ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರು 500 ನೋಟುಗಳ ಚಲಾವಣೆಗೆ ಡಿ.15 ಕಡೇ ದಿನ

ದೇಶದಲ್ಲಿ ಹರಿದಾಡುತ್ತಿದ್ದ ಹಳೇ ರು 500 ನೋಟುಗಳ ಕೊನೆ ಚಲಾವಣೆಗೆ ಡಿಸೆಂಬರ್ 15ರ ಮಧ್ಯರಾತ್ರಿವರೆಗೆ ಅವಕಾಶ.

By Ananthanag
|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ದೇಶಾದ್ಯಂತ ಡಿಸೆಂಬರ್ 15 ಮಧ್ಯರಾತ್ರಿ ವರೆಗೆ ಮಾತ್ರ ಹಳೇಯ ನೋಟುಗಳನ್ನು ಬಳಸಲು ಅವಕಾಶವಿದ್ದು, ಅವಧಿ ವಿಸ್ತರಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ.

ಡಿಸೆಂಬರ್ ಮೊದಲ ವಾರದಲ್ಲಿ ಸಾರ್ವಜನಿಕವಾಗಿ ರು 1000, 500 ನೋಟುಗಳನ್ನು ಬಳಸದಿರುವಂತೆ ಸರ್ಕಾರ ನಿರ್ಬಂಧ ಹೇರಿತ್ತು. ಬಿಲ್ ಪಾವತಿ, ಔಷಧಿ ಖರೀದಿ, ಬಸ್ ಪಾಸ್, ಮೊಬೈಲ್ ರೀಚಾರ್ಜ್ ಮುಂತಾದವುಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಡಿಸೆಂಬರ್ 16ರಿಂದ ಆ ಅವಕಾಶಗಳೂ ಇಲ್ಲವಾಗಲಿವೆ. ಬ್ಯಾಂಕುಗಳಲ್ಲಿ ಮಾತ್ರ ನಗದನ್ನು ಖಾತೆಗೆ ಜಮೆ ಮಾಡಬಹುದಾಗಿದೆ.[ನಗದು ಬದಲು ಕಾರ್ಡ್ ಬಳಸುವವರಿಗೆ ಭರ್ಜರಿ ರಿಯಾಯಿತಿ]

500 notes

ಆರ್ ಬಿಐನಲ್ಲಿ ಮುದ್ರಣವಾದ ನಗದು ಜನಮಾನಸದಲ್ಲಿ ಸರಿಯಾಗಿ ಸಂಚಾರ ಮಾಡಲು ಇನ್ನು ಹಲವು ತಿಂಗಳುಗಳೇ ಬೇಕಾಗುತ್ತದೆ ಎಂದು ಸಮೀಕ್ಷೆಗಳು ತಿಳಿಸುತ್ತಿವೆ. ಆರ್ ಬಿಐನಿಂದ ಪ್ರತಿದಿನ ಬಿಡುಗಡೆಯಾಗುವ ಹಣ ಜನರ ಬಳಿ ಹೋಗಿ ನಿಲ್ಲುತ್ತಿದೆ ಹೊರತು ಅದು ಸರಿಯಾಗಿ ಸಂಚಾರವಾಗುತ್ತಿಲ್ಲ ಹಾಗು ನೋಟು ರಹಿತ ಹಣದ ಹರಿವಿನಲ್ಲಿ ದೇಶ ತಾಂತ್ರಿಕತೆಯನ್ನು ಒಗ್ಗಿಸಿಕೊಂಡಿಲ್ಲ ಎಂದು ಅರ್ಥ ಶಾಸ್ತ್ರಜ್ಞರು ದೂರುತ್ತಿದ್ದಾರೆ.[ಡಿ.10ರಿಂದ ಬಸ್, ರೈಲು ಟಿಕೆಟ್ ಖರೀದಿಗೂ ಹಳೆ 500, 1000 ನಡೆಯಲ್ಲ!]

500 notes

ಮತ್ತೊಂದೆಡೆ ಅಪನಗದೀಕರಣದಿಂದಾಗಿ ದೇಶದಲ್ಲಿ ಕಪ್ಪು ಹಣ ಹೊಂದಿರುವವರು ಸಿಕ್ಕಿ ಬೀಳುತ್ತಿದ್ದಾರೆ. ಕೋಟ್ಯಂತರ ರುಪಾಯಿ ದೋಚಿದವರಿಗೆ ಭಯಕಾಡುತ್ತಿದೆ. ಹೊಸ 2000 ನೋಟಿನಲ್ಲಿ ಚಿಪ್ ಇದೆಯಾ ಎಂಬ ಅನುಮಾನದಿಂದ ಹಿಡಿದು ನಾಳೆ ಯಾವ ಬ್ಯಾಂಕಿನ ಮುಂದೆ ನಿಂತು ಹಣವನ್ನು ಪಡೆಯಬಹುದು ಎನ್ನುವವರೆಗೂ ಯೋಚನೆಗಳು ಶ್ರೀಸಾಮಾನ್ಯರಲ್ಲಿದೆ. ಕೆಲವರು ಪ್ರಧಾನಿಯನ್ನು ಹೊಗಳುತ್ತಿದ್ದಾರೆ. ಹಣ ಸಮಯಕ್ಕೆ ಸರಿಯಾಗಿ ಸಿಗದವರು ತೆಗಳುತ್ತಿದ್ದಾರೆ.

ಒಟ್ಟಿನಲ್ಲಿ ದೇಶದಲ್ಲಿ ಬದಲಾವಣೆ ಎನ್ನುವುದು ವಿವಿಧ ರೂಪವನ್ನು ಪಡೆದುಕೊಂಡಿದೆ ಅದರೊಂದಿಗೆ ಡಿಸೆಂಬರ್ 15 ರ ಮಧ್ಯರಾತ್ರಿಯ ವರೆಗೂ ಹಳೇನೋಟುಗಳ ವ್ಯವಹಾರವನ್ನು ಮಾಡಲು ಕಡೇ ಅವಕಾಶ ಎಲ್ಲರ ಮುಂದಿದೆ.

English summary
Exemptions for use of old Rs.500 notes will end on 15 December midnight in all india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X