ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಗನವಾಡಿ ಕಾರ್ಯಕರ್ತೆಯರ U ಟರ್ನ್, ಧರಣಿ ವಾಪಸ್ ಇಲ್ಲ

ನಮ್ಮ ಬೇಡಿಕೆ ಇಡೇರುವ ವರೆಗೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಅಧ್ಯಕ್ಷೆ ವರಲಕ್ಷ್ಮೀ ಗುಡುಗಿದ್ದಾರೆ. ಈ ಮೂಲಕ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 21: ನಮ್ಮ ಬೇಡಿಕೆ ಇಡೇರುವ ವರೆಗೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಅಧ್ಯಕ್ಷೆ ವರಲಕ್ಷ್ಮೀ ಗುಡುಗಿದ್ದಾರೆ. ಈ ಮೂಲಕ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ದಿನದ ಪ್ರಮುಖ ಬೆಳವಣಿಗೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಹೋರಾಟ ಹಿಂತೆಗೆದುಕೊಳ್ಳಲು ತೀರ್ಮಾನಿಸಿದ್ದಾರೆ ಎನ್ನಲಾಗಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ಮುಖಂಡರ ಜತೆ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು ಧರಣಿ ಹಿಂಪಡೆಯಲು ತೀರ್ಮಾನಿಸಲಾಗಿದೆ ಎನ್ನುವ ಸುದ್ದಿ ಹೊರ ಬಿದ್ದಿತ್ತು.

ಮುಖ್ಯಮಂತ್ರಿಗಳ ಸಭೆಯಲ್ಲಿ ನಿಡುಮಾಮಿಡಿ ಶ್ರೀ, ಮರಳು ಸಿದ್ಧಪ್ಪ, ಮಾರುತಿ ಮಾನ್ಪಡೆ ಭಾಗವಹಿಸಿದ್ದರು. ಈ ಸಂದರ್ಭ ಏಪ್ರಿಲ್ 19ರಂದು ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದರು. ಉಪ ಚುನಾವಣೆ ಇರುವುದರಿಂದ ಈಗಲೇ ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದರು.[ಅನ್ನ, ನೀರು ಇಲ್ಲದೆ ಪರದಾಡಿದ ಅಂಗನವಾಡಿ ಕಾರ್ಯಕರ್ತೆಯರು!]

ಆದರೆ ಇದೆಲ್ಲಾ ಸಾಧ್ಯವಿಲ್ಲ. ನಮ್ಮ ಬೇಡಿಕೆ ಇಡೇರಿಸಲೇಬೇಕು. ಇಲ್ಲದಿದ್ದಲ್ಲಿ ಜೈಲಿಗೆ ಹಾಕಿದರೂ ಚಿಂತೆ ಇಲ್ಲ. ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ವರಲಕ್ಷ್ಮೀ ಸ್ಪಷ್ಟಪಡಿಸಿದ್ದಾರೆ.

ಉಗ್ರ ಪ್ರತಿಭಟನೆ

ಉಗ್ರ ಪ್ರತಿಭಟನೆ

ಕನಿಷ್ಠ ವೇತನ ಹೆಚ್ಚಳ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಅಂಗನವಾಡಿ ಕಾರ್ಯಕರ್ತೆರು ಧರಣಿ ಆರಂಭಿಸಿದ್ದರು. ಆದರೆ ಮಂಗಳವಾರದವರೆಗೂ ಯಾವುದೇ ಜನಪ್ರತಿನಿಧಿಗಳು ಇವರ ನೋವಿಗೆ ಸ್ಪಂದಿಸಿರಲಿಲ್ಲ.

ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಸಿಐಟಿಯುಸಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿತ್ತು.

