ಬೆಳ್ಳಂದೂರು ಕಟ್ಟಡ ಕುಸಿತ: ಓನರ್, ಕಂಟ್ರ್ಯಾಕ್ಟರ್ ಬಂಧನ

By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 05: ಬೆಳ್ಳಂದೂರು ಗೇಟ್ ಮಾರತ್ತಹಳ್ಳಿ ರಿಂಗ್ ರಸ್ತೆ, ಇಕೋ ಸ್ಪೇಸ್ ಹತ್ತಿರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದಿರುವ ಘಟನೆಯಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 4ಕ್ಕೇರಿದೆ. ಈ ನಡುವೆ ಕಟ್ಟಡದ ಮಾಲೀಕ ಹಾಗೂ ಗುತ್ತಿಗೆದಾರನನ್ನು ಎಚ್ ಎಸ್ ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಗುರುವಾರದ ಅಪ್ಡೇಟ್ಸ್ ಹೀಗಿದೆ:

ಬುಧವಾರ ಮಧ್ಯಾಹ್ನ 16 ಜನ ಇದ್ದ ಮಾಹಿತಿ ಅಗ್ನಿಶಾಮಕದಳಕ್ಕೆ ಸಿಕ್ಕಿತು. 3 ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ತೀವ್ರವಾಗಿ ಗಾಯಗೊಂಡ ಓರ್ವ ವ್ಯಕ್ತಿ ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. [ಬೆಳ್ಳಂದೂರು ಕಟ್ಟಡ ಕುಸಿತ: ಅಗ್ನಿ ಶಾಮಕದ ಸಿಬ್ಬಂದಿಗೆ ಶ್ಲಾಘನೆ]

ಅವಶೇಷಗಳ ಅಡಿಯಲ್ಲಿ ಇನ್ನೂ 6 ಮಂದಿ ಇರುವ ಶಂಕೆ ವ್ಯಕ್ತವಾಗಿದೆ. ಒಟ್ಟು 6 ಜನರನ್ನು ರಕ್ಷಣೆ ಮಾಡಲಾಗಿದೆ ಎಂದುಬಿಬಿಎಂಪಿ ಮಹದೇವಪುರ ವಲಯದ ಜಂಟಿ ಆಯುಕ್ತ ಮುನಿವೀರಪ್ಪ ಹೇಳಿದ್ದಾರೆ.

ಶ್ರೀನಿವಾಸ ರೆಡ್ಡಿ ಬಂಧನ

2015ರ ಆಗಸ್ಟ್ 13ರಂದು ಅನುಮತಿ ಪಡೆದಿರುವ ವಿನಯ್ ಕುಮಾರ್ ದೋಂಗಲು, ಶ್ರೀನಿವಾಸ ರೆಡ್ಡಿ ಅವರು 6 ತಿಂಗಳ ಹಿಂದೆ ಕಾಮಗಾರಿ ಆರಂಭಿಸಿದ್ದರು. [ಗ್ಯಾಲರಿ: ಬೆಳ್ಳಂದೂರು ಕಟ್ಟಡ ಕುಸಿತದ ಅವಶೇಷಗಳು]

3 ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ

16 ಜನ ಇದ್ದ ಮಾಹಿತಿ ಅಗ್ನಿಶಾಮಕದಳಕ್ಕೆ ಸಿಕ್ಕಿತು. 3 ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ತೀವ್ರವಾಗಿ ಗಾಯಗೊಂಡ ಓರ್ವ ವ್ಯಕ್ತಿ ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ

ನಿರ್ಮಾಣದ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿರುವ ಶಂಕೆ ವ್ಯಕ್ತವಾಗಿದೆ. 3 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು 5 ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತೇನೆ. ಮೇಯರ್ ಜತೆಗೂ ಮಾತನಾಡುತ್ತೇನೆ ಎಂದ ಶಾಸಕ ರಘು ಆಚಾರ್

ಕಟ್ಟಡ ಕುಸಿತ: ಅಧಿಕಾರಿಗಳನ್ನು ವಜಾ ಮಾಡಿದ ಮೇಯರ್

ಮಹದೇವಪುರ ವಲಯದ ಬಿಬಿಎಂಪಿ ಸಹಾಯಕ ಇಂಜಿನಿಯರ್(ಎಇ) ರಾಘವೇಂದ್ರ, ಎಇಇ ಕೋದಂಡ ರೆಡ್ಡಿ ಸಸ್ಪೆಂಡ್ ಮಾಡಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಅದೇಶ ಹೊರಡಿಸಿದ್ದಾರೆ.

ನೆರೆ ರಾಜ್ಯದವರಿಂದ ನಿರ್ಮಾಣ ಕಾರ್ಯ

ಇಲ್ಲಿನ ಬಹುತೇಕ ಅಪಾರ್ಟ್​ವೆುಂಟ್​ಗಳು ನೆರೆ ರಾಜ್ಯದವರು ಹಾಗೂ ಅನಿವಾಸಿ ಭಾರತೀಯರ ಒಡೆತನದಲ್ಲಿವೆ. ಬಿಲ್ಡರ್​ಗಳು ಭೂ ಮಾಲೀಕರ ಬಳಿ ಗುತ್ತಿಗೆ ಆಧಾರದಲ್ಲಿ ನಿವೇಶನ ಪಡೆದು ಕಟ್ಟಡಗಳನ್ನು ನಿರ್ವಿುಸುತ್ತಾರೆ ಎಂಬ ಮಾಹಿತಿ ಬಹಿರಂಗ

English summary
A Five-storey building collapsed near Bellandur gate, Eco space, Marathalli outer Ring road, Bengaluru, killing four and injuring several others said. Bengaluru Additional Police Commissioner P Harikrishnan told reporters.
Please Wait while comments are loading...