ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ವಿಭಜನೆ ಪ್ರಸ್ತಾಪ ಸ್ವೀಕರಿಸಿದ ಸರ್ಕಾರ!

|
Google Oneindia Kannada News

ಬೆಂಗಳೂರು, ಸೆ.25 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಎರಡು ಅಥವ ಮೂರು ಭಾಗಗಳಾಗಿ ವಿಂಗಡಿಸುವ ಕಾರ್ಯಕ್ಕೆ ಮತ್ತೊಮ್ಮೆ ಚಾಲನೆ ಸಿಕ್ಕಿದೆ. ಬಿಬಿಎಂಪಿ ವಿಭಜನೆ ಕುರಿತು ವರದಿ ನೀಡುವಂತೆ ರಚಿಸಿದ್ದ ಸಮಿತಿ ವಿಭಜನೆಗೆ ಹಸಿರು ನಿಶಾನೆ ತೋರಿದೆ.

ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಈ ಕುರಿತು ಮಾಹಿತಿ ನೀಡಿದ್ದು, 850 ಚ.ಕಿ.ಮೀ ವ್ಯಾಪ್ತಿಯ ಬಿಬಿಎಂಪಿಯನ್ನು ಎರಡು ಅಥವ ಮೂರು ಭಾಗಗಳಾಗಿ ವಿಂಗಡಿಸಬೇಕು ಎಂದು ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ ಎಂದು ಹೇಳಿದ್ದಾರೆ.

bbmp

ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂಪಿಯ ಮಾಜಿ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿದ್ದ ಸರ್ಕಾರ, ಆಡಳಿತ ಹಿತದೃಷ್ಟಿಯಿಂದ ಬಿಬಿಎಂಪಿ ವಿಭಜನೆ ಮಾಡುವ ಕುರಿತು ವರದಿ ನೀಡುವಂತೆ ಸಮಿತಿಗೆ ಸೂಚಿಸಿತ್ತು. ಸದ್ಯ ಸಮಿತಿ ವಿಭಜನೆಗೆ ಅಸ್ತು ಎಂದಿದೆ.

ನಗರಾಭಿವೃದ್ಧಿ ಇಲಾಖೆಗೆ ಸಮಿತಿ ಈ ಕುರಿತು ವರದಿ ನೀಡಿದ್ದು, ಬಿಬಿಎಂಪಿ ವಿಭಜಿಸಿದರೆ, ಆಡಳಿತಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ. ಈ ವರದಿ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಲಾಗುವುದು ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಬೆಂಗಳೂರು ಮಹಾನಗರ ಬೆಳೆಯುತ್ತಿದ್ದು, ಒಬ್ಬರು ಆಯುಕ್ತರು ಮತ್ತು ಮೇಯರ್ ಗಳಿಂದ ಇದನ್ನು ನಿರ್ವಹಿಸುವುದು ಕಷ್ಟ ಎಂಬ ಮಾತುಗಳು ಕೇಳಿಬಂದಿತ್ತು. ಕೆಲವು ದಿನಗಳ ಹಿಂದೆಯೂ ಸಿಎಂ ಸಿದ್ದರಾಮಯ್ಯ ಬಿಬಿಎಂಪಿ ವಿಭಜನೆ ಕುರಿತು ಮಾತನಾಡಿದ್ದರು. (ಬಿಬಿಎಂಪಿ ವಿಭಜನೆಯ ಸುಳಿವು ಕೊಟ್ಟ ಸಿದ್ದರಾಮಯ್ಯ?)

ಬಿಬಿಎಂಪಿ ಎರಡು ಅಥಮ ಮೂರು ಭಾಗಗಳಾಗಿ ವಿಭಜನೆ ಆದರೆ, ಅಷ್ಟು ಮೇಯರ್ ಮತ್ತು ಆಯುಕ್ತರು ನೇಮಕವಾಗುತ್ತಾರೆ. ಆಗ 198 ವಾರ್ಡ್ ಗಳ ಉಸ್ತುವಾರಿ ನೋಡಿಕೊಳ್ಳುವುದು ಸುಲಭವಾಗಲಿದೆ. ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ಹೊಸ ವಾರ್ಡ್ ಗಳನ್ನು ಬಿಬಿಎಂಪಿಗೆ ಸೇರಿಸಿಕೊಳ್ಳಬಹುದು ಎಂದು ಸಮಿತಿ ಹೇಳಿದೆ.

ಪಾಲಿಕೆಗೆ ಆದಾಯ ಸಂಗ್ರಣೆಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ಬಿಬಿಎಂಪಿಯನ್ನು ವಿಭಜಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ಹೇಳಿದರು. ಸದ್ಯ ಆಯ್ಕೆಯಾಗಿರುವ ಸದಸ್ಯರ ಒಂದೂವರೆ ವರ್ಷದ ಅವಧಿ ಪೂರ್ಣಗೊಂಡ ನಂತರ ವಿಭಜನೆ ಮಾಡಲು ಉದ್ದೇಶಿಸಲಾಗಿದೆ ಎಂದರು.

99 ವಾರ್ಡ್ ಗಳನ್ನು ಪ್ರತ್ಯೇಕಿಸಿ ಎರಡು ಅಥವ ಮೂರು ವಿಭಾಗಗಳಾಗಿ ಬಿಬಿಎಂಪಿಯನ್ನು ವಿಭಜಿಸಲು ಸಮಿತಿ ಸಲಹೆ ನೀಡಿದೆ. ಸರ್ಕಾರ ಮತ್ತು ನಗರಾಭಿವೃದ್ಧಿ ವರದಿಗೆ ಹಸಿರು ನಿಶಾನೆ ತೋರಿದರೆ, ಬಿಬಿಎಂಪಿ ವಿಭಜನೆಯಾಗುವುದು ಖಂಡಿತ.

English summary
The Karnataka government has finally seen the logic of small is efficient. The unwieldy Bruhat Bengaluru Mahanagara Palike (BBMP), with an 850-sq km jurisdiction, is all set to be divided into two to three corporations. The idea behind this is better management of affairs and addressing citizens problems effectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X