10,000 ಕ್ಕೂ ಹೆಚ್ಚು ಕಾರ್ಯಕರ್ತೆಯರು

10,000 ಕ್ಕೂ ಹೆಚ್ಚು ಕಾರ್ಯಕರ್ತೆಯರು

ಸೋಮವಾರ ಮಧ್ಯಾಹ್ನದಿಂದ ಶೇಷಾದ್ರಿಪುರಂ ರಸ್ತೆಯಲ್ಲಿ ಈ ಪ್ರತಿಭಟನೆ ಆರಂಭವಾಗಿತ್ತು. ಪ್ರತಿಭಟನೆಯಲ್ಲಿ 10,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇದರಿಂದ ಇಲ್ಲಿನ ಸುತ್ತ ಮುತ್ತಲ ಕೆಜಿ ರಸ್ತೆ, ಆನಂದ್ ರಾವ್ ರಸ್ತೆ, ಹಡ್ಸನ್ ರಸ್ತೆಗಳಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು. ರಾತ್ರಿ ವೇಳೆಗೆ ಸಾವಿರಾರು ಪ್ರತಿಭಟನಾಕಾರರನ್ನು ಫ್ರೀಡಂ ಪಾರ್ಕ್ ಕಡೆಗೆ ಕಳಿಸಲಾಯಿತು. ರಾತ್ರಿ ಇಡಿ ರಸ್ತೆಯಲ್ಲೇ ಕಳೆದ ಮಹಿಳೆಯರು, ಮಕ್ಕಳನ್ನು ಕೇಳುವವರು ಯಾರೂ ಇರಲಿಲ್ಲ. ಅನ್ನ, ರೊಟ್ಟಿ, ಕುಡಿಯುವ ನೀರು ಇಲ್ಲದೆ ಕಾರ್ಯಕರ್ತೆಯರು ಪರದಾಡಿದರು.[ಆಹೋರಾತ್ರಿ ಧರಣಿ, ಮೂವರು ಅಂಗನವಾಡಿ ಕಾರ್ಯಕರ್ತೆಯರು ಅಸ್ವಸ್ಥ]

ಬೇಡಿಕೆಗಳೇನು?

ಬೇಡಿಕೆಗಳೇನು?

ಕನಿಷ್ಠ ವೇತನ 10 ಸಾವಿರ ರೂಪಾಯಿಗಳಿಗೆ ಏರಿಸಬೇಕು. ಸಹಾಯಕಿಯರ ವೇತನ 3 ಸಾವಿರ ರೂಪಾಯಿಯಿಂದ 7,500ಕ್ಕೇರಿಸಬೇಕು. ಮುಂಬಡ್ತಿ, ಪಿಂಚಣಿ, ಪಿಎಫ್ ಅನ್ವಯವಾಗಬೇಕು. ತಕ್ಷಣಕ್ಕೆ 1.25 ಲಕ್ಷ ಅಂಗನವಾಡಿ ಸಿಬ್ಬಂದಿಗೆ ವೇತನ ಪರಿಷ್ಕರಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.

ವಿಫಲವಾಗಿದ್ದ ಸಂಧಾನ

ವಿಫಲವಾಗಿದ್ದ ಸಂಧಾನ

ಸೋಮವಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅವರ ಮುಖಂಡರ ಜತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚರ್ಚೆ ನಡೆಸಿದ್ದರು. ಆದರೆ ಸ್ಪಷ್ಟ ತೀರ್ಮಾನಕ್ಕೆ ಸರಕಾರ ಬರದ ಹಿನ್ನಲೆಯಲ್ಲಿ ಸಂಧಾನ ಮುರಿದು ಬಿದ್ದಿತ್ತು.

