಆಹಾರ ಎಂದರೇನು?
ಕೊಚ್ಚಿ ಮೂಲದ ಸಂಸ್ಥೆಯೊಂದು ಆಹಾರ ವ್ಯವಸ್ಥೆ ಬಗ್ಗೆ ನೀಡಿರುವ ವರದಿಯನ್ನು ಗಮನಿಸಲೇಬೇಕಾಗುತ್ತದೆ. ಶೇ. 55-60 ಕಾರ್ಬೋಹೈಡ್ರೇಟ್ (ಅನ್ನ, ಆಲೂಗಡ್ಡೆ), ಶೇ. 18-20 ರಷ್ಟು ಪ್ರೋಟಿನ್ ( ಬೇಳೆಕಾಳು, ತರಕಾರಿ, ಚಿಕನ್) ಮತ್ತು ಶೇ. 20-25 ರಷ್ಟು ಕೊಬ್ಬು (ಎಣ್ಣೆ, ತೆಂಗಿನ ಎಣ್ಣೆ) ಅಂಶಗಳನ್ನು ಸಮತೋಲಿತ ಆಹಾರ ಒಳಗೊಂಡಿರಬೇಕಾಗುತ್ತದೆ.

food

ಆದರೆ ಬೆಂಗಳೂರಿನ ವೈದ್ಯೆಯೊಬ್ಬರು ಹೇಳುವಂತೆ ಸಸ್ಯಹಾರ ಮತ್ತು ಮಾಂಸಾಹಾರ ಎಂಬ ಚರ್ಚೆಯೇ ಅನಗತ್ಯ. ಸಸ್ಯಹಾರ ಆರೋಗ್ಯಕರ ಎಂಬುದೇ ದೃಢವಾಗಿದ್ದರೆ ಬ್ರಾಹ್ಮಣರಿಗೆ ರೋಗವೇ ತಗುಲಬಾರದಿತ್ತು ಎಂಬ ವಾದವನ್ನು ಮುಂದೆ ಇಡುತ್ತಾರೆ.

ಒಟ್ಟಿನಲ್ಲಿ ಆಹಾರದಲ್ಲಿ ಕೆಟ್ಟದ್ದು ಒಳ್ಳೆಯದು ಎಂಬುದು ಇಲ್ಲ. ಆಹಾರದ ಬಗ್ಗೆ ಇರುವ ಕೆಲವು ಅಸಮರ್ಪಕ ಮಾಹಿತಿಗಳು ನಮ್ಮನ್ನು ದಾರಿ ತಪ್ಪಿಸುತ್ತವೆ. ಮಾಂಸಾಹಾರ ಇರಲಿ ಸಸ್ಯಾಹಾರ ಇರಲಿ ಸಕಲ ಪೋಷಕಾಂಶಗಳನ್ನು ಹೊಂದಿರಬೇಕಾದದ್ದು ಮುಖ್ಯ.

English summary
Census data showing that the majority of Indian people are non-vegetarian has once more kicked off a debate about which is better, vegetarian diet or a non-vegetarian one. The answers to that question, interviews with nutritionists suggest, are not quite simple. Over 70% of Indians over the age of 15 years are non-vegetarian, data released by the Office of Registrar General & Census Commissioner shows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X