ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂಗ್ಲೀಷ್ ಬರೆಯುವುದನ್ನು ನಿಲ್ಲಿಸಲು ಇಲ್ಲಿದೆ ಉಪಾಯ

By ಓಂಶಿವಪ್ರಕಾಶ್, ಬೆಂಗಳೂರು
|
Google Oneindia Kannada News

ಸಾಮಾಜಿಕ ಜಾಲತಾಣಗಳಲ್ಲಿ, ಎಸ್.ಎಮ್.ಎಸ್, ಇ-ಮೇಲ್ ‌ಗಳಲ್ಲಿ ಬರೆಯುವ ಕಂಗ್ಲೀಷ್ (kanglish) ಓದಲು ಹಿಂಸೆಯಾದಾಗ ಅದೆಷ್ಟೇ ಒಳ್ಳೆಯ ಮಾಹಿತಿ ಇದ್ದರೂ, ಅದನ್ನು ಓದದೆ ಮುಂದುವರೆಯುವುದು ನನ್ನ ಅಭ್ಯಾಸ.

ಆದರೆ ಇದರಿಂದ ಭಾಷೆಗೆ ಇಂಟರ್‌ನೆಟ್‌ನಲ್ಲಿ ದೊರಕಬೇಕಾದ ಜಾಗವನ್ನೂ ಕಂಗ್ಲೀಷ್ ಬರೆಯುವ ಅನೇಕರು ಕಸಿಯುತ್ತಿರುವುದನ್ನು ಕಂಡಾಗ, ಮತ್ತೆ ಮತ್ತೆ ಕನ್ನಡ ಟೈಪಿಸುವುದು ಹೇಗೆ ಎಂದು ಹೇಳುವುದನ್ನು ಆಗ್ಗಾಗೆ ಮಾಡಿದರೂ, ಅದನ್ನು ಇನ್ನೊಮ್ಮೆ ಬ್ಲಾಗಿಸಲೇ ಬೇಕಿರುವ ಅಗತ್ಯತೆ ಹೆಚ್ಚುತ್ತಿದೆ. ಕನ್ನಡದ ಪದಗಳನ್ನು ಯುನಿಕೋಡ್‌ನಲ್ಲಿ ಗೂಗಲ್, ಬಿಂಗ್, ಯಾಹೂ ನಂತಹ ಸರ್ಚ್ ಎಂಜಿನ್‌ಗಳು ನೋಡಲು ಸಾಧ್ಯವಾಗದೆ ಇದ್ದಾಗ, ಈ ಕಂಪೆನಿಗಳು ಆಯಾ ಭಾಷೆಗೆ ಬೇಕಿರುವ ಸೌಲಭ್ಯಗಳನ್ನು ತಮ್ಮ ವೆಬ್‌ಸೈಟ್‌ನಿಂದ ಒದಗಿಸಲು ಮುಂದೆ ಬರುವುದಿಲ್ಲ.

ಕನ್ನಡದ ಬಳಕೆ ಇಂಟರ್ನೆಟ್ ನಲ್ಲಿ ಹೆಚ್ಚಾಗಲು ನಾವು ಅದನ್ನು ಇಂಗ್ಲೀಷ್‌ನಲ್ಲೇ ಟೈಪಿಸಿದರೆ ಸಾಲದು, ಜೊತೆಗೆ ಎಲ್ಲರು ನೋಡಲು ಇಚ್ಚೆ ಪಡುವ, ನೋಡಲು ಸಾಧ್ಯವಾಗಿಸುವ ಯುನಿಕೋಡ್‌ನಲ್ಲೇ ಟೈಪಿಸಬೇಕು. ಬರಹ, ನುಡಿ ಇತ್ಯಾದಿಗಳ ತಂತ್ರಾಂಶಗಳು ಲಭ್ಯವಿಲ್ಲದ ಪಕ್ಷದಲ್ಲಿ ಗೂಗಲ್ ಕ್ರೋಮ್‌ನ ವಿಕಿಮೀಡಿಯ ಇನ್ಪುಟ್ ‌ಟೂಲ್ಸ್ ಎನ್ನುವ ಈ ಕೆಳಗಿನ ಚಿತ್ರದಲ್ಲಿರುವ ಎಕ್ಸ್‌ಟೆನ್ಷನ್ ಬಳಸಿ ಕನ್ನಡ ಅಥವಾ ಇನ್ಯಾವುದೇ ಭಾಷೆಗಳನ್ನು ಟೈಪಿಸಲು ಸಾಧ್ಯವಿದೆ.