ನಂತರ ಅಂಗನವಾಡಿ ಕಾರ್ಯಕರ್ತೆಯರು ಮನೆಗೆ ವಾಪಸ್ ತೆರಳಲು ನಿರಾಕರಿಸಿ ರಸ್ತೆಯಲ್ಲೇ ರಾತ್ರಿ ಇಡೀ ಮಲಗಿ ಪ್ರತಿಭಟನೆ ನಡೆಸಿದ್ದರು. ಕೊನೆಗೆ ಸರಕಾರ ಅನಿವಾರ್ಯವಾಗಿ ಇಂದು ಮತ್ತೆ ಸಂಧಾನ ಕರೆದು ಕಾರ್ಯಕರ್ತೆಯರ ಬೇಡಿಕೆ ಇಡೇರಿಸುವುದಾಗಿ ಭರವಸೆ ನೀಡಿದೆ. ಆದರೆ ಭರವಸೆಗೂ ಕಾರ್ಯಕರ್ತರು ಒಪ್ಪಿಲ್ಲ.

ಹಲವು ನಾಯಕರ ಬೆಂಬಲ

ಹಲವು ನಾಯಕರ ಬೆಂಬಲ

ಮಂಗಳವಾರ ಬೆಳಿಗ್ಗೆ ಫ್ರೀಡಂ ಪಾರ್ಕಿಗೆ ತೆರಳಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಂತ್ವನ ಹೇಳಿ, ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಅಧಿವೇಶನದಲ್ಲಿ ತಾನು ಈ ವಿಚಾರವನ್ನು ಪ್ರಸ್ತಾಪಿಸುವುದಾಗಿಯೂ ಕುಮಾರಸ್ವಾಮಿ ಈ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೇ ಪ್ರತಿಭಟನೆ ಕೈಬಿಡದಂತೆಯೂ ಕಾರ್ಯಕರ್ತೆಯರಲ್ಲಿ ಮನವಿ ಮಾಡಿಕೊಂಡಿದ್ದರು.

ಇನ್ನು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕೂಡಾ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.[ಅಂಗನವಾಡಿ ಕಾರ್ಯಕರ್ತೆಯರ ಧರಣಿ ವಾಪಸ್]

ಏಳು ಜನ ಅಸ್ವಸ್ಥ

ಏಳು ಜನ ಅಸ್ವಸ್ಥ

ಧರಣಿ ವೇಳೆ ಮಂಗಳವಾರ 5 ಜನ ಅಂಗನವಾಡಿ ಕಾರ್ಯಕರ್ತೆಯರು ಅಸ್ವಸ್ಥರಾಗಿದ್ದಾರೆ, ಈ ಮೂಲಕ ಅಸ್ವಸ್ಥರಾದವರ ಸಂಖ್ಯೆ 7ಕ್ಕೆ ಮುಟ್ಟಿದ್ದು ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಿದ್ದೂ ಸರಕಾರ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ.

ಸದನದಲ್ಲೂ ಪ್ರತಿಧ್ವನಿಸಿದ ಪ್ರತಿಭಟನೆ

ಸದನದಲ್ಲೂ ಪ್ರತಿಧ್ವನಿಸಿದ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಧರಣಿ ವಿಚಾರ ಸದನದಲ್ಲೂ ಪ್ರಸ್ತಾಪವಾಯಿತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಜಗದೀಶ್ ಶೆಟ್ಟರ್, ವೈಎಸ್ ವಿ ದತ್ತಾ ಮೊದಲಾದವರು ಧ್ವನಿ ಗೂಡಿಸಿದರು. ವಿಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ, "ಅಂಗನವಾಡಿ ಕಾರ್ಯಕರ್ತರ ಬೇಡಿಕೆ ನ್ಯಾಯುತವಾಗಿದೆ. ಮಾನವೀಯ ನೆಲೆಯಲ್ಲಿ ಅವರ ಜತೆ ನಾವಿದ್ದೇವೆ. ನಾವು ನಿರಂತರವಾಗಿ ವೇತನ ಹೆಚ್ಚಳ ಮಾಡುತ್ತಾ ಬಂದಿದ್ದೇವೆ. ಆದರೆ ಕೇಂದ್ರದ ಕೆಲವು ಸೂಚನೆಗಳನ್ನೂ ರಾಜ್ಯ ಪಾಲಿಬೇಕಾಗುತ್ತದೆ," ಎಂದು ಹೇಳಿ ನಿಧಾನಕ್ಕೆ ಬೇಡಿಕೆ ಇಡೇರಿಸಲ್ಲ ಎಂಬ ತೀರ್ಮಾನವನ್ನು ಹೊರ ಹಾಕಿದರು .ಮಾತ್ರವಲ್ಲ ಇದನ್ನು ಕೇಂದ್ರದತ್ತ ತಳ್ಳಿ ಸುಮ್ಮನಾದರು.

