ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೌಡಿಶೀಟರ್ ನಾಗ ಮತ್ತು ಆತನ ಪುತ್ರರಿಗೆ ಮತ್ತಷ್ಟು ದಿನ ಜೈಲೇ ಗತಿ

ಪೊಲೀಸರು ಬಂಧಿತರನ್ನು ಇನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದೆ. ಇದಕ್ಕಾಗಿ ಅವರನ್ನು ತಮಿಳುನಾಡಿಗೆ ಕರೆದೊಯ್ಯಬೇಕು. ಹೀಗಾಗಿ ಇನ್ನೂ ಒಂದಷ್ಟು ದಿನ ಕಸ್ಟಡಿ ಅವಧಿ ವಿಸ್ತರಿಸಬೇಕು ಎಂದು ಕೋರಿಕೊಂಡರು.

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 23: ರೌಡಿಶೀಟರ್ ವಿ.ನಾಗರಾಜ್‌ ಅಲಿಯಾಸ್ ನಾಗ ಹಾಗೂ ಆತನ ಇಬ್ಬರು ಮಕ್ಕಳು ಇನ್ನೂ ಒಂದಷ್ಟು ದಿನ ಜೈಲಿನಲ್ಲೇ ಕಳೆಯಬೇಕಾಗಿ ಬಂದಿದೆ. ನಾಗ ಮತ್ತು ಆತನ ಮಕ್ಕಳಾದ ಗಾಂಧಿ ಹಾಗೂ ಶಾಸ್ತ್ರಿಯ ಪೊಲೀಸ್‌ ಕಸ್ಟಡಿ ಅವಧಿಯನ್ನು ಮೇ 25ರವರೆಗೆ ವಿಸ್ತರಿಸಿ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ.

ಈ ಹಿಂದೆ ನಾಗಾ ಬಂಧಿತನಾದಾಗ 10 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಆದರೆ ಇಂದು ನಾಗನ ಕಸ್ಟಡಿ ಅವಧಿ ಪೂರ್ಣಗೊಂಡಿದ್ದರಿಂದ ಆತನನ್ನು ಹೆಣ್ಣೂರು ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

V Nagaraj and his two sons police custody extended till May 25

ಈ ವೇಳೆ ಪೊಲೀಸರು ಬಂಧಿತರನ್ನು ಇನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದೆ. ಇದಕ್ಕಾಗಿ ಅವರನ್ನು ತಮಿಳುನಾಡಿಗೆ ಕರೆದೊಯ್ಯಬೇಕು. ಹೀಗಾಗಿ ಇನ್ನೂ ಒಂದಷ್ಟು ದಿನ ಕಸ್ಟಡಿ ಅವಧಿ ವಿಸ್ತರಿಸಬೇಕು ಎಂದು ಕೋರಿಕೊಂಡರು.

ಪೊಲೀಸರ ಬೇಡಿಕೆ ಮೇರೆಗೆ 11ನೇ ಎಸಿಎಂಎಂ ನ್ಯಾಯಾಲಯ ನಾಗಾ ಬಂಧನದ ಅವಧಿಯನ್ನು ಮೇ 25ರ ವರೆಗೆ ಮುಂದೂಡಿದೆ.
ಇನ್ನು ವಿಚಾರಣೆಗೆ ಕರೆತಂದಿದ್ದ ವೇಳೆ ನಾಗಾ ಕೋರ್ಟಿನಿಂದ ಹೊರಗೆ ಬರುವಾಗ ಮಾಧ್ಯಮಗಳನ್ನು ಕಂಡು ಕಣ್ಣೀರಿಟ್ಟಿ ಪ್ರಸಂಗವೂ ನಡೆಯಿತು.

English summary
The 11th Additional Chief Magistrate Court on Monday extended former Bengaluru corporator V Nagaraj and his two sons, Gandhi and Shastri’s police custody till May 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X