ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ರಾಜ್ಯಪಾಲರಿಗೆ ರಾಜ್ಯದ ಸಂಸ್ಕೃತಿ ಅರಿವಿಲ್ಲ'

By Mahesh
|
Google Oneindia Kannada News

ಬೆಂಗಳೂರು, ಫೆ.4: ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಜ್ಞಾನಪೀಠ ಪುರಸ್ಕೃತ ಯು.ಆರ್.ಅನಂತಮೂರ್ತಿ ಅವರನ್ನು ನಿಂದಿಸಿದ ಕ್ರಮವನ್ನು ವಿರೋಧಿಸಿ ಸಾಹಿತಿಗಳು, ಕಲಾವಿದರು, ರಂಗಕರ್ಮಿಗಳು, ಚಳವಳಿಗಾರರು ಪುರಭವನದ ಮುಂದೆ ಸೋಮವಾರ ಧರಣಿ ನಡೆಸಿ, ರಾಜ್ಯಪಾಲರ ಕ್ಷಮೆ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಪಾಲರಿಗೆ ರಾಜ್ಯದ ಸಂಸ್ಕೃತಿಯ ಅರಿವಿಲ್ಲ ಎಂದು ಯುಆರ್ ಅನಂತಮೂರ್ತಿ ಅವರು ತಿರುಗೇಟು ನೀಡಿದ್ದಾರೆ.

'ನಾನು ಭ್ರಷ್ಟಾಚಾರದ ವಿರುದ್ಧ ಮಾತನಾಡಿದ್ದೇನೆ. ವಿಶ್ವದ ಯಾವುದೇ ವಿಶ್ವವಿದ್ಯಾಲಯದಲ್ಲಿ ಗೋಮತಿ ದೇವಿ ಅವರು ಆಯ್ಕೆಯಾಗುತ್ತಿರಲಿಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿರುವ ಆಕೆ ಚಿತ್ರದುರ್ಗದವರು ಆಕೆ ಉಪ ಕುಲಪತಿ ಸ್ಥಾನಕ್ಕೆ ಅರ್ಹ ವ್ಯಕ್ತಿ. ಪರ ದನಿ ಎತ್ತಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರೆತಿರುವುದು ವಿಷಾದನೀಯ. ಮಾಜಿ ಪ್ರಧಾನಿ ದೇವೇಗೌಡ ಅವರು ಕೂಡಾ ಈ ವಿಷಯದ ಮಾತನಾಡಿಲ್ಲ.

ಸೋಮವಾರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಹಿರಿಯ ವಿಮರ್ಶಕಿ ಹಾಗೂ ಲೇಖಕಿ ಡಾ.ವಿಜಯಾ ಮಾತನಾಡಿ, ನಾಡಿನ ಸಾಕ್ಷಿ ಪ್ರಜ್ಞೆಯಾದ ಅನಂತಮೂರ್ತಿಯವರನ್ನು ನಿಂದಿಸುವ ಮೂಲಕ ಘನತೆವೆತ್ತ ರಾಜ್ಯಪಾಲರು ತಮ್ಮ ಘನತೆಗೆ ಕುಂದು ತಂದುಕೊಂಡಿದ್ದಾರೆ. ಅನಂತಮೂರ್ತಿ ದಲಿತ ಮಹಿಳೆಯೊಬ್ಬರನ್ನು ವಿಶ್ವವಿದ್ಯಾಲಯದ ಉಪಕುಲಪತಿಯನ್ನಾಗಿ ನೇಮಿಸಿದ್ದರೆ ಉಚಿತ ವಾಗಿತ್ತು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ. ಅಷ್ಟಕ್ಕೆ ರಾಜ್ಯಪಾಲರು ತಮ್ಮ ಎಲ್ಲೆ ಮೀರಿ ನಡೆದುಕೊಂಡು ಸಂವಿಧಾನವನ್ನು ಕಾಪಾಡಬೇಕಾದವರೆ ಉಲ್ಲಂಘಿಸುವಂತೆ ಮಾತ ನಾಡಿರುವುದು ಸಲ್ಲದು ಎಂದರು.

ಚಿಂತಕ ಹಾಗೂ ವಿಮರ್ಶಕ ಡಾ.ಮರುಳಸಿದ್ದಪ್ಪ ಮಾತನಾಡಿ, ರಾಜ್ಯಪಾಲರು ರಾಷ್ಟ್ರದ ಸಾಕ್ಷಿ ಪ್ರಜ್ಞೆಯಾದ ಪ್ರೊ.ಅನಂತಮೂರ್ತಿಯವರನ್ನು ನಿಂದನೆ, ಲೇವಡಿ ಮಾಡುವ ಮಾತನಾಡಿರುವುದು ರಾಜ್ಯದ ಜನತೆಗೆ ಕೋಪಕ್ಕಿಂತ ದುಃಖವನ್ನು ಉಂಟುಮಾಡಿದೆ. ಅವರ ನಡವಳಿಕೆ ರಾಜ್ಯದ ಜನತೆಗೆ ಮಾಡಿರುವ ಅವಮಾನ. ಕೂಡಲೆ ಅವರು ಪ್ರೊ.ಅನಂತಮೂರ್ತಿಯವರನ್ನು ಬೇಷರತ್ ಕ್ಷಮೆಯಾಚಿಸಿ ತಮ್ಮ ಘನತೆಯನ್ನು ಹೆಚ್ಚಿಸಿ ಕೊಳ್ಳಬೇಕು ಎಂದು ಆಗ್ರಹಿಸಿದರು.

UR Ananthamurthy slams governor

ರಾಜ್ಯಪಾಲರು ರಾಜ್ಯವೊಂದರ ಪ್ರಥಮ ಪ್ರಜೆ, ಅವರಿಗೆ ಆಯ್ಕೆ ಸಮಿತಿ ನೀಡಿದ ಹೆಸರನ್ನು ಒಪ್ಪಿಕೊಳ್ಳದಿರುವ ಕಾನೂನಿನ ಹಕ್ಕು ಇದೆ. ಆದರೆ ಪ್ರೊ.ಯು.ಆರ್. ದಲಿತ ಮಹಿಳೆಯೊಬ್ಬರಿಗೆ ಅವಕಾಶ ಸಿಗಬೇಕಾಗಿತ್ತು ಎಂದು ಮಾನವೀಯತೆ ವ್ಯಕ್ತಪಡಿಸಿರುವುದು ಇನ್ನೂ ಹೆಚ್ಚು ಔಚಿತ್ಯಪೂರ್ಣ ವಾಗಿದೆ. ಆದರೆ ಇದಕ್ಕೆ ಸಕಾರಾತ್ಮಕ ಟೀಕೆ ಮಾಡ ಬೇಕಾಗಿದ್ದ ರಾಜ್ಯಪಾಲರು ಒಬ್ಬ ವ್ಯಕ್ತಿಯ ದೇಹ ರಚನೆಯ ಕುರಿತು ಲೇವಡಿ ಮಾಡಿ ನಿಂದಿಸಿ ರುವುದು ನಮಗೆ ತುಂಬಾ ನೋವು ಉಂಟು ಮಾಡಿದೆ. ಕೂಡಲೆ ಅವರು ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.

ಸಂಸ್ಕೃತಿ ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ರಾಜ್ಯಪಾಲರು ತಮ್ಮ ಘನತೆಯನ್ನು ಮೀರಿ ಯು.ಆರ್.ರನ್ನು ಕ್ಷುಲ್ಲಕವಾಗಿ ನಿಂದನೆ ಮಾಡಿದ್ದಾರೆ. ಸಂವಿಧಾನ ವ್ಯಾಪ್ತಿಯೊಳಗೆ ಅವರಿಗೆ ಇರುವ ಪರಮಾಧಿಕಾರವನ್ನು ಚಲಾಯಿಸಲು ಯಾರ ಅಭ್ಯಂತರವೂ ಇಲ್ಲ. ಆದರೆ ಅದಕ್ಕೆ ಹೊರತಾಗಿ ಅಮಾನವೀಯವಾಗಿ ನಿಂದನೆ ಮಾಡಿರುವುದು ಸರಿಯಲ್ಲ ಎಂದರು.

ತುಮಕೂರು ವಿವಿ ಕುಲಪತಿ ತಮ್ಮ ಆಪ್ತರಿಗೆ ಕೇವಲ 8 ತಿಂಗಳಲ್ಲಿ ಪಿಎಚ್ ‌ಡಿ ನೀಡಿದ್ದರೂ ರಾಜ್ಯಪಾಲರು ಕಣ್ಣು ಮುಚ್ಚಿ ಕೂತಿದ್ದಾರೆ, ಯಾಕೆ ಅವರು ಇಲ್ಲಿಯವರೆಗೂ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಅವರು, ಹೀಗಾದರೆ ಮುಂದೆ ಅವರು ಶಿಕ್ಷಣದ ಗುಣಮಟ್ಟದ ಕುರಿತು ಮಾತನಾಡಲು ಸಾಧ್ಯವಿಲ್ಲ. ನಾಡಿನ ಜನತೆಗೆ ರಾಜ್ಯಪಾಲರ ಕುರಿತು ಇರುವ ಗೌರವಕ್ಕೆ ಕುಂದುಂಟು ತಂದುಕೊಳ್ಳದೆ ಕ್ಷಮೆ ಕೇಳಿ ಗೌರವವನ್ನು ಹೆಚ್ಚಿಸುವ ಕೆಲಸವನ್ನು ಮಾಡಲಿ ಎಂದರು.

English summary
UR Ananthamurthy slams governor a group of writers, theatre artistes, musicians and Kannada activists staged a protest against Bhardwaj. Protesters, including writers K Marulasiddappa, SG Siddaramaiah and GK Govindarao, sought the governor's apology. Their placards read: 'Mr Bhardwaj, mind your tongue'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X