ಸಿದ್ದರಾಮಯ್ಯ ಹೇಳಿದ್ದೇನು?

ಸಿದ್ದರಾಮಯ್ಯ ಹೇಳಿದ್ದೇನು?

ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ "2016ರ ವರೆಗೆ ಕೇಂದ್ರ ಸರಕಾರ ಶೇಕಡಾ 90 ಹಾಗೂ ರಾಜ್ಯ ಸರಕಾರ ಶೇಕಡಾ 10 ವೇತನ ನೀಡುತ್ತಿತ್ತು. ನಂತರ ಪರಿಸ್ಥಿತಿ ಬದಲಾಯಿತು. ಈಗ ಕೇಂದ್ರದ ಪಾಲು ಶೇಕಡಾ 40ಕ್ಕೆ ಇಳಿಕೆ ಮಾಡಲಾಗಿದೆ. ನಾವು 5200 ಹಾಗೂ ಕೇಂದ್ರ 1800 ಹೀಗೆ 7,000 ನೀಡುತ್ತಿದ್ದೇವೆ. ಕಾರ್ಯಕರ್ತೆಯರ ಕಳಕಳಿ ಅರ್ಥವಾಗುತ್ತದೆ. ಆದರೆ ಇದು ಕೇಂದ್ರದ ಅನುದಾನದಲ್ಲಿಯೂ ನಡೆಯುವಂಥದ್ದು. ಹಾಗಾಗಿ ಕೇಂದ್ರ ನಿರ್ಧಾರ ಮಾಡಬೇಕು. ನಾವು ಪ್ರತೀ ವರ್ಷ 500 ರೂಪಾಯಿ ಹೆಚ್ಚಳ ಮಾಡುತ್ತಾ ಬಂದಿದ್ದೇವೆ," ಎಂದು ಹೇಳಿ ಕೈಜೆಲ್ಲಿದರು.

ಧರಣಿ ಮತ್ತಷ್ಟು ತೀವ್ರ

ಧರಣಿ ಮತ್ತಷ್ಟು ತೀವ್ರ

ಅಂಗನವಾಡಿ ಕಾರ್ಯಕರ್ತೆಯರ ಧರಣಿಗೆ ದಲಿತ ಮತ್ತು ದಮನಿತರ ಹೋರಾಟ ವೇದಿಕೆ ಬಂಬಲ ಸೂಚಿಸಿದೆ. ಜತೆಗೆ ಮಂಗಳೂರಿನಲ್ಲೂ ಒಂದಷ್ಟು ಜನ ಪ್ರತಿಭಟನೆಗೆ ಸೇರಿಕೊಳ್ಳಲು ಕಾದು ಕುಳಿತಿದ್ದು ಅವರೆಲ್ಲಾ ರೈಲಿನಲ್ಲಿ ಬಂದು ಬೆಂಗಳೂರಿಗೆ ಸೇರುವ ಸಾಧ್ಯತೆ ಇದೆ. ಇದರಿಂದ ರಾಜಧಾನಿ ಮತ್ತಷ್ಟು ಅಲ್ಲೋಲ ಕಲ್ಲೋಲವಾಗುವ ಸೂಚನೆಗಳು ಕಾಣಿಸುತ್ತಿವೆ.

English summary
Anganwadi workers taken U turn, as they will not withdraw their protest. Earlier it is said that, Anganwadi workers decided to withdraw protest after the successful meeting with chief minister Siddarmaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X