ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ATM ಧನವಾಹನ ಪತ್ತೆ, ಆದ್ರೆ 92 ಲಕ್ಷ ನಾಪತ್ತೆ

By Ananthanag
|
Google Oneindia Kannada News

ಬೆಂಗಳೂರು, ನವೆಂಬರ್ 24: ಮೌಂಟ್ ಕಾರ್ಮೆಲ್ ಕಾಲೇಜು ಬಳಿ ಗುರುವಾರ ಬೆಳಗ್ಗೆ ಗನ್ ಹಾಗೂ ನಲವತ್ತೈದು ಲಕ್ಷ ರುಪಾಯಿ ಪತ್ತೆಯಾಗಿದೆ. ಇದು ಬುಧವಾರ ಚಿಕ್ಕಪೇಟೆ ಬಳಿಯಿಂದ ಅಪಹರಿಸಿದ್ದ ವಾಹನ ಎಂದು ತಿಳಿದುಬಂದಿದೆ. ಚಿಕ್ಕಪೇಟೆಯಿಂದ 1.37 ಕೋಟಿ ರುಪಾಯಿಯಿದ್ದ ವಾಹನವನ್ನು ವ್ಯಕ್ತಿ ಅಪಹರಿಸಿದ್ದ.

92 ಲಕ್ಷ ರುಪಾಯಿಯೊಂದಿಗೆ ತನ್ನ ಪತ್ನಿ-ಮಗುವಿನ ಜೊತೆಗೆ ಆತ ನಾಪತ್ತೆಯಾಗಿದ್ದಾನೆ. ಇತ್ತೀಚೆಗಷ್ಟೇ ಆತ ಕೆಲಸಕ್ಕೆ ಸೇರಿದ್ದ. ಆತನ ಪತ್ನಿ ದುಬೈನಲ್ಲಿ ಕೆಲಸ ಮಾಡುತ್ತಿದ್ದವರು ಕೆಲ ದಿನದ ಹಿಂದಷ್ಟೇ ಹಿಂತಿರುಗಿದ್ದರು ಎಂಬ ಮಾಹಿತಿ ಇದೆ. ತಮಿಳುನಾಡು ಮೂಲದ ಅತನ ಬಗ್ಗೆ ಹೆಚ್ಚಿನ ವಿವರಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಈ ರೀತಿ ಕೃತ್ಯ ಎಸಗಲು ಪೂರ್ಣ ಪ್ರಮಾಣದಲ್ಲಿ ಯೋಜನೆ ರೂಪಿಸಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿದೆ.[ಬೆಂಗಳೂರಿನಲ್ಲಿ 1.37 ಕೋಟಿ ಹಣದೊಂದಿಗೆ ಚಾಲಕ ಪರಾರಿ]

cash

ಘಟನೆ ಹಿನ್ನೆಲೆ:
ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ವಾಹನದಲ್ಲಿ 2 ಸಾವಿರ ಹಾಗೂ 100ರೂ. ಮುಖಬೆಲೆಯ 1 ಕೋಟಿ 37 ಲಕ್ಷ ರು. ಹಣವಿತ್ತು. ವಾಹನದಲ್ಲಿರುವ ಸಿಬ್ಬಂದಿಯು ವಿವಿಧ ಬ್ಯಾಂಕ್ ಗಳಿಂದ ಹಣ ಪಡೆದುಕೊಳ್ಳುತ್ತಿದ್ದರು[ತಲೆಮರೆಸಿಕೊಂಡಿರುವ ಡೊಮಿನಿಕ್ ಬಂಧನಕ್ಕೆ ಪೊಲೀಸ್ ಬಲೆ]

ಈ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ರೂ.2 ಕೋಟಿ ಹಣ ಪಡೆದುಕೊಂಡಿದ್ದರು. ನಂತರ ಕೋಟಕ್ ಮಹೀಂದ್ರ ಬ್ಯಾಂಕ್ ನಿಂದ ರು. 7 ಲಕ್ಷ ಹಣವನ್ನು ವಾಹನಕ್ಕೆ ತುಂಬಿಸಿಲಾಗಿತ್ತು. ಕೆ.ಜಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದಿಂದ ಹಣ ಪಡೆದುಕೊಳ್ಳಲು ವಾಹನ ನಿಲ್ಲಿಸಲಾಗಿತ್ತು. ಸೆಕ್ಯುರಿಟಿ ಗಾರ್ಡ್ ಮೂತ್ರ ವಿಸರ್ಜಜನೆಗೆ ಹೋಗಿದ್ದ ವೇಳೆ ಚಾಲಕ ಹಣ ಎಗರಿಸಿ ವಾಹನದೊಂದಿಗೆ ಪರಾರಿಯಾಗಿದ್ದ.

English summary
Van carrying Rs 1 crore 37 lakhs which driver of Secure Transit company, fled away yesterday, found abandoned in Vasanth Nagar, Bengaluru on 24th November. Rs 45 lakh and gun has been recovered by Bengaluru police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X