ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಉಪಾಸನಾ ಟ್ರಸ್ಟ್ ನಿಂದ 'ಮನೆಯಂಗಳದಲ್ಲಿ ಭಾವಗೀತೆ'

ಉಪಾಸನಾ ಟ್ರಸ್ಟ್ ನಡೆಸುವ ತಿಂಗಳ ಕಾರ್ಯಕ್ರಮದ 32 ನೇ ಹೆಜ್ಜೆಯಾದ 'ಮನೆಯಂಗಳದಲ್ಲಿ ಭಾವಗೀತೆ' ಕಾರ್ಯಕ್ರಮಕ್ಕೆ ಸಹೃದಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಆಶೀರ್ವದಿಸುವಂತೆ ಕೋರಲಾಗಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 19: ಒಂದಲ್ಲ ಒಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತ, ಕಲೆ-ಸಂಸ್ಕೃತಿಯ ಪ್ರಚಾರದಲ್ಲಿ ತೊಡಗಿರುವ ಉಪಾಸನಾ ಟ್ರಸ್ಟ್ ಇದೀಗ ಮತ್ತೊಂದು ಕಾರ್ಯಕ್ರಮಕ್ಕೆ ಮುಂದಾಗಿದೆ. ಕನ್ನಡದ ಭಾವಗೀತೆಗಳನ್ನು ಹೆಚ್ಚು ಜನರಿಗೆ ತಲುಪಿಸುವುದಕ್ಕಾಗಿ 'ಮನೆಯಂಗಳದಲ್ಲಿ ಭಾವಗೀತೆ' ಎಂಬ ಕಾರ್ಯಕ್ರಮವನ್ನು ನಡೆಸುತ್ತಿದೆ.

ಏಪ್ರಿಲ್ 23, ಭಾನುವಾರ ಸಂಜೆ 6 ಗಂಟೆಗೆ ಬನಶಂಕರಿ ಮೂರನೇ ಹಂತದ ವಿದ್ಯಾನಗರ ಬಸ್ ಸ್ಟ್ಯಾಂಡ್ ಬಳಿ ಇರುವ ಎಚ್.ಆರ್.ವೆಂಕಟೇಶ್ (ಅರವಿಂದ್) ಎಂಬುವವರ ಮನೆಯಂಗಳದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

Upasana Trust's Maneyangaladalli Bhavageete will be on 23rd April

ಉಪಾಸನಾ ಮೋಹನ್, ವಿಶ್ವಾಸ್ ವಸಿಷ್ಠ, ಪೂಜಾ ತಾಯೂರ್, ಶ್ಲಾಘ್ಯ ವಸಿಷ್ಠ, ಮೇಘನಾ ಭಟ್, ಎಸ್. ಅಕ್ಷಯ್ ಮುಂತಾದ ಗಾಯಕರು ಮನೆಯಂಗಳದಲ್ಲಿ ಭಾವಗೀತೆ ಕಾರ್ಯಕ್ರಮದಲ್ಲಿ ಕನ್ನಡ ಭಾವಗೀತೆಗಳನ್ನು ಹಾಡಿ ಜನರ ಮೆಚ್ಚುಗೆ ಗಳಿಸಲಿದ್ದಾರೆ.

ಉಪಾಸನಾ ಟ್ರಸ್ಟ್ ನಡೆಸುವ ತಿಂಗಳ ಕಾರ್ಯಕ್ರಮದ 32 ನೇ ಹೆಜ್ಜೆ ಇದಾಗಿದ್ದು, ಸಹೃದಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಆಶೀರ್ವದಿಸುವಂತೆ ಕೋರಲಾಗಿದೆ.

English summary
Upasana trust of Bengaluru which is a leading cultural trust is has organised a cultural programme named, Maneyangaladalli Bhavageete. The programme will be held on 23rd April, Sunday at 6 pm in H.R.venkatesh's house which is in Banashankari 3rd stage
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X