ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಜೆಸಿಬಿಗಳ ಘರ್ಜನೆಗೆ ತಾತ್ಕಾಲಿಕ ತಡೆ

|
Google Oneindia Kannada News

ಬೆಂಗಳೂರು, ಮೇ 7 : ಬೆಂಗಳೂರು ನಗರದಲ್ಲಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಉಪಲೋಕಾಯುಕ್ತರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸರ್ಕಾರ ಒತ್ತುವರಿ ಕಾರ್ಯಾಚರಣೆ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳುವ ತನಕ ಜೆಸಿಬಿಗಳ ಘರ್ಜನೆಗೆ ತಡೆ ಬೀಳಲಿದೆ.

ಬುಧವಾರ ಕೆರೆ ಜಾಗ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಕಂದಾಯ ಇಲಾಖೆ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಉಪಲೋಕಾಯುಕ್ತ ಸುಭಾಷ್‌ ಬಿ.ಅಡಿ ಅವರು ಈ ಸೂಚನೆ ನೀಡಿದ್ದಾರೆ. [ಡಿಸಿ ಶಂಕರ್ ದಿಟ್ಟ ನೆಡೆ, ಒತ್ತುವರಿ ತೆರವು]

Lake

ಹೈಕೋರ್ಟ್ ಆದೇಶದಂತೆ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಆದರೆ, ಕೋರ್ಟ್ ನಿಗದಿತ ಕಾಲಮಿತಿ ನಿಗದಿಪಡಿಸಿಲ್ಲ. ಆದ್ದರಿಂದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ ಎಂದು ಸುಭಾಷ್ ಬಿ.ಅಡಿ ತಿಳಿಸಿದರು. [ಬೆಂಗಳೂರು : ವಾಸದ ಮನೆ ಒತ್ತುವರಿ ತೆರವಿಲ್ಲ]

ಪ್ರಶ್ನೆಗಳಿಗೆ ಉತ್ತರ ಬೇಕು : ಕೆರೆ ಒತ್ತುವರಿ ಮಾಡಲು ಕಾರಣ ಯಾರು?, ಬಿಬಿಎಂಪಿಯಿಂದ ಖಾತಾ ನೀಡಿರುವವರು ಯಾರು?, ಬಿಡಿಎ ಹೇಗೆ ನಿವೇಶನ ಹಂಚಿಕೆ ಮಾಡಿದೆ? ಮುಂತಾದ ಪ್ರಶ್ನೆಗಳನ್ನು ಉಪ ಲೋಕಾಯುಕ್ತರು ಸಭೆಯಲ್ಲಿ ಕೇಳಿದರು. [ಜೆಸಿಬಿ ಘರ್ಜನೆ ವಿರುದ್ಧ ಹೋರಾಟ ಆರಂಭಿಸಿದ ಬಿಜೆಪಿ]

ಕೆರೆಗಳು ಒತ್ತುವರಿಯಾದ ಜಾಗದಲ್ಲಿರುವ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ವಸತಿ ಪ್ರದೇಶಗಳನ್ನು ತೆರವುಗೊಳಿಸಲಾಗುತ್ತದೆಯೇ?, ವಸತಿ ಪ್ರದೇಶದಲ್ಲಿರುವವರಿಗೆ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗುತ್ತದೆಯೇ? ಎಂಬ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರಗಳನ್ನು ಕೈಗೊಂಡಿದಿದೆಯೇ? ಎಂದು ಉಪ ಲೋಕಾಯುಕ್ತರು ಪ್ರಶ್ನಿಸಿದರು.

ಆದರೆ, ಈ ಪ್ರಶ್ನೆಗಳ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅಧಿಕಾರಿಗಳು ಸಭೆಯಲ್ಲಿ ವಿವರಣೆ ನೀಡಿದರು. ಹಾಗಾದರೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳುವ ತನಕ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಎಂದು ಉಪ ಲೋಕಾಯುಕ್ತರು ಸೂಚನೆ ನೀಡಿದರು.

ಇಂದು ಅಂತಿಮ ತೀರ್ಮಾನ : ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ತೆರವು ಕಾರ್ಯಾಚರಣೆ ಕುರಿತು ವಿವರವಾದ ಚರ್ಚೆ ನಡೆಯಲಿದೆ. ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ತನಕ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ.

ಸದನ ಸಮಿತಿ ವರದಿ ಬರಬೇಕು : ಕೆರೆ ಒತ್ತುವರಿ ಬಗ್ಗೆ ವರದಿ ನೀಡಲು ಕಾಂಗ್ರೆಸ್ ಶಾಸಕ ಕೆ.ಬಿ.ಕೋಳಿವಾಡ ಅವರ ಅಧ್ಯಕ್ಷತೆಯಲ್ಲಿ ಸದನ ಸಮಿತಿಯನ್ನು ರಚನೆ ಮಾಡಲಾಗಿದೆ. ಎಷ್ಟು ಕೆರೆಗಳು ಒತ್ತುವರಿಯಾಗಿದೆ, ಪ್ರಮುಖ ಕಾರಣ ಯಾರು?, ಕಾರ್ಯಾಚರಣೆ ಹೇಗೆ? ಮುಂತಾದ ಮಾಹಿತಿಗಳನ್ನು ಒಳಗೊಂಡ ವಿವರವಾದ ವರದಿಯನ್ನು ಜೂನ್‌ 5ರಂದು ನೀಡುವಂತೆ ಉಪಲೋಕಾಯುಕ್ತರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

English summary
Karnataka Upalokayukta Subhash B. Adi directed to stop demolition of illegal constructions on lake beds in Bengaluru till the legislature panel submits its report on encroachments and government to take dissension on compensation and rehabilitation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X