ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋದಲ್ಲಿ ತ್ರಿಭಾಷಾ ಸೂತ್ರ: ಸದಾನಂದ ಗೌಡರ ಹಿಂದಿ ವ್ಯಾಮೋಹ?

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಸಂಬಂಧ ಗುರುವಾರ (ಜು6) ಕರೆಯಲಾಗಿದ್ದ ಸಭೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದೇ ಮುಂದೂಡಲ್ಪಟ್ಟಿದೆ. ಸದಾನಂದ ಗೌಡ ಈಗಿರುವ ಹಿಂದಿ ಸೇರಿದಂತೆ ಮೂರು ಭಾಷೆಗಳನ್ನು ಬಳಸುವುದಕ್ಕೆ ಒಲವು ತೋರಿದರೆ, ಕೆ ಜೆ ಜಾರ್

|
Google Oneindia Kannada News

ಬೆಂಗಳೂರು, ಜುಲೈ 7: ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಸಂಬಂಧ ಗುರುವಾರ (ಜು6) ಕರೆಯಲಾಗಿದ್ದ ಸಭೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದೇ ಮುಂದೂಡಲ್ಪಟ್ಟಿದೆ.

ನಮ್ಮ ಮೆಟ್ರೋದಲ್ಲಿ ಪಾಲಿಸಲಾಗುತ್ತಿರುವ ತ್ರಿಭಾಷಾ ಸೂತ್ರದ ಬಗ್ಗೆ ಕೇಂದ್ರ ಮತ್ತು ರಾಜ್ಯದ ಪ್ರತಿನಿಧಿಗಳು ಗುರುವಾರ ಸಭೆ ಸೇರಿದ್ದರು. ಕೇಂದ್ರದ ಪ್ರತಿನಿಧಿಯಾಗಿ ಸಚಿವ ಸದಾನಂದ ಗೌಡ, ರಾಜ್ಯದ ಪ್ರತಿನಿಧಿಯಾಗಿ ಕೆ ಜೆ ಜಾರ್ಜ್ ಮತ್ತು ಸಂಸದ ಪಿ ಸಿ ಮೋಹನ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

ನಮ್ಮ ಮೆಟ್ರೋ ಹಿಂದಿ ಬೋರ್ಡ್ ಗೆ ಬಿತ್ತು ಮಸಿನಮ್ಮ ಮೆಟ್ರೋ ಹಿಂದಿ ಬೋರ್ಡ್ ಗೆ ಬಿತ್ತು ಮಸಿ

ಕೇಂದ್ರ ಸಚಿವ ಸದಾನಂದ ಗೌಡ ಈಗಿರುವ ಹಿಂದಿ ಸೇರಿದಂತೆ ಮೂರು ಭಾಷೆಗಳನ್ನು ಬಳಸುವುದಕ್ಕೆ ಒಲವು ತೋರಿದರೆ, ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ ಜೆ ಜಾರ್ಜ್ ಕನ್ನಡ ಮತ್ತು ಇಂಗ್ಲಿಷ್ ಭಾಷೆ ಇದ್ದರೆ ಸಾಕು ಎನ್ನುವ ನಿಲುವು ತಾಳಿದ್ದಾರೆ.

Union and State government fail to reach consensus on Hindi board in Namma Metro

ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ #NammaMetroHindiBeda ಅಭಿಯಾನ ಗೊಂದಲದಿಂದ ಕೂಡಿದ್ದು, ಮಾಧ್ಯಮಗಳು ಇದಕ್ಕೆ ಹೈಪ್ ನೀಡುತ್ತಿವೆ ಎಂದು ಸದಾನಂದ ಗೌಡ ಅಭಿಪ್ರಾಯ ಪಟ್ಟಿದ್ದಾರೆ.

ಕೇಂದ್ರದ ಸಚಿವನಾಗಿ ನಮ್ಮ ಮೆಟ್ರೋದಲ್ಲಿ ಮೂರು ಭಾಷೆ ಬಳಸುವುದಕ್ಕೆ ನನ್ನ ಅಭ್ಯಂತರವಿಲ್ಲ. ಕನ್ನಡ, ಜೊತೆಗೆ ಹಿಂದಿಯನ್ನು ಬಹಳಷ್ಟು ರಾಜ್ಯಗಳಲ್ಲಿ ಬಳಸಲಾಗುತ್ತದೆ, ಜೊತೆಗೆ ಇಂಗ್ಲಿಷ್ ಅಂತರಾಷ್ಟ್ರೀಯ ಭಾಷೆಯಾಗಿರುವುದರಿಂದ ಮೂರು ಭಾಷೆಯಿದ್ದರೆ ತಪ್ಪಿಲ್ಲ ಎನ್ನುವ ಹೇಳಿಕೆಯನ್ನು ಸದಾನಂದ ಗೌಡ ನೀಡಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ನಮ್ಮ ಮೆಟ್ರೋದಲ್ಲಿ ಹಿಂದಿ ಬಳಸುವುದಕ್ಕೆ ನಮ್ಮ ವಿರೋಧವಿದೆ, ಸಿದ್ದರಾಮಯ್ಯ ನವದೆಹಲಿಗೆ ಇತ್ತೀಚೆಗೆ ಭೇಟಿ ನೀಡಿದ್ದ ವೇಳೆ, ಕನ್ನಡ ಮತ್ತು ಇಂಗ್ಲಿಷ್ ಮಾತ್ರ ಸಾಕು ಎನ್ನುವ ಹೇಳಿಕೆಯನ್ನು ನೀಡಿದ್ದಾರೆಂದು ಕೆ ಜೆ ಜಾರ್ಜ್ ಸ್ಪಷ್ಟ ಪಡಿಸಿದ್ದಾರೆ.

English summary
Union and State government fail to reach consensus on Hindi board in Namma Metro. Sadananda Gowda is of the opinion that there should be a three-language policy, KJ George does not want Hindi signs in Namma Metro at all.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X