ಮೋಝಿಲ್ಲಾ ಫೈರ್ ಫಾಕ್ಸ್ ನಲ್ಲಿ ಟೂಲ್ ಸ್ಥಾಪಿಸಲು ಮೆನು>>ಟೂಲ್>>add ons ಗೆ ಹೋಗಿ ಸರ್ಚ್ ಬಾಕ್ಸ್ ನಲ್ಲಿ Wikimedia Input Tools ಎಂದು ಟೈಪಿಸಿ install ಮಾಡಿಕೊಳ್ಳಿ

Use Simple Method to avoid Kanglish Writing
ಈ ಎಕ್ಸ್‌ಟೆನ್ಷನ್ ವಿಕಿಪೀಡಿಯವನ್ನು ನೆಡೆಸುತ್ತಿರುವ ವಿಕಿಮೀಡಿಯ ಫೌಂಡೇಷನ್‌ನ ಲ್ಯಾಂಗ್ವೇಜ್ ಎಂಜಿನಿಯರಿಂಗ್ ಟೀಮ್ ಅಭಿವೃದ್ದಿ ಪಡಿಸಿರುವ jquery-ime ಬಳಸಿ ಅಭಿವೃದ್ದಿ ಪಡಿಸಲಾಗಿದೆ.

ಕನ್ನಡದಲ್ಲಿ ಕಗಪ, ಇನ್ಸ್‌ಸ್ಕ್ರಿಪ್ಟ್ , ಟ್ರಾನ್ಸ್‌ಲಿಟರೇಷನ್ (ಲಿಪ್ಯಂತರಣ) ಆಯ್ಕೆಗಳ ಕೀಬೋರ್ಡ್‌ ಬಳಸಿ ಸುಲಭವಾಗಿ ಎಲ್ಲಿ ಬೇಕೆಂದರಲ್ಲಿ ಕನ್ನಡ ಟೈಪಿಸಬಹುದು. ಎಕ್ಸ್‌ಟೆನ್ಷನ್ ಅನ್ನು ಇನ್ಸ್ಟಾಲ್ ಮಾಡಿಕೊಂಡ ನಂತರ CTRL + M ಬಳಸಿ ಇದರಲ್ಲಿನ ಇತರೆ ಕೀಬೋರ್ಡ್ ಆಯ್ಕೆಗಳನ್ನು ಬಳಸಿಕೊಳ್ಳಬಹುದು. ಇಂಗ್ಲೀಷ್ ಟೈಪಿಸಲು CTRL + M ಬಳಸಿ ಮತ್ತೆ ನಿಮ್ಮ ಸಿಸ್ಟಂ‌ನ ಮೂಲ/ನಿರ್ದಿಷ್ಟ ಕೀಬೋರ್ಡ್‌ಗೆ ಮರಳಬಹುದು. ಕೆಳಗಿನ ಚಿತ್ರದಲ್ಲಿ ಇದರ ಬಳಕೆಯನ್ನು ಕಾಣಬಹುದು.

ಇದರಲ್ಲಿನ jquery-ime ಅನ್ನೇ ವಿಕಿಪೀಡಿಯದಲ್ಲಿ ನೇರವಾಗಿ ಕನ್ನಡದಲ್ಲಿ ಟೈಪಿಸುವಂತೆ ಮಾಡಲಾಗಿದೆ. ನಮ್ಮ ವಚನ ಸಂಚಯದ ಹುಡುಕುವಿನಲ್ಲೂ ನಿಮಗೆ ಸಿಗುವುದು ಇದೇ. ಬರಹ.ಕಾಮ್ ನ ನಿಘಂಟುವಿನ ಹುಡುಕುವಿನಲ್ಲೂ ಇದನ್ನು ಇತ್ತೀಚೆಗೆ ಬಳಸುತ್ತಿರುವುದನ್ನು ನೀವು ಕಾಣಬಹುದು.[ಕನ್ನಡದ ಸ್ಪೆಲ್ ಚೆಕ್ಕರ್ ಹಾಕ್ಕೊಳ್ಳಿ]

ಆಂಡ್ರಾಯ್ಡ್‌ ಮೊಬೈಲ್‌ನಲ್ಲಿ ಕನ್ನಡ ಬಳಸಲು ಇರುವ ಅನೇಕ ವ್ಯವಸ್ಥೆಗಳನ್ನು ಈಗಾಗಲೇ ಇಲ್ಲಿ ಬರೆದಿದ್ದೇನೆ. ವಾರಾಂತ್ಯದಲ್ಲಿ ನಾನು ಮತ್ತು ಎನಿಸಾಫ್ಟ್ ಕನ್ನಡ ಕೀಬೋರ್ಡ್ ಮತ್ತು ಜಸ್ಟ್ ಕನ್ನಡ ಕೀಬೋರ್ಡ್ ಸೃಷ್ಟಿಸಿದ ಶ್ರೀಧರ್ ಆರ್.ಎನ್ ಸೇರಿ ಗೂಗಲ್ ಇಂಡಿಕ್ ಹ್ಯಾಕಥಾನ್‌ನಲ್ಲಿ ಅಭಿವೃದ್ದಿ ಪಡಿಸಿದ ಮತ್ತೊಂದು ಆಂಡ್ರಾಯ್ಡ್ ಕೀಬೋರ್ಡ್ ಬಗ್ಗೆ ಸಧ್ಯದಲ್ಲೇ ಇಲ್ಲಿ ಮತ್ತೆ ಬರೆಯಲಿದ್ದೇನೆ.

English summary
WikiMedia providing a input tool to avoid using Kanglish kind of words while writing on social networking sites, SMS, e Mails. WikiMedia foundation language engineering team has developed this tool which enables you to type easily writes Om Shivaprakash
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X