ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ಸಾಧನೆಗೆ ಅಂಬೇಡ್ಕರ್ ಅವರೇ ಪ್ರೇರಣೆ : ಟೀನಾ ದಾಬಿ

By Mahesh
|
Google Oneindia Kannada News

ಬೆಂಗಳೂರು, ಜುಲೈ 24: ರಾಜಾಜಿನಗರದಲ್ಲಿರುವ ಸಿದ್ದಾರ್ಥ ಎಜುಕೇಷನಲ್ ಅಂಡ್ ಕಲ್ಚರಲ್ ಡೆವಲಪ್ಮೆಂಟ್ ಅಸೋಸಿಯೇಷನ್ ಐ.ಎ.ಎಸ್ ಟಾಪರ್ ಟೀನಾ ದಾಬಿ ಅವರಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ದಲಿತ ಮಹಿಳೆಯರು ಉನ್ನತ ಸ್ಥಾನಕ್ಕೇರಿದಾಗ ಅನುಭವಿಸುವ ಕಷ್ಟಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು.

ಸರಕಾರದಲ್ಲಿ ಮಹಿಳೆಯಾಗಿ ಅದರಲ್ಲೂ ದಲಿತ ಮಹಿಳೆಯಾಗಿ ತಾರತಮ್ಯ ತೊಂದರೆ ನೀಡುವುದೇ ಹೆಚ್ಚು. ಈ ಅನುಭವ ನನಗೆ ಸಾಕಷ್ಟು ಬಾರಿ ಆಗಿದೆ ಎಂದು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಹೇಳಿದರು.[ಕಿರಾಣಿ ವ್ಯಾಪಾರಿ ಮಗ ಯುಪಿಎಸ್ಸಿ ಸಾಧಕ ಕಿಶೋರ್]

ಸಿದ್ದಾರ್ಥ ಎಜುಕೇಷನಲ್ ಅಂಡ್ ಕಲ್ಚರಲ್ ಡೆವಲಪ್ಮೆಂಟ್ ಅಸೋಸಿಯೇಷನ್ ನಿಂದ ಆಯೋಜಿಸಿದ್ದ ಯುಪಿಎಸ್ಸಿ ಅಭಿನಂದನಾ ಸಮಾರಂಭದಲ್ಲಿ ತಮ್ಮ ನೋವನ್ನು ತೋಡಿಕೊಂಡರು.

ಸರಕಾರದಲ್ಲಿ ಮಹಿಳೆರೆಂದರೆ ಅದರಲ್ಲೂ ದಲಿತ ಮಹಿಳೆಯರೆಂದರೆ ಉನ್ನತ ಹುದ್ದೆಗಳನ್ನು ಅಲಂಕರಿಸುವುದು ತುಂಬಾ ಕಷ್ಟ. ಮಹಿಳೆಯರೆಂದರೆ ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ಕನ್ನಡ ಸಂಸ್ಕೃತಿಯಂತಹ ಇಲಾಖೆಗಳನ್ನು ನೀಡುತ್ತಾರೆ. ಅದೇ ಪುರುಷ ಅಧಿಕಾರಿಗಳಿಗೆ ಹಣಕಾಸು, ಕೈಗಾರಿಕೆ, ಕಂದಾಯ ಸೇರಿದಂತೆ ಪ್ರಮುಖ ಇಲಾಖೆಗಳನ್ನು ನೀಡಲಾಗುತ್ತದೆ. ಈ ವಿಚಾರದಲ್ಲಿ ನಾನು ತೀರಾ ಕೆಟ್ಟ ಸಂಧರ್ಭ ಅನುಭವಿಸಿದ್ದೇನೆ ಎಂದು ನೋವಿನಿಂದ ನುಡಿದರು. [ರೈತನ ಮಗಳು ಮಿಶಲ್ ಯುಪಿಎಸ್ಸಿ ಸಾಧಕಿ!]

ಟೀನಾ ದಾಬಿ ಮಹಿಳೆ ಅದರಲ್ಲೂ ದಲಿತ ಮಹಿಳೆಯಾಗಿ ಮುಂದೆ ನಾಗರೀಕ ಸೇವೆಗೆ ಹೋಗುತ್ತಿರುವುದು ಹೆಚ್ಚು ಎಚ್ಚರಿಕೆ ವಹಿಸಬೇಕು, ಯಾಕೆಂದರೆ ಟಾಪ್ ಶ್ರೇಯಾಂಕ ಸಾಧನೆ ಮಾಡಿರುವುದುರಿಂದ ಸರಕಾರ ಹಾಗೂ ಜನರ ನೀರಿಕ್ಷೆ ಹೆಚ್ಚಾಗಿರುತ್ತದೆ. ಆದ್ದರಿಂದ ಟೀನಾ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ ಎಂದು ಸಲಹೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಟೀನಾ ದಾಬಿ

ಸನ್ಮಾನ ಸ್ವೀಕರಿಸಿ ಮಾತನಾಡಿದ ಟೀನಾ ದಾಬಿ

ಸನ್ಮಾನ ಸ್ವೀಕರಿಸಿ ಮಾತನಾಡಿದ ಟೀನಾ ದಾಬಿ, ನನ್ನ ಸಾಧನೆಗೆ ನನ್ನಂಥವರ ಸಾಧನೆಯ ಹಿಂದೆ ಬಹಳ ದೊಡ್ಡವರಿದ್ದಾರೆ. ಅದರಲ್ಲಿ ಅಂಬೇಡ್ಕರ್ ಅವರ ಸಾಧನೆ ಈ ಸಾಧನೆಗೆ ಪ್ರೇರಣೆ ಎಂದು ನುಡಿದರು. ಅಂಬೇಡ್ಕರ್ ರವರು ತೀರಾ ವಿಷಮ ಪರಿಸ್ಥಿತಿಯಲ್ಲಿ ಸಮಾಜದ ಎಲ್ಲಾ ವರ್ಗದವರಿಗೂ ಶ್ರಮಿಸಿ ಸಾಧನೆ ಮಾಡಿದರು,

ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆ ಸಂವಿಧಾನ

ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆ ಸಂವಿಧಾನ

ನಮ್ಮಲ್ಲಿ ಎಲ್ಲಾ ಸೌಲಭ್ಯಗಳಿದ್ದೂ ಯಾಕೆ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು. ಅದ್ದರಿಂದ ನಿರಾಸೆ ಆವರಿಸಿದರೆ ತಕ್ಷಣ ಅಂಬೇಡ್ಕರ್ ಅವರನ್ನು ನೆನೆಪಿಸಿಕೊಂಡು ಅವರು ಎದುರಿಸಿದ ಪರಿಸ್ಥಿತಿಯ ಮುಂದೆ ತಮ್ಮ ಪರಿಸ್ಥಿತಿಯನ್ನು ಪರಿಶೀಲಿಸಿ. ಅಂಬೇಡ್ಕರ್ ಅವರು ಅಸಮಾನತೆ ಹಿಂಸೆ ಬಹಿಷ್ಕಾರಗಳು ಅನುಭವಿಸಿದ್ದರೂ ಕೂಡಾ ಸಂವಿಧಾನ ರಚನೆ ಮಾಡುವಾಗ ಅವರು ಎಲ್ಲಿಯೂ ಆ ಸೇಡನ್ನು ತೀರಿಸಿಕೊಳ್ಳಲಿಲ್ಲ. ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆ ಸಂವಿಧಾನ ರಚಿಸಿದ್ದಾರೆ ಇದಕ್ಕಿಂತಾ ಸಾಧನೆ ಇಲ್ಲ.

 ಬಿಬಿಎಂಪಿ ಮಾಜಿ ಆಯುಕ್ತ,ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ

ಬಿಬಿಎಂಪಿ ಮಾಜಿ ಆಯುಕ್ತ,ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ

ಬಿಬಿಎಂಪಿ ಮಾಜಿ ಆಯುಕ್ತ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ, 65 ವರ್ಷದ ಐ.ಎ.ಎಸ್ ಇತಿಹಾಸದಲ್ಲಿ ಮೊದಲ ಬಾರಿಗೆ ದಲಿತ ಮಹಿಳೆಯೊಬ್ಬಳು ಮೊದಲ Rank ಪಡೆಯುವ ಮೂಲಕ ಡಾ. ಬಿ ಆರ್ ಅಂಬೇಡ್ಕರ್ ಅವರ ಕನಸನ್ನು ನನಸುಗೊಳಿಸಿದ್ದಾರೆ.

ದೇಶಾದ್ಯಂತ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿಯನ್ನು ರದ್ದುಗೊಳಿಸುವ ಚರ್ಚೆಗಳು ನಡೆಯುತ್ತಿವೆ. ಹಿಂದುಳಿದ ಜನಾಂಗದವರು ತಾವಾಗಿಯೇ ಮೀಸಲಾತಿ ಬೇಡ ಎನ್ನುವವರೆಗೂ ಇದು ಮುಂದುವರೆಯವುದು ಒಳ್ಳೆಯದು ಎಂದರು.

ಐ.ಎ.ಎಸ್ ಅಧಿಕಾರಿ ಡಾ. ರಾಜಶೇಖರ್ ಮಾತನಾಡಿ

ಐ.ಎ.ಎಸ್ ಅಧಿಕಾರಿ ಡಾ. ರಾಜಶೇಖರ್ ಮಾತನಾಡಿ

ಟಿನಾ ದಾಬಿ ಅವರು ಇಂತಹ ಅತ್ಯುನ್ನತ ಸಾಧನೆಯನ್ನು ಮಾಡುವ ಮೂಲಕ ದಲಿತ ಜನಾಂಗದ ಮುಂಬರುವ ಪೀಳಿಗೆಗೆ ಹೊಸದೊಂದು ಗುರಿಯನ್ನು ಹಾಕಿಕೊಟ್ಟಿದ್ದಾರೆ. ಸರಿಯಾದ ಗುರಿ ಹಾಗೂ ಅಧ್ಯಯನದಿಂದ ಯಾವ ಪರೀಕ್ಷೆಯನ್ನಾದರೂ ಎದುರಿಸಬಹುದು ಎನ್ನುವುದನ್ನು ನಾವು ನಮ್ಮ ಮಕ್ಕಳಿಗೆ ಹೇಳಿಕೊಡುವ ಅಗತ್ಯವಿದೆ. ಟಿನಾ ದಾಬಿ ಅವರ ಸಾಧನೆಯನ್ನು ಹಾದಿಯನ್ನು ನಮ್ಮ ಮಕ್ಕಳಿಗೆ ತೋರಿಸುವುದು ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಯಾರು ಯಾರು ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ಯಾರು ಯಾರು ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ, ನಿವೃತ್ತ ಐಪಿಎಸ್ ಸುಭಾಷ್ ಭರಣಿ, ಅಸೋಷಿಯೇಶನ್ ಅಧ್ಯಕ್ಷೆ ಧನಲಕ್ಷ್ಮಿ ಬಸವರಾಜ್, ನಿವೃತ್ತ ಮುಖ್ಯ ಕಾರ್ಯದರ್ಶಿ ತಂಗರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.

English summary
Tina Dabi of Delhi, topper of Civil Services Examination, 2015 felicitated by Siddartha Educational and Cultural Development Association , Rajajinagar